ಅಫಜಲ್ಪುರ ಪಟ್ಟಣದ ಕಾಳಿಕಾ ಮಂದಿರದ ಬಳಿ ಇರುವ ಕೆನರಾ ಬ್ಯಾಂಕ್‌ ಎಟಿಎಂ ಎಂದಿನಂತಿರಲಿಲ್ಲ. ನಸುಕಿನ ಜಾವ ಬಡಾವಣೆ ಜನ ಎದ್ದು ನೋಡಿದಾಗ ಎಟಿಎಂ ಸೆಟರ್‌ ಒಡೆದಿದ್ದು ಕಂಡು ಬಂತು. ಬ್ಯಾಂಕಿನವರು ವಿಷಯ ತಿಳಿದು ಬಂದು ನೋಡಿದಾಗ ಕಳ್ಳರು ಎಟಿಎಂ ಒಡೆದು 14.86 ಲಕ್ಷ ದೋಚಿಕೊಂಡು ಪರಾರಿಯಾಗಿದ್ದು ಕಂಡು ಬಂದಿದೆ.

ಚವಡಾಪುರ (ಜು.24) :  ಅಫಜಲ್ಪುರ ಪಟ್ಟಣದ ಕಾಳಿಕಾ ಮಂದಿರದ ಬಳಿ ಇರುವ ಕೆನರಾ ಬ್ಯಾಂಕ್‌ ಎಟಿಎಂ ಎಂದಿನಂತಿರಲಿಲ್ಲ. ನಸುಕಿನ ಜಾವ ಬಡಾವಣೆ ಜನ ಎದ್ದು ನೋಡಿದಾಗ ಎಟಿಎಂ ಸೆಟರ್‌ ಒಡೆದಿದ್ದು ಕಂಡು ಬಂತು. ಬ್ಯಾಂಕಿನವರು ವಿಷಯ ತಿಳಿದು ಬಂದು ನೋಡಿದಾಗ ಕಳ್ಳರು ಎಟಿಎಂ ಒಡೆದು 14.86 ಲಕ್ಷ ದೋಚಿಕೊಂಡು ಪರಾರಿಯಾಗಿದ್ದು ಕಂಡು ಬಂದಿದೆ.

ಘಟನೆ ಸಂಬಂಧ ಬ್ಯಾಂಕ್‌ ಮ್ಯಾನೇಜರ್‌ ಹಣಮಂತ್ರಾಯ ದೇಗಾಂವ ಅಫಜಲ್ಪುರ ಠಾಣೆಯಲ್ಲಿ ದೂರು ದಾಖಲಿಸಿದ್ದು ಪಟ್ಟಣದ ಕಾಳಿಕಾ ದೇವಸ್ಥಾನದ ಬಳಿ ಇರುವ ರಾಮಭಟ್‌ ಅಗ್ನಿಹೋತ್ರಿ ಎನ್ನುವವರ ಕಟ್ಟಡದಲ್ಲಿ ಬಾಡಿಗೆ ಪಡೆದು ಕೆನರಾ ಬ್ಯಾಂಕ್‌ ನಡೆಸಲಾಗುತ್ತಿದೆ. ನಾವು ಎಂದಿನಂತೆ ಬ್ಯಾಂಕ್‌ ಬಂದ್‌ ಮಾಡಿಕೊಂಡು ಹೋಗಿದ್ದೇವು.

Cyber Crime: ಅಕೌಂಟ್‌ನಲ್ಲಿ ಹಣ ಇಲ್ದೇ ಇದ್ರು ಎಟಿಎಂನಿಂದ 9 ಕೋಟಿ ತೆಗೆದ.. ಮುಂದೆ..!?

ಬೆಳಗ್ಗೆ 4 ಗಂಟೆಗೆ ನಮ್ಮ ಸಿಬ್ಬಂದಿ ಎಟಿಎಂ ಕಳ್ಳತನವಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. 3.24 ಗಂಟೆಗೆ ನಾಲ್ಕು ಜನ ಅಪರಿಚಿತ ಕಳ್ಳರು ಬಿಳಿ ಬಣ್ಣದ ಬೊಲೇರೋ ವಾಹನದಲ್ಲಿ ಬಂದು ಬ್ಯಾಂಕಿನ ಬಳಿ ಇರುವ ಸಿಸಿಟಿವಿ ಕ್ಯಾಮರಾಗೆ ಸ್ಪ್ರೇ ಸಿಂಪಡಿಸಿ ತಮ್ಮ ಮುಖಕ್ಕೆ ಬಟ್ಟೆಕಟ್ಟಿಕೊಂಡು ಮುಖ ಕಾಣದಂತೆ ಮಾಡಿ ಗ್ಯಾಸ್‌ ಕಟರ್‌ ಸಹಾಯದಿಂದ ಎಟಿಎಂ ಯಂತ್ರ ಕತ್ತರಿಸಿ ಅದರಲ್ಲಿನ ಹಣದ ಟ್ರೇ ಸಮೇತ 3.33 ನಿಮಿಷಕ್ಕೆ ಪರಾರಿಯಾಗಿದ್ದಾರೆ. ಕೇವಲ ಒಂಭತ್ತು ನಿಮಿಷಗಳ ಅಂತರದಲ್ಲೇ ಕಳ್ಳರು ಕೈಚಳಕ ತೋರಿದ್ದಾರೆ.

Bengaluru crime: ಎಟಿಎಂನಿಂದ₹.24 ಲಕ್ಷ ದೋಚಿದ್ದವರ ಸೆರೆ

ಎಟಿಎಂನಲ್ಲಿ ಕಳ್ಳತನವಾಗುವ ಮುನ್ನ 17,08,500 ರುಪಾಯಿ ಇದ್ದು ಇದರಲ್ಲಿ ಕಳ್ಳತನಕ್ಕೂ ಮುನ್ನ ಗ್ರಾಹಕರು 2,22,500 ರುಪಾಯಿಗಳನ್ನು ಡ್ರಾ ಮಾಡಿಕೊಂಡಿದ್ದಾರೆ. ಉಳಿದ 14 ಲಕ್ಷ 86 ಸಾವಿರ ರುಪಾಯಿಗಳನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ. ದೂರಿನ ಅನ್ವಯ ಸ್ಥಳಕ್ಕೆ ಹೆಚ್ಚುವರಿ ಎಸ್‌.ಪಿ ಶ್ರೀನಿಧಿ, ಡಿವೈಎಸ್‌ಪಿ ಗೋಪಿ ಆರ್‌, ಸಿಪಿಐ ರಾಜಶೇಖರ ಬಡದೇಸಾರ, ಪಿಎಸ್‌ಐ ಭೀಮರಾಯ ಬಂಕ್ಲಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರೀಶಿಲನೆ ನಡೆಸಿ ಕಳ್ಳರ ಬಂಧನಕ್ಕೆ ಜಾಲ ಬೀಸಿದ್ದಾರೆ.