ಮಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾಳೆ ಎಂದು ಬಾಲಕಿಯ ಬಳಿಯಿದ್ದ ಮೊಬೈಲ್‌ ಫೋನ್‌ ಅನ್ನು ಕಸಿದುಕೊಂಡಿದ್ದಾರೆ. ಬಳಿಕ ಆಕೆಯ ಕುಟುಂಬದೊಂದಿಗೆ ಜಗಳವಾಡಿದ ಹದಿಹರೆಯದ ವಿದ್ಯಾರ್ಥಿನಿ ಅಸಮಾಧಾನಗೊಂಡಿದ್ದಳು ಎಂದು ಹೇಳಲಾಗಿದೆ.

 ಮುಂಬೈ (ಏಪ್ರಿಲ್ 11, 2023): ಮಗಳು ಹೆಚ್ಚಾಗಿ ಮೊಬೈಲ್‌ ಬಳಕೆ ಮಾಡುತ್ತಿದ್ದಾಳೆ ಎಂದು ಅವರ ಕುಟುಂಬ ಮಗಳಿಂದ ಫೋನ್‌ ಕಸಿದುಕೊಂಡಿದ್ದಕ್ಕೆ ಆಕೆ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಹೌದು, 7 ಅಂತಸ್ತಿನ ಕಟ್ಟಡದ ಟೆರೇಸ್‌ನಿಂದ ಹಾರಿ 15 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ಮಹಾರಾಷ್ಟ್ರ ರಾಜಧಾನಿ ಮುಂಬೈನ ಮಲಾಡ್‌ನಲ್ಲಿ ನಡೆದಿದೆ. 

ಮಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾಳೆ ಎಂದು ಬಾಲಕಿಯ ಬಳಿಯಿದ್ದ ಮೊಬೈಲ್‌ ಫೋನ್‌ ಅನ್ನು ಕಸಿದುಕೊಂಡಿದ್ದಾರೆ. ಬಳಿಕ ಆಕೆಯ ಕುಟುಂಬದೊಂದಿಗೆ ಜಗಳವಾಡಿದ ಹದಿಹರೆಯದ ವಿದ್ಯಾರ್ಥಿನಿ ಅಸಮಾಧಾನಗೊಂಡಿದ್ದಳು ಎಂದು ಹೇಳಲಾಗಿದೆ. ಅಲ್ಲದೆ, 9ನೇ ತರಗತಿ ಓದುತ್ತಿದ್ದ ಬಾಲಕಿ ಶನಿವಾರ ಮಧ್ಯಾಹ್ನ ಮಾಲ್ವಾನಿಯಲ್ಲಿರುವ ತನ್ನ ಮನೆಯಿಂದ ಓಡಿಹೋಗಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಂತರ, ಶನಿವಾರ ಸಂಜೆ 7 ಅಂತಸ್ತಿನ ಅಪಾರ್ಟ್‌ಮೆಂಟ್ ಟೆರೇಸ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನು ಓದಿ: ದೇವಸ್ಥಾನದ ಬಳಿ ಬಿರುಗಾಳಿಗೆ ಉರುಳಿದ ಬೃಹತ್‌ ಮರ: 7 ಭಕ್ತರು ಬಲಿ, 20 ಕ್ಕೂ ಹೆಚ್ಚು ಮಂದಿಗೆ ಗಾಯ

ಸಂಜೆ 6 ಗಂಟೆಗೆ ಮಲಾಡ್‌ನ ಲಿಬರ್ಟಿ ಗಾರ್ಡನ್‌ನಲ್ಲಿರುವ ಕಟ್ಟಡದ ಟೆರೇಸ್‌ನಿಂದ ಜಿಗಿದಿದ್ದಾಳೆ. ಸ್ಥಳೀಯರು ಆಕೆಯ ಶವವನ್ನು ಕಂಡು ಪೊಲೀಸರಿಗೆ ಕರೆ ಮಾಡಿ ಶತಾಬ್ದಿ ಆಸ್ಪತ್ರೆಗೆ ಸಾಗಿಸಿದರು. ಆದರೆ, ಆಸ್ಪತ್ರೆಗೆ ಬರುವ ಮುನ್ನವೇ ಆಕೆ ಮೃತಪಟ್ಟಿದ್ದಳು ಎಂದು ವೈದ್ಯರು ಘೋಷಿಸಿದ್ದಾರೆ ಎಂದು ತಿಳಿದುಬಂದಿದೆ.

“ಆ ಸಮಯದಲ್ಲಿ, ಹುಡುಗಿಯ ಗುರುತು ನಮಗೆ ತಿಳಿದಿರಲಿಲ್ಲ. ಆದ್ದರಿಂದ, ಆಕೆಯ ಕುಟುಂಬವನ್ನು ಹುಡುಕುವಲ್ಲಿ ಸಹಾಯ ಪಡೆಯಲು ನಾವು ಆಕೆಯ ಫೋಟೋವನ್ನು ನಿವಾಸಿಗಳ ನಡುವೆ ಹಂಚಿಕೊಂಡೆವು. ಬಾಲಕಿಯ ಕುಟುಂಬದವರು ಭಾನುವಾರ ನಮ್ಮನ್ನು ಸಂಪರ್ಕಿಸಿದರು, ”ಎಂದು ಮಲಾಡ್ ಪೊಲೀಸ್ ಹಿರಿಯ ಇನ್ಸ್‌ಪೆಕ್ಟರ್ ರವೀಂದ್ರ ಅದಾನೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಭಾನುವಾರ ಮಧ್ಯಾಹ್ನ ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು ಎಂದೂ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಕುಡುಕ ಪತಿ ಕಾಟಕ್ಕೆ ಬೇಸತ್ತು 3 ಮಕ್ಕಳನ್ನು ನದಿಗೆ ತಳ್ಳಿ ತಾನೂ ಆತ್ಮಹತ್ಯೆ ಮಾಡ್ಕೊಂಡ ಮಹಿಳೆ..!

ಈ ಮಧ್ಯೆ, ಕೆಲ ಸಮಯದಿಂದ ಬಾಲಕಿ ಖಿನ್ನತೆಗೆ ಒಳಗಾಗಿದ್ದಳು ಎಂದು ಕುಟುಂಬದವರು ಹೇಳಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಲ್ಲದೆ, ಈ ಮೊದಲು ಸಹ ಆಕೆ ಆತ್ಮಹತ್ಯೆಯ ಪ್ರಯತ್ನ ಮಾಡಿಕೊಂಡಿದ್ದಳು ಎಂಬುದು ಬಯಲಾಗಿದೆ. ತನ್ನ ಕೈನ ಮಣಿಕಟ್ಟು ಭಾಗವನ್ನು ಸೀಳಿ ಸಾಯಲ ಪ್ರಯತ್ನಿಸಿದ್ದಳು ಎಂದು ಪೋಷಕರು ಬಹಿರಂಗಪಡಿಸಿದ್ದಾರೆ. ಹಾಗೂ, ಕೆಲ ದಿನಗಳಿಂದ ಆಕೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಳು ಎಂದೂ ತಿಳಿದುಬಂದಿದೆ.

ಶನಿವಾರ ರಾತ್ರಿ ಆಕೆ ಕಾಣೆಯಾಗಿದ್ದಾಳೆ ಎಂದು ಮನೆಯವರು ಪೊಲೀಸರ ಮೊರೆ ಹೋಗಿದ್ದರು. ಆಕೆ ಅಪ್ರಾಪ್ತ ವಯಸ್ಸಿನವಳಾಗಿರುವುದರಿಂದ ಮಾಲ್ವಾನಿ ಪೊಲೀಸರು ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದರು. 9ನೇ ತರಗತಿಯ ವಿದ್ಯಾರ್ಥಿನಿಯು ಮಾಲ್ವಾನಿಯ ಗೇಟ್ ಸಂಖ್ಯೆ 8 ರಲ್ಲಿ ತನ್ನ ಪೋಷಕರು ಮತ್ತು ಮೂವರು ಒಡಹುಟ್ಟಿದವರೊಂದಿಗೆ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ. 

ಇದನ್ನೂ ಓದಿ: Crime: ರೇಪ್‌ ಮಾಡಿ ಮಹಿಳೆಗೆ ಬೆಂಕಿ ಹಚ್ಚಿದ ರಾಕ್ಷಸ: ಆಸ್ಪತ್ರೆಯಲ್ಲಿ ಬಲಿಯಾದ ಸಂತ್ರಸ್ತೆ