ಕ್ಲಾಸ್‌ರೂಂನಲ್ಲಿ ಕೂಡಿ ಹಾಕಿ 13 ವರ್ಷದ ವಿದ್ಯಾರ್ಥಿನಿ ಮೇಲೆ ಸಹಪಾಠಿಗಳಿಂದ ಗ್ಯಾಂಗ್ ರೇಪ್!
ಮುಂಬೈನಲ್ಲಿ ಭೀಕರ ಘಟನೆಯೊಂದನ್ನು ವರದಿಯಾಗಿದೆ. ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ತನ್ನ ಸಹಪಾಠಿಗಳೇ ಈ ಕೃತ್ಯ ಎಸಗಿದ್ದಾರೆ.
ಮುಂಬೈ(ಡಿ.02): ಮುಂಬೈನಲ್ಲಿ ಹೆಣ್ಣುಮಕ್ಕಳು ಮೇಲೆ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೊರಿಯಾ ಯ್ಯೂಟೂಬರ್ ಮೇಲೆ ಕಿರುಕುಳ ನೀಡಿದ ಘಟನೆ ಬೆನಲ್ಲೇ ಡೆಲಿವರಿ ಬಾಯ್ ಮಹಿಳೆಗೆ ಕಿರುಕುಳ ಘಟನೆ ವರದಿಯಾಗಿತ್ತು. ಇದೀಗ ಭೀಕರ ಅತ್ಯಾಚಾರ ಘಟನೆ ವರದಿಯಾಗಿದೆ. 13 ವರ್ಷದ ವಿದ್ಯಾರ್ಥಿನಿಯನ್ನು ಶಾಲಾ ಕೊಠಡಿಯಲ್ಲಿ ಕೂಡಿ ಹಾಕಿ ತನ್ನದೆ ತರಗತಿಯ ಸಹಪಾಠಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಪ್ರಕರಣ ದಾಖಲಾದ ಬೆನ್ನಲ್ಲೇ ಪೊಲೀಸರ ತಂಡ ಇಬ್ಬರು ಅಪ್ರಾಪ್ತ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.ಮುಂಬೈನ ಮಾತುಂಗದಲ್ಲಿ ಈ ಘಟನೆ ನಡೆದಿದೆ.
ಮಾತುಂಗಾದಲ್ಲಿನ ಶಾಲೆಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ಇತ್ತ 8ನೇ ತರಗತಿ ವಿದ್ಯಾರ್ಥಿನಿ ಸುಸ್ತಾಗುತ್ತಿದೆ ಎಂದು ತರಗತಿ ಬಂದು ಕುಳಿತುಕೊಂಡಿದ್ದಾಳೆ. ತರಗತಿಯ ಇತರ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿದ್ದರು. ಇದೇ ಸಮಯ ಉಪಯೋಗಿಸಿಕೊಂಡ ಇಬ್ಬರು ಸಹಪಾಠಿಗಳು, ನೇರವಾಗಿ ಶಾಲಾ ಕೊಠಡಿಗೆ ಬಂದು ತರಗತಿಯ ಬಾಗಿಲು ಮುಚ್ಚಿದ್ದಾರೆ. ಬಳಿಕ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸೆಗಿದ್ದಾರೆ.
ಬೆಂಗಳೂರಲ್ಲಿ ಮತ್ತೊಂದು ಅತ್ಯಾಚಾರ: ಮಹಿಳೆಯರೇ ಡ್ರಾಪ್ ಕೇಳುವ ಮುನ್ನ ಇರಲಿ ಎಚ್ಚರ!
ಈ ವೇಳೆ ವಿದ್ಯಾರ್ಥಿನಿ ಕಿರುಚಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಬಾಯಿಯನ್ನು ಹಿಡಿದು, ಕೈಕಾಲು ಹಿಡಿದು ಅತ್ಯಾಚಾರ ಎಸೆಗಿದ್ದಾರೆ. ಇತ್ತ ವಿದ್ಯಾರ್ಥಿನಿಯ ಕಿರುಚಾಟ ಶಾಲಾ ಕಾರ್ಯಕ್ರಮದ ಭರದಲ್ಲಿ ಯಾರಿಗೂ ಕೇಳಿಸಿಲ್ಲ. ಸಾಮಾಹಿಕ ಅತ್ಯಾಚಾರ ಎಸಗಿದ ವಿದ್ಯಾರ್ಥಿಗಳು ಅಲ್ಲಂದ ಎಸ್ಕೇಪ್ ಆಗಿದ್ದಾರೆ. ಆದರೆ ಮೊದಲೇ ಆರೋಗ್ಯ ಸಮಸ್ಯೆಯಲ್ಲಿದ್ದ ವಿದ್ಯಾರ್ಥಿನಿ ಮೇಲೆಳಲು ಆಗದೆ ಅಸ್ವಸ್ಥಗೊಂಡಿದ್ದಾಳೆ.
ಈ ವಿಚಾರ ಹೊರಗೆ ಹೇಳಿದರೆ ಹತ್ಯೆ ಮಾಡುವುದಾಗಿ 13 ವರ್ಷದ ವಿದ್ಯಾರ್ಥಿಗಳು ಬೆದರಿಸಿದ್ದಾರೆ. ಇದರಿಂದ ಭಯಭೀತಗೊಂಡ ವಿದ್ಯಾರ್ಥಿನಿ ಮನೆಗೆ ಹಿಂತಿರುಗಿದ್ದಾಳೆ. ತೀವ್ರ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿಯ ಆರೋಗ್ಯ ಮರುದಿನ ಕ್ಷೀಣಿಸಿದೆ. ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾಳೆ. ಆತಂಕಗೊಂಡ ಪೋಷಕರು ಹತ್ತಿರದ ಆಸ್ಪತ್ರೆ ದಾಖಿಸಿದ್ದಾರೆ.
Bengaluru: ಕೇರಳ ಯುವತಿ ಮೇಲೆ ಗ್ಯಾಂಗ್ ರೇಪ್ ಮಾಡಿದವರ ಸೆರೆ
ಆಸ್ಪತ್ರೆಯಲ್ಲಿ ತಾಯಿಗೆ ನಡೆದ ಘಟನೆ ವಿವರಿಸಿದ ಬಾಲಕಿ ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಇತ್ತ ಬಾಲಕಿ ತಾಯಿ ದೂರು ದಾಖಸಿದ್ದಾರೆ. ಪೊಲೀಸ ತಂಡ ಇಬ್ಬರು ಅಪ್ರಾಪ್ತ ಬಾಲಕರನ್ನು ಬಂಧಿಸಿದ್ದಾರೆ. ಇದೀಗ ಪ್ರಕರಣದ ತನಿಖೆ ನಡೆಯುತ್ತಿದೆ. ಇತ್ತ ಬಾಲಕಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾಳೆ.
ಮುಂಬೈ ರೋಡಲ್ಲಿ ಕೊರಿಯಾ ಯೂಟ್ಯೂಬರ್‌ಗೆ ಲೈಂಗಿಕ ಕಿರುಕುಳ
ದಕ್ಷಿಣ ಕೊರಿಯಾದ ಯೂಟ್ಯೂಬರ್ ಯುವತಿಗೆ ಮುಂಬೈನ ಬ್ಯುಸಿ ರಸ್ತೆಯಲ್ಲೇ ಇಬ್ಬರು ಯುವಕರು ಲೈಂಗಿಕ ಕಿರುಕುಳ ನೀಡಿದ ಘಟನೆ ಬುಧವಾರ ರಾತ್ರಿ ನಡೆದಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಮೊಬೀನ್ ಚಾಂದ್ ಮತ್ತು ಮೊಹಮ್ಮದ್ ನಖೀಬ್ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಭಾರತವನ್ನು ದೂಷಿಸಲ್ಲ:
‘ಇಂಥ ಕೃತ್ಯ ನಡೆಯಿತು ಎಂದು ಭಾರತವನ್ನು ನಾನು ದೂಷಿಸಲ್ಲ. ಎಲ್ಲ ದೇಶಗಳಲ್ಲೂ ಇಂಥ ಜನ ಇರುತ್ತಾರೆ. ಮುಂಬೈ ಪೊಲೀಸರು ತನಿಖೆಗೆ ತುಂಬಾ ಸಹಕಾರ ನೀಡಿದರು. ಇಂಥ ದುಷ್ಕರ್ಮಿಗಳು ಇದ್ದರೂ ಭಾರತ ಸುಂದರ ದೇಶ’ ಎಂದು ಪಾರ್ಕ್ ಹೇಳಿದ್ದಾಳೆ. ‘ನನಗೆ ಆರೋಪಿಗಳು ಸತಾಯಿಸಿ ಕಿರುಕುಳ ನೀಡಲು ಯತ್ನಿಸಿದರು. ಫೋನ್ ನಂಬರ್ ಕೂಡ ಕೇಳಿದರು. ಆದರೆ ಪಾರಾಗಬೇಕೆಂದು ಐಡಿಯಾ ಮಾಡಿ, ನಕಲಿ ಫೋನ್ ನಂಬರ್ ನೀಡಿ ಬಚಾವಾದೆ’ ಎಂದು ಆಕೆ ತಿಳಿಸಿದ್ದಾಳೆ.