ಅಹಮದಾಬಾದ್ (ಅ. 05)  ಪ್ರಿಯತಮನೊಂದಿಗೆ  ಸೇರಿ ಆರು ವರ್ಷದ ಪುತ್ರನನ್ನೇ ಹತ್ಯೆ ಮಾಡಿದ ಆರೋಪದ ಮೇಲೆ ಮಹಿಳೆ ಮತ್ತು ಆಕೆಯ ಲವರ್ ನನ್ನು ಬಂಧಿಸಲಾಗಿದೆ.

ಗುಜರಾತ್‌ನ ಬನಾಸ್ ಕಾಂತಾ ಜಿಲ್ಲೆಯ ಸಂತಾಲ್ ಪೊಲೀಸ್ ಠಾಣೆಯ ಮೆಹಮದ್‌ಪುರ ಗ್ರಾಮದಲ್ಲಿ ಪ್ರಕರಣ ನಡೆದಿದ್ದು 26  ವರ್ಷದ ವಿವಾಹಿತ  ಮಹಿಳೆಯನ್ನು ಬಂಧಿಸಲಾಗಿದೆ.

 ಹತ್ಯೆಯಾದ ಬಾಲಕ  ಜಗದೀಶ್ ಠಾಕೂರ್ ತನ್ನ ತಾಯಿ ರಜುಲ್ ಆಕೆಯ ಲವರ್  ಸಂಜಯ್ ಠಾಕೂರ್‌ನೊಂದಿಗೆ ಸೆಕ್ಸ್ ಮಾಡುತ್ತಿರುವುದನ್ನು ನೋಡಿದ್ದಾನೆ.  ಅಕ್ರಮ ಸಂಬಂಧ ಬಗ್ಗೆ ಎಲ್ಲಿಯೂ ಬಾಯಿ ಬಿಡದಂತೆ ತಾಯಿ ಬಾಲಕನಿಗೆ ಬೆದರಿಕೆ ಹಾಕಿದ್ದಾಳೆ. ಆದರೆ ಶುಕ್ರವಾರ ಬಾಲಕ ನಡೆದ ಎಲ್ಲ ಘಟನೆಯನ್ನು ತಂದೆಗೆ ವಿವರಿಸಿದ್ದಾನೆ.

ಕಾಂಡೋಮ್ ಬಳಸು ಎಂದಿದ್ದಕ್ಕೆ ಹತ್ಯೆ ಮಾಡಿದ ಪಾಪಿ

ಇದಾದ ಮರುದಿನ ಬಾಲಕನ ಅಪಹರಣ ಮಾಡಿ ಹತ್ಯೆ ಮಾಡಲಾಗಿದೆ.  ಪೊಲೀಸರಿಗೆ ಹೇಳಿಕೆ ನೀಡಿರುವ ಬಾಲಕನ ತಂದೆ ಲಲಿತ್ ಠಾಕೂರ್, ನನ್ನ ಹಂಡತಿ ಅಕ್ರಮ ಸಂಬಂಧ ಹೊಂದಿದ್ದ ಬಗ್ಗೆ ಮೊದಲಿನಿಂದಲೂ ಅನುಮಾನ ಇತ್ತು.  ಪ್ರಿಯಕರನೊಂದಿಗೆ ಅಶ್ಲೀಲ ಭಂಗಿಯಲ್ಲಿ ಇದ್ದಿದ್ದನ್ನು ಮಗ ನನ್ನೊಂದಿಗೆ ಹೇಳಿದ್ದ.  ಇದೆ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಮಗ ಕಾಣೆಯಾದ ನಂತರ ತಂದೆ ಹುಡುಕಾಟ ಆರಂಭಿಸಿದ್ದಾರೆ. ಹತ್ತಿರದ ಕೆರೆ ಬಳಿ ಮಗನ ಶವ ಪತ್ತೆಯಾಗಿದ್ದು ಹೆಂಡತಿ ಮತ್ತು ಆಕೆಯ ಪ್ರಿಯಕರನ ಮೇಲೆ ದೂರು ನೀಡಿದ್ದಾರೆ.