ಕುಡುಕ ಪತಿ ಕಾಟಕ್ಕೆ ಬೇಸತ್ತು 3 ಮಕ್ಕಳನ್ನು ನದಿಗೆ ತಳ್ಳಿ ತಾನೂ ಆತ್ಮಹತ್ಯೆ ಮಾಡ್ಕೊಂಡ ಮಹಿಳೆ..!
ಕೌಟುಂಬಿಕ ಕಲಹವೇ ಮಹಿಳೆಯ ಈ ಕೃತ್ಯಕ್ಕೆ ಕಾರಣ ಎಂದು ಸ್ಥಳೀಯರು ದೂರುತ್ತಿದ್ದಾರೆ. ಮಹಿಳೆಯ ಪತಿಯು ಕುಡಿತದ ಚಟ ಹೊಂದಿದ್ದು, ಆಗಾಗ್ಗೆ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆಗಾಗಿ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದೂ ತಿಳಿದುಬಂದಿದೆ.
ಬೇಗುಸರಾಯ್ (ಏಪ್ರಿಲ್ 10, 2023): ದೇಶದಲ್ಲಿ ಆತ್ಮಹತ್ಯೆ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಲೇ ಇದ್ದು, ಬಿಹಾರದಲ್ಲಿ ಸಹ ಇಂತದ್ದೇ ಘಟನೆ ವರದಿಯಾಗಿದೆ. 32 ವರ್ಷದ ಮಹಿಳೆಯೊಬ್ಬಳು ತನ್ನ ಮೂವರು ಅಪ್ರಾಪ್ತ ಮಕ್ಕಳನ್ನು ಬುರ್ಹಿ ಗ್ಯಾಂಡಕ್ ಉಪ ನದಿಗೆ ಎಸೆದಿದ್ದು, ಭಾನುವಾರ ಬೇಗುಸರೈ ಜಿಲ್ಲೆಯ ಸುಹಾಗಿ ಸೇತುವೆಯಿಂದ ನದಿಗೆ ಹಾರಿದ್ದಾರೆ ಎಂದು ವರದಿಯಾಗಿದೆ.
ಇನ್ನು, ನದಿಗೆ ಹಾರುವ ಮೊದಲು ಮೋಹನಪುರ ಗ್ರಾಮದ ನಿವಾಸಿ ಪತಿ ರವಿಗೆ ಕರೆ ಮಾಡಿದ 30 ವರ್ಷದ ಮಹಿಳೆ ಪೂಜಾ ಕುಮಾರಿ, ತಾನು ಯಾರೊಂದಿಗೂ ಓಡಿಹೋಗುತ್ತಿಲ್ಲ. ಆದರೆ ಹತಾಶೆ ಮತ್ತು ಸಂಕಟದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆಂದು ತಿಳಿದುಬಂದಿದೆ. ಇನ್ನು, ಈ ದಂಪತಿಯ ಮೃತ ಮೂವರು ಮಕ್ಕಳನ್ನು ಆಯುಷ್ (6), ಆದಿತ್ಯ (8) ಮತ್ತು ತಾನ್ಯಾ (10) ಎಂದು ಗುರುತಿಸಲಾಗಿದೆ.
ಇದನ್ನು ಓದಿ: ಅಯ್ಯೋ ಪಾಪ..! 3 ತಿಂಗಳ ಕಂದಮ್ಮನನ್ನು ಕೊಂದು ನೇಣು ಬಿಗಿದುಕೊಂಡ ದಂಪತಿ
ಈ ದುರಂತದ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹಗಳನ್ನು ಪತ್ತೆಹಚ್ಚಲು ಸ್ಥಳೀಯ ಮೀನು ಹಿಡಿಯುವವರನ್ನು ಕರೆಸಿದ್ದರು. ಭಗವಾನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಭಗವಾನ್‌ಪುರ ಸ್ಟೇಷನ್ ಹೌಸ್ ಆಫೀಸ್ ಅನಿಲ್ ಕುಮಾರ್ ಪ್ರಕಾರ, ಪಟಾರಿಯಾ ಗ್ರಾಮದ ಬಾವಿಯೊಳಗೆ ಮಕ್ಕಳು ಧರಿಸಿದ್ದ ಚಪ್ಪಲಿಗಳು ತೇಲುತ್ತಿರುವ ಬಗ್ಗೆ ಬೆಳಗ್ಗೆ ಮಾಹಿತಿ ಬಂತು ಎಂದೂ ಹೇಳಿದ್ದಾರೆ.
ನಂತರ ಎಸ್‌ಡಿಆರ್‌ಎಫ್ ತಂಡವನ್ನು ಸಹ ಕರೆಯಲಾಯಿತು, ಡೈವರ್‌ಗಳ ಸಹಾಯದಿಂದ ಆದಿತ್ಯನ ದೇಹವನ್ನು ಹೊರತೆಗೆಯಲಾಗಿದೆ. ಉಳಿದ ಮೂವರು ಸಂಜೆಯವರೆಗೂ ನಾಪತ್ತೆಯಾಗಿದ್ದಾರೆ. ಪೊಲೀಸರು ಸೇತುವೆಯಿಂದ ಮೊಬೈಲ್ ಫೋನ್ ಮತ್ತು ಕೆಲವು ಮುರಿದ ಬಳೆಗಳ ತುಂಡುಗಳನ್ನು ಸ್ಥಳದಲ್ಲಿ ಪತ್ತೆ ಹಚ್ಚಿದ್ದಾರೆ. ಮಹಿಳೆ ನದಿಗೆ ಹಾರಿದ್ದಾರೆ" ಎಂದು ಎಸ್‌ಎಚ್‌ಒ ಮಾಹಿತಿ ನೀಡಿದರು.
ಇದನ್ನೂ ಓದಿ: AI ಬಗ್ಗೆ ಇರಲಿ ಎಚ್ಚರ: ಚಾಟ್‌ಜಿಪಿಟಿಯಂತಹ ಆ್ಯಪ್ ಗೀಳಿಗೆ ಆತ್ಮಹತ್ಯೆ ಮಾಡಿಕೊಂಡ ವಿವಾಹಿತ..!
ಬಳಿಕ, ಮೂವರು ಮಕ್ಕಳು ಹಾಗೂ ಮಹಿಳೆಯ ಶವ ಸಿಕ್ಕಿದೆ ಎಂದೂ ಮಾಧ್ಯಮವೊಂದು ವರದಿ ಮಾಡಿದೆ. ಪೂಜಾ ಕುಮಾರಿ ತನ್ನ ತಾಯಿಯ ಸೆಲ್‌ಫೋನ್ ಬಳಸಿ ತನಗೆ ಕರೆ ಮಾಡಿದ್ದಾರೆ. ಈ ಮಧ್ಯೆ, ಘಟನೆ ಯಾವಾಗ ನಡೆದಿದೆ ಎಂದು ತಿಳಿಯಲು ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.
ಕೌಟುಂಬಿಕ ಕಲಹವೇ ಮಹಿಳೆಯ ಈ ಕೃತ್ಯಕ್ಕೆ ಕಾರಣ ಎಂದು ಸ್ಥಳೀಯರು ದೂರುತ್ತಿದ್ದಾರೆ. ಮಹಿಳೆಯ ಪತಿಯು ಕುಡಿತದ ಚಟ ಹೊಂದಿದ್ದು, ಆಗಾಗ್ಗೆ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆಗಾಗಿ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: ನಾನು ಸತ್ತ ಮೇಲಾದ್ರೂ ಕಾಮ ಪಿಶಾಚಿಗಳನ್ನು ಶಿಕ್ಷಿಸಿ ಎಂದು ಡೆತ್‌ನೋಟ್ ಬರೆದು ಆತ್ಮಹತ್ಯೆ ಮಾಡ್ಕೊಂಡ ವಿದ್ಯಾರ್ಥಿನಿ