17 ವರ್ಷದ ಯುವತಿಯ ಮೇಲೆ 12 ವರ್ಷದ ಹುಡುಗನಿಂದ ಅತ್ಯಾಚಾರ, ಮಗುವಿಗೆ ಜನ್ಮ ನೀಡಿದ ಹುಡುಗಿ
Weird Crime News: ಇದೊಂದು ವಿಲಕ್ಷಣ ಅಪರಾಧ ಪ್ರಕರಣ. ಇಲ್ಲಿ 17 ವರ್ಷದ ಯುವತಿಯ ಮೇಲೆ 12 ವರ್ಷದ ಬಾಲಕ ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
Tajavur: ಇದೆಂತ ಕಾಲ ಬಂದಿದೆ ಎಂದರೆ ಶಾಲೆಗೆ ಹೋಗಬೇಕಾದ ಮಕ್ಕಳು ಸಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಲೈಂಗಿಕತೆಯ ಬಗ್ಗೆ ಅರಿವೇ ಇಲ್ಲದ 12 ವರ್ಷದ ಹುಡುಗನೊಬ್ಬ 17 ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ಮಾಡಿ ಆಕೆ ಈಗ ಮಗುವಿಗೆ ಜನ್ಮ ನೀಡಿದ ಘಟನೆ ಪಕ್ಕದ ತಮಿಳುನಾಡು ರಾಜ್ಯದಲ್ಲಿ ನಡೆದಿದೆ. ತಮಿಳುನಾಡಿನ ತಂಜಾವೂರಿನಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಹುಡುಗನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಐಎಎನ್‌ಎಸ್ ಏಜೆನ್ಸಿ ಮಾಹಿತಿ ಅನ್ವಯ ತಂಜಾವೂರು ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿಗಳು ಪೋಕ್ಸೊ (Prevention of Children from Sexual Offences Act) ಕಾಯಿದೆಯಡಿ ಹುಡುಗನನ್ನು ಬಂಧಿಸಿದ್ದಾರೆ. ಹುಡುಗ ಅಪ್ರಾಪ್ತ ಮತ್ತು ತುಂಬಾ ಎಳೆಯ ವಯಸ್ಸಿನವನಾಗಿರುವುದರಿಂದ, ಕೃತ್ಯದಲ್ಲಿ ಬೇರೆ ಯಾವುದಾದರೂ ವ್ಯಕ್ತಿಯ ಕೈವಾಡದ ಬಗ್ಗೆಯೂ ವಿಚಾರಣೆ ಮಾಡಲಾಗುತ್ತಿದೆ.
ಪೊಲೀಸರ ಮಾಹಿತಿ ಪ್ರಕಾರ ಏಪ್ರಿಲ್ 16ರಂದು ತಮಿಳುನಾಡಿನ ರಾಜಾ ಮಿರಾಸುದಾರ್ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಹೊಟ್ಟೆನೋವು ಹೆಚ್ಚಾಗಿದೆ ಎಂಬ ಕಾರಣಕ್ಕೆ ಆಕೆಯನ್ನು ಕುಟುಂಬಸ್ಥರು ಆಸ್ಪತ್ರೆಗೆ ಸೇರಿಸಿದ್ದರು. ಹುಡುಗಿಗೂ ಸೇರಿದಂತೆ ಆಕೆಯ ಪೋಷಕರಿಗೂ ಮಗಳು ಗರ್ಭವತಿಯಾಗಿರುವುದು ತಿಳಿದಿರಲಿಲ್ಲ. ಅದರ ಮರುದಿನವೇ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ. ಅದಾದ ಬಳಿಕ ಪೊಲೀಸ್ ಠಾಣೆಗೆ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ. ಪೊಲೀಸರು ಹುಡುಗಿಯನ್ನು ಪ್ರಶ್ನಿಸಿದಾಗ 12 ವರ್ಷದ ಹುಡುಗನ ಬಗ್ಗೆ ಹುಡುಗಿ ಆರೋಪಿಸಿದ್ದಾಳೆ.
ತಂಜಾವೂರ್ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ (Prevention of Children from Sexual Offences Act) ಕಾಯಿದೆಯ ಸೆಕ್ಷನ್ 5(1) ಮತ್ತು 5 (j) (ii) ಅಡಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಹುಡುಗನ ಡಿಎನ್‌ಎ ಪರೀಕ್ಷೆ ನಡೆಸಲು ಮುಂದಾಗಿದ್ದು, ಹುಡುಗನ ವಯಸ್ಸು ಮತ್ತು ಮಗುವಿನ ನಿಜವಾದ ತಂದೆ ಆತನೇ ಹೌದಾ ಎಂಬುದನ್ನು ಪತ್ತೆ ಹಚ್ಚಲು ಯತ್ನಿಸಿದ್ದಾರೆ. ತಂಜಾವೂರ್ ಮಹಿಳಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರವಿಮತಿ ಐಎಎನ್‌ಎಸ್‌ಗೆ ಹೇಳಿಕೆ ನೀಡಿದ್ದು ಪ್ರಕರಣ ಗಂಭೀರವಾಗಿದ್ದು, ವಿಸ್ತೃತ ತನಿಖೆ ನಡೆಸಲಾಗುತ್ತಿದೆ. ಈಗಾಗಲೇ ಹುಡುಗಿಯ ಪೋಷಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ, ಹುಡುಗನ ಪೋಷಕರು ಮತ್ತು ನೆರೆ ಹೊರೆಯವರನ್ನು ಸಹ ವಿಚಾರಣೆಗೆ ಒಳಪಡಿಸಲಾಗುವುದು ಎಂದಿದ್ದಾರೆ.
ಇದನ್ನೂ ಓದಿ: ವಿಮಾನದಲ್ಲಿ ಮಹಿಳೆಯ ಎದೆಗೆ ಕೈಹಾಕಿ ಕಾಮಚೇಷ್ಟೆ: ಕಾಮುಕನ ಬಂಧನ
ಪ್ರಕರಣದ ಸಂತ್ರಸ್ಥೆ ಮತ್ತು ಆರೋಪಿ ಇಬ್ಬರೂ ಅಪ್ರಾಪ್ತರಾಗಿರುವುದರಿಂದ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪೊಲೀಸರು ನೀಡಲು ನಿರಾಕರಿಸಿದ್ದಾರೆ. ಆದರೆ 12 ವರ್ಷದ ಬಾಲಕನಿಗೆ ಮಗುವಿಗೆ ಜನನ ನೀಡುವ ಸಾಮರ್ಥ್ಯವಿದೆಯೇ ಎಂಬ ಬಗೆಯ ಚರ್ಚೆಗೂ ಈ ಘಟನೆ ಕಾರಣವಾಗಿದೆ. ಒಟ್ಟಿನಲ್ಲಿ ಈ ವಿಲಕ್ಷಣ ಪ್ರಕರಣದಿಂದ ಎಲ್ಲಾ ಪೋಷಕರೂ ಎಚ್ಚೆತ್ತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಶಾಲೆಗೆ ಹೋಗುವ ಮಗುವಿನ ಮೇಲೆ ಇಷ್ಟು ದೊಡ್ಡ ಆರೋಪ ಕೇಳಿಬಂದಿದೆ ಎಂದಾಗ, ಅಕ್ಕಪಕ್ಕದ ಮನೆಯಲ್ಲಿರುವ ಮಕ್ಕಳನ್ನು ಹೇಗೆ ನಂಬುವುದು ಎಂಬ ಜಿಜ್ನಾಸೆಗೆ ಈ ಪ್ರಕರಣ ನಾಂದಿ ಹಾಡಿದೆ.
ಇದನ್ನೂ ಓದಿ: ಚಲಿಸುವ ಬೈಕ್ ಮೇಲೆಯೇ ರೊಮ್ಯಾನ್ಸ್: ಪ್ರೇಮಿಯ ಹುಚ್ಚಾಟಕ್ಕೆ ಏಟು
ಪೋಕ್ಸೊ ಪ್ರಕರಣದಲ್ಲಿ ಮಕ್ಕಳೇ ಆರೋಪಿಗಳಾಗಿರುವುದು ಇದು ಮೊದಲೇನಲ್ಲ. ಆದರೆ ಕೇವಲ 12 ವರ್ಷದ ಬಾಲಕ ಆರೋಪಿಯಾಗಿರುವುದು ಇದೇ ಮೊದಲು. ಹೀಗಿರುವಾಗ ನಮ್ಮ ಮಕ್ಕಳ ಸುರಕ್ಷತೆ ನಾವೇ ನೋಡಿಕೊಳ್ಳಬೇಕು. ಚಿಕ್ಕ ಮಕ್ಕಳಲ್ಲಿ ತಪ್ಪು ಮಾಡಿದರೆ ಅಥವಾ ಅವರ ಮೇಲೆ ತಪ್ಪಾದರೂ ಹೇಳಿಕೊಳ್ಳಲು ಗೊತ್ತಾಗದೇ ಇರಬಹುದು. ಕೆಲವೊಮ್ಮೆ ಹೇಳಲು ಅಂಜಿಕೆಯೂ ಇರಬಹುದು, ಈ ಕಾರಣಕ್ಕೆ ಪೋಷಕರು ಮತ್ತು ಮಕ್ಕಳ ನಡುವಿನ ನಂಟು ಹೆಚ್ಚಬೇಕಿದೆ. ಮತ್ತು ಲೈಂಗಿಕ ಶಿಕ್ಷಣ, ಪ್ರಾಥಮಿಕ ಶಿಕ್ಷಣದ ಅಂಗವಾಗಬೇಕಿದೆ ಎಂಬ ವಾದವೂ ಕೇಳಿ ಬರುತ್ತಿದೆ. ಇಂತಾ ಪ್ರಕರಣಗಳು ಮತ್ತೆ ಜರುಗದಿರಲಿ ಎಂಬುದು ನಮ್ಮ ಆಶಯ.