ಚಂಡಿಘಡ(ಸೆ. 27) ಇದೊಂದು ದಾರುಣ ಘಟನೆ.  ಸೆ. 23 ರಂದು ಬಾಲಕಿಯೊಬ್ಬಳು ಗರ್ಭವತಿಯಾಗಿದ್ದು ಗೊತ್ತಾಗಿದೆ. ಇದರ ಮೂಲ ಹುಡುಕಿದಾಗ ಬೆಚ್ಚಿ ಬೀಳಿಸುವ ಮಾಹಿತಿ ಹೊರಕ್ಕೆ ಬಂದಿದೆ.

ಹೊಟ್ಟೆ ನೋವು ಎಂದು ಒಂಭತ್ತನೆ ತರಗತಿ ಬಾಲಕಿ ನರಳುತ್ತಿದ್ದಳು. ಅವಳನ್ನು ಆಸ್ಪತ್ರೆಗೆ  ಕರೆದುಕೊಂಡು ಹೋದಾಗ ಬಾಲಕಿ ಎಂಟು ತಿಂಗಳ ಗರ್ಭಿಣಿ ಎಂಬ ವಿಚಾರ ಗೊತ್ತಾಗಿದೆ. ತಕ್ಷಣ ಆಕೆಯನ್ನು  ಹಿಳಾ ಸಹಾಯವಾಣಿಯ ನೆರವಿಗೆ ಕಳುಹಿಸಿಕೊಡಲಾಗಿದೆ.

ಕಾಂಡೋಮ್ ಬಳಸು ಎಂದಿದ್ದಕ್ಕೆ ಕೊಲೆ ಮಾಡಿದ

ಡ್ರಗ್ಸ್ ಅಡಿಕ್ಟ್ ಆಗಿರುವ ಬಾಲಕಿಯ ಅಣ್ಣ ಮತ್ತು ಆತನ ಸ್ನೇಹಿತರು ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿದ್ದರು.  ತಾಯಿಗೆ ಗೊತ್ತಿದ್ದರೂ ಸುಮ್ಮನಿದ್ದಿದ್ದು ಮಾತ್ರ ದುರ್ದೈವ.

ಡ್ರಗ್ಸ್ ಅಡಿಕ್ಟ್ ಆಗಿರುವ ಬಾಲಕಿಯ ಅಣ್ಣ ಕಳೆದ ಡಿಸೆಂಬರ್ ನಲ್ಲಿ ಮೊದಲ ಸಾರಿ ಅತ್ಯಾಚಾರ ಎಸಗಿದ್ದ.  ಪದೆ ಪದೆ ಮನೆಗೆ ಬರುತ್ತಿದ್ದ ಅಣ್ಣನ  25  ವರ್ಷದ ಗೆಳೆಯ ಸಹ ತನ್ನ ಮೇಲೆ ದೌರ್ಜನ್ಯ ಮಾಡಿದ ದಾರುಣ ಕತೆಯನ್ನು ಬಾಲಕಿ ತೆರೆದಿಟ್ಟಿದ್ದಾಳೆ 

ಇಷ್ಟಕ್ಕೆ ಆಕೆಯ ನೋವು ಮುಗಿಯುವುದಿಲ್ಲ ಹತ್ತಿರದಲ್ಲಿ ಬಾಡಿಗೆಗೆ ವಾಸವಿದ್ದ  51  ವರ್ಷದ ವ್ಯಕ್ತಿ ಸಹ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ . ಬಾಲಕಿಯ ಹಿರಿಯ ಅಕ್ಕ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.