ನೋಯ್ಡಾ(ಅ. 05)  ಆನ್ ಲೈನ್ ಕ್ಲಾಸ್ ನಲ್ಲಿಯೂ ದೌರ್ಜನ್ಯ ತಪ್ಪಿಲ್ಲ.  ಆನ್ ಲೈನ್ ಕ್ಲಾಸಿನಲ್ಲಿಅದು ಹೇಗೋ ಪ್ರವೇಶ ಪಡೆದ ಆಗಂತುಕನೊಬ್ಬ ಅಶ್ಲೀಲ ಸಂದೇಶಗಳನ್ನು ಪೋಸ್ಟ್ ಮಾಡುತ್ತಿದ್ದಾನೆ ಎಂದು ಶಾಲೆಯ ಪ್ರಿನ್ಸಿಪಾಲ್ ಒಬ್ಬರು ದೂರು ನೀಡಿದ್ದಾರೆ.

ಆದರೆ ಪೊಲೀಸರುನ ಆರೋಪಿಯನ್ನು ಪತ್ತೆ ಮಾಡಿದ್ದು ಆತ ಶಾಲೆಯ ವಿದ್ಯಾರ್ಥಿಗಳಲ್ಲೆ ಒಬ್ಬನಾಗಿದ್ದ.  ಮೊದಲಿಗೆ ಒಪ್ಪಿಕೊಳ್ಳದಿದ್ದರೂ ವಿಚಾರಣೆ ನಂತರ ಸತ್ಯ ಬಾಯಿಬಿಟ್ಟಿದ್ದಾನೆ.

ಪ್ರಿಯಕರನೊಂದಿಗೆ ತಾಯಿಯ ಖುಲ್ಲಂ ಖುಲ್ಲಾ ಕಂಡ ಬಾಲಕ

ಫೇಕ್ ಐಡಿ ಬಳಸಿ ಇ ಕ್ಲಾಸ್ ರೂಂ ಸೇರಿಕೊಳ್ಳುತ್ತಿದ್ದ ಹದಿನಾಲ್ಕು ವರ್ಷದ ಎಂಟನೇ ತರಗತಿ ವಿದ್ಯಾರ್ಥಿ ಟೀಚರ್ ಮಗಳು ಸೇರಿದಂತೆ ಅನೇಕರ ಬಗ್ಗೆ ಅಶ್ಲೀಲ ಸಂದೇಶ ಸೆಂಡ್ ಮಾಡುತ್ತಿದ್ದ.

ಟೀಚರ್ ಮಗಳ ಮೇಲಿನ ದ್ವೇಷಕ್ಕೆ ಹೀಗೆ ಮಾಡಿದೆ. ಶಾಲೆಯ ಕಾಂಪಿಟೇಶನ್ ಗಳಲ್ಲಿ ಎಲ್ಲರೂ ಅವರ ಪರವಾಗಿ ತೀರ್ಮಾನ ಕೊಡುತ್ತಿದ್ದರು. ಇದನ್ನು ನನ್ನಿಂದ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ವಿದ್ಯಾರ್ಥಿ ಹೇಳಿದ್ದಾನೆ. ವಿದ್ಯಾರ್ಥಿ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ಅಡ್ಡಿ ಇಲ್ಲ ಎಂದು ಶಾಲಾ ಆಡಳಿತ ಮಂಡಳಿ ಹೇಳಿದೆ.