Asianet Suvarna News Asianet Suvarna News

ಗೆಳೆಯನಿಂದಲೇ ಹತ್ಯೆಯಾದ 16ರ ಬಾಲಕಿ, 20 ಬಾರಿ ಚಾಕು ಇರಿದು ಕಲ್ಲು ಎತ್ತಿಹಾಕಿ ಭೀಕರ ಕೊಲೆ!

ಬರೋಬ್ಬರಿ 20 ಬಾರಿ ಚಾಕುವಿನಿಂದ ಇರಿದ ಬಳಿಕ ತಲೆ ಮೇಲೆ ಕಲ್ಲು ಎತ್ತಿಹಾಕಿ 16 ಬಾಲಕಿಯನ್ನು ಗೆಳೆಯನೇ ಹತ್ಯೆಗೈದಿದ್ದಾನೆ. ಅಪ್ರಾಪ್ತೆ ನೆರವಿಗಾಗಿ ಚೀರಾಡಿದರೂ ಯಾರೂ ಕೂಡ ಸಹಾಯ ಮಾಡಲಿಲ್ಲ. ಭೀಕರ ಹತ್ಯೆಹಿಂದೆ ಲವ್ ಸ್ಟೋರಿ ಜಟಾಪಟಿ ಕತೆ ಬಹಿರಂಗವಾಗಿದೆ.

16 year old girl stabbed 20 times to death in public place delhi by boyfriend ckm
Author
First Published May 29, 2023, 2:50 PM IST

ದೆಹಲಿ(ಮೇ.29): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೀಕರ ಹತ್ಯೆ ನಡೆದಿದೆ. 16ರ ಬಾಲಕಿಯನ್ನು ಹಿಡಿದೆಳೆದು 20 ಬಾರಿ ಚಾಕುವಿನಿಂದ ಇರಿದು ಬಳಿಕ ತಲೆ ಮೇಲೆ ಕಲ್ಲು ಎತ್ತಿಹಾಕಿ ಗೆಳೆಯನೇ ಹತ್ಯೆ ಮಾಡಿದ ಘಟನೆ ದೆಹಲಿಯ ಶಹಬಾದ್ ಡೈರಿ ಬಳಿ ನಡೆದಿದೆ.  ನಡು ರಸ್ತೆಯಲ್ಲೇ ಈ ಘಟನೆ ನಡೆದಿದ್ದು, ಯಾರೊಬ್ಬರು ನೆರವಿಗೆ ಧಾವಿಸಿಲ್ಲ. ಇತ್ತ ಗೆಳತಿಯನ್ನ ಹತ್ಯೆ ಮಾಡಿದ ಆರೋಪಿ ಸಾಹಿಲ್ ತಲೆಮರೆಸಿಕೊಂಡಿದ್ದಾರೆ. ಭೀಕರ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಬಾಲಕಿ ಮೃತದೇಹ ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಹತ್ಯೆಯಿಂದ ಹಿಂದೆ ಲವ್ ಸ್ಟೋರಿ ಜಟಾಪಟಿ ತೆರೆದುಕೊಂಡಿದೆ.

16 ವರ್ಷದ ಬಾಲಕಿಯನ್ನು ಸಾಹಿಲ್ ಪ್ರೀತಿಸುತ್ತಿದ್ದ. ಇವರಿಬ್ಬರ ನಡುವೆ ನಿನ್ನೆ(ಮೇ.28) ಜಗಳವಾಗಿದೆ. ಸಾಹಿಲ್ ಜೊತೆ ಮಾತು ಬಿಟ್ಟಿದ್ದಾಳೆ. ಇತ್ತ ಆಕ್ರೋಶಗೊಂಡ ಸಾಹಿಲ್ ಆಕೆಯ ಮನೆಯ ಬಳಿ ಬಂದಿದ್ದ. ಈ ವೇಳೆ ಬಾಲಕಿ ತನ್ನ ಗೆಳತಿಯ ಪುತ್ರನ ಹುಟ್ಟುಹಬ್ಬ ಆಚರಣೆಗಾಗಿ ತೆರಳಿರುವ ಮಾಹಿತಿಯನ್ನು ಸಾಹಿಲ್ ಪಡೆದುಕೊಂಡಿದ್ದಾನೆ. ಹುಡುಕುತ್ತಾ ಬಂದ ಸಾಹಿಲ್‌ಗೆ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಗರ್ಲ್‌ಫ್ರೆಂಡ್ ಪತ್ತೆಯಾಗಿದ್ದಾಳೆ. ನೇರವಾಗಿ ಆಕೆಯ ಬಳಿಕ ಬಂದ ಎಳೆದು 20 ಬಾರಿ ಚಾಕುವಿನಿಂದ ಇರಿದಿದ್ದಾನೆ.

ಕಾಲಿನಿಂದ ಗೆಳೆಯನ ಕುತ್ತಿಗೆ ತುಳಿದು ಹತ್ಯೆ: ಕೊಲೆ ಬಳಿಕ ನಿದ್ದೆಗೆ ಜಾರಿದ್ದ ಹಂತಕ

ದಾರಿಯಲ್ಲಿ ಇತರರು ನಡೆದುಕೊಂಡು ಹೋಗುತ್ತಿದ್ದರೂ ಯಾರೂ ಕೂಡ ನೆರವಿಗೆ ಧಾವಿಸಿಲ್ಲ. 20 ಬಾರಿ ಚಾಕುವಿನಿಂದ ಇರದ ಸಾಹಿಲ್‌ಗೆ ಆಕೆ ಬದುಕುವ ಸಾಧ್ಯತೆ ಇದೆ ಎಂದು ಅರಿತ, ಪಕ್ಕದಲ್ಲೇ ಇದ್ದ ಕಲ್ಲನ್ನು ಆಕೆಯ ತಲೆ ಮೇಲೆ ಎತ್ತಿ ಹಾಕಿದ್ದಾನೆ. ಇತ್ತ ತೀವ್ರವಾಗಿ ಗಾಯಗೊಂಡ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಸಾಹಿಲ್ ಸ್ಥಳದಿಂದ ಪರಾರಿಯಾಗಿದ್ದಾಳೆ. ಈ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಲಕಿ ಮೃತದೇಹ ಪರಿಶೀಲಿಸಿದ್ದಾರೆ. ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. 

ಇದೀಗ ಆರೋಪಿ ಸಾಹಿಲ್‌ಗೆ ಹುಡುಕಾಟ ಆರಂಭಗೊಂಡಿದೆ. ಇತ್ತ ಆಮ್ ಆದ್ಮಿ ಪಾರ್ಟಿ ರಾಜಕೀಯ ಶುರುಮಾಡಿದೆ. ಈ ಕುರಿತು ಟ್ವೀಟ್ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಲೆಫ್ಟಿನೆಂಟ್ ಗರ್ವನರ್ ಜವಾಬ್ದಾರಿ. ಸದ್ಯ ದೆಹಲಿ ಪರಿಸ್ಥಿತಿ ಹೇಗಿದೆ. ಬಾಲಕಿ ಬರ್ಬರವಾಗಿ ಹತ್ಯೆಯಾಗಿದ್ದಾಳೆ ಎಂದು ಕುಟುಕಿದ್ದಾರೆ.  

ತುಮಕೂರಿನಲ್ಲಿ 70 ವರ್ಷದ ವೃದ್ಧೆಯ ಸಾಮೂಹಿಕ ಅತ್ಯಾಚಾರ, ವೃದ್ಧೆಯ ಅಳಿಯನ ಸ್ನೇಹಿತರಿಂದಲೇ ಕೃತ್ಯ!

ಇತ್ತ ಸಚಿವೆ ಆತಿಶಿ ಈ ಕುರಿತು ಟ್ವೀಟ್ ಮಾಡಿ, ದೆಹಲಿಯ ಜನತೆಯನ್ನು ರಕ್ಷಿಸುವ ಜವಾಬ್ದಾರಿ ಲೆಫ್ಟಿನೆಂಟ್ ಗವರ್ನರ್ ಮೇಲಿದೆ. ಆದರೆ ಗವರ್ನರ್ ಕಾನೂನು ಸುವ್ಯವಸ್ಥೆ ಕುರಿತು ಗಮನಹರಿಸುವ ಬದಲು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ದ ಹರಿಹಾಯುವ ಕೆಲಸದಲ್ಲಿ ತೊಡಗಿದ್ದಾರೆ.ದೆಹಲಿ ಜನತೆಯನ್ನು ರಕ್ಷಣೆ ನೀಡುವ ಬದಲು ಸರ್ಕಾರದ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ ಎಂದು ಅತೀಶಿ ಟ್ವೀಟ್ ಮಾಡಿದ್ದಾರೆ.

ಈ ಘಟನೆ ಸಂಬಂದ ದೆಹಲಿಯ ಆಮ್ ಆದ್ಮಿ ಸರ್ಕಾರ ಇದು ಕೇಂದ್ರ ಹಾಗೂ ಲೆಫ್ಟಿನೆಂಟ್ ಗವರ್ನರ್ ಜವಾಬ್ದಾರಿ. ಆದರೆ ಕೇಂದ್ರ ಹಾಗೂ ಲೆಫ್ಟಿನೆಂಟ್ ಗವರ್ನರ್ ಅರವಿಂದ್ ಕೇಜ್ರಿವಾಲ್ ಸರ್ಕಾರಕ್ಕೆ ಸಮಸ್ಯೆ ಮಾಡಲು ದಾರಿ ಹುಡುಕುತ್ತಿದೆ ಎಂದು ಕೆಸೆರೆರಚಾಟ ಶುರುಮಾಡಿದೆ.

Follow Us:
Download App:
  • android
  • ios