ಬೆಂಗಳೂರು [ಜ.13]: ತಾಯಿ ಬೈದಿದ್ದಕ್ಕೆ ನೊಂದು ಬಾಲಕನೋರ್ವ ಮನೆ ಬಿಟ್ಟು ಹೋದ ಘಟನೆ ಬೆಂಗಳೂರನಲ್ಲಿ ನಡೆದಿದೆ. 

ಬೆಂಗಳೂರಿನ ಚೋಳರಪಾಳ್ಯದ 16 ವರ್ಷದ ಗಗನ್ ಮನೆ ಬಿಟ್ಟು ಹೋಗಿದ್ದಾನೆ. ಜನವರಿ 9 ರಂದು ಗಗನ್ ಬೈಕಿನಿಂದ ಬಿದ್ದಿದ್ದು, ಇದಕ್ಕೆ ತಾಯಿ ಬೈದು ಬುದ್ದಿ ಹೇಳಿದ್ದರಿಂದ ಮನೆ ಬಿಟ್ಟು ತೆರಳಿದ್ದಾನೆ. 

ಬೈಕಲ್ಲಿ ಹೋಗಿ ಬಿದ್ದಿದ್ದ ಗಗನ್ ಗೆ ತಾಯಿ ಬೈದಿದ್ದರು, ಅಂದು ರಾತ್ರಿ ಕಸ ಎಸೆದು ಬರುವುದಾಗಿ ಹೇಳಿ ಹೋದವನು ಮರಳಿ ಬರಲಿಲ್ಲ. 

ಪರೀಕ್ಷೆಯಲ್ಲಿ ಫೇಲ್‌: 300 ವಿದ್ಯಾರ್ಥಿಗಳ ಅಂಕಪಟ್ಟಿ ಕದಿಯಲು ಮುಂದಾದ ಭೂಪ!...

ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡ್ತಾ ಇದ್ದ ಗಗನ್  ಜನವರಿ 9 ರಂದು  ಮನೆ ಬಿಟ್ಟು ಹೋಗಿದ್ದು, ಈ  ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. 

ಸಿಲಿಕಾನ್ ಸಿಟಿಯಲ್ಲಿ ಖಲಿಸ್ತಾನ್ ಪ್ರತ್ಯೇಕವಾದಿ ಹೆಡೆಮುರಿ ಕಟ್ಟಿದ ಖಾಕಿ!...

ಸದ್ಯ ಈ ಸಂಬಂಧ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.