ಬರೇಲಿ(ಅ. 11)  ಉತ್ತರ ಪ್ರದೇಶದಿಂದ ಲೈಂಗಿಕ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಲೆ ಇವೆ.  ನಿರ್ಜನ ಪ್ರದೇಶದಲ್ಲಿ ಏಳು ಜನರು ತನ್ನ ಬಾಯ್ ಫ್ರೆಂಡ್ ಜತೆಗೆ ಇದ್ದ  16  ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.

ದೌರ್ಜನ್ಯ ಎಸಗುವುದನ್ನು ಪಾಪಿಗಳು ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಸೆಪ್ಟೆಂಬರ್ 21 ರಂದು ಬರೇಲಿಯ ಶೀಶ್‌ಘಡ ಪ್ರದೇಶದಲ್ಲಿ ನಡೆದ ಘಟನೆ ಬೆಳಕಿಗೆ ಬಂದಿದೆ ಅಕ್ಟೋಬರ್ 7 ರಂದು ಲೈಂಗಿಕ ದೌರ್ಜನ್ಯದ ವಿಡಿಯೋ  ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದು ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.

ಬೆಂಗಳೂರು; ಹೆಂಡತಿ ಖಾಸಗಿ ಅಂಗಕ್ಕೆ ಬೆಂಕಿ ಇಟ್ಟ ಪಾಪಿ ಗಂಡ!

ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354 (ಲೈಂಗಿಕ ದೌರ್ಜನ್ಯ), 506 (ಕ್ರಿಮಿನಲ್ ಬೆದರಿಕೆ), 342 ಅಡಿಯಲ್ಲಿ ಪೊಲೀಸರು ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೋಕ್ಸೊ ಕಾಯ್ದೆಯಡಿ  ಸಹ ಆರೋಪ ಸಲ್ಲಿಸಲಾಗಿದೆ. ಬಾಲಕಿಯ ಅಪ್ರಾಪ್ತ ವಯಸ್ಸಿನವಳಾದ  ಕಾರಣ ಆಕೆಯ  ಬಾಯ್ ಫ್ರೆಂಡ್ ಮೇಲೂ ಪ್ರಕರಣ ದಾಖಲಾಗಿದೆ.

ಘಟನೆಯ ನಂತರ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಆಕೆಯ ಕುಟುಂಬ ಹೇಳಿದೆ. ಬೆದರಿಕೆ ಹಾಕಿದ್ದರಿಂದ ಬಾಲಕಿ ಯಾರಿಗೂ ಕೃತ್ಯದ  ಬಗ್ಗೆ ಹೇಳಿರಲಿಲ್ಲ.

ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವುದು, ಆಕೆಯ ಖಾಸಗಿ ಅಂಗಗಳನ್ನು ಸ್ಪರ್ಶಿಸುತ್ತಿರುವಾಗ ವಾಳಕಿ ದಯವಿಟ್ಟು ಹೀಗೆ ಮಾಡಬೇಡಿ ಎಂದು ಕೂಗಿಕೊಳ್ಳುತ್ತಿರುವುದು ವಿಡಿಯೋದಲ್ಲಿದ್ದು ಏಳು ಜನರ ಪತ್ತೆಗೆ ತಂಡ ಇಳಿದಿದೆ.