ವಿಮಾನದಲ್ಲಿ ಮಹಿಳೆಯ ಎದೆಗೆ ಕೈಹಾಕಿ ಕಾಮಚೇಷ್ಟೆ: ಕಾಮುಕನ ಬಂಧನ
* ವಿಮಾನದಲ್ಲಿ ಮಹಿಳೆಯೊಂದಿಗೆ ಅಸಭ್ಯ ವರ್ತನೆ
* ಮಹಿಳೆಯ ಹಿಂಬದಿ ಕುಳಿತ್ತಿದ್ದ ವ್ಯಕ್ತಿಯಿಂದ ಚೇಷ್ಟೆ
* ಈ ಸಂಬಂಧ ಬಿಐಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಬೆಂಗಳೂರು(ಏ.23): ವಿಮಾನದಲ್ಲಿ ಪ್ರಯಾಣಿಸುವಾಗ ಪ್ರಯಾಣಿಕನೊಬ್ಬ ಮಹಿಳೆಯೊಂದಿಗೆ(Woman) ಅಸಭ್ಯವಾಗಿ ವರ್ತಿಸಿರುವ ಸಂಬಂಧ ಬಿಎಐಎಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್(FIR) ದಾಖಲಾಗಿದೆ. ಎಚ್‌ಎಂಟಿ ಲೇಔಟ್‌ನ 27 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಚೆನ್ನೈನ(Chennai) ಕೋಡಬಾಕಂನ ಕೃಷ್ಣನ್(30) ಎಂಬಾತನನ್ನು ಬಂಧಿಸಿದ(Arrest) ಪೊಲೀಸರು(Police), ಠಾಣಾ ಜಾಮೀನಿನ ಮೇಲೆ ಆತನನ್ನು ಬಿಡುಗಡೆಗೊಳಿಸಿದ್ದಾರೆ.
ಬೆಂಗಳೂರು(Bengaluru) ಮೂಲದ ಮಹಿಳೆ ಏ.18ರಂದು ರಾತ್ರಿ ಚೆನ್ನೈನಿಂದ ಬೆಂಗಳೂರಿಗೆ ಇಂಡಿಗೋ ವಿಮಾನದಲ್ಲಿ(Indigo Flight) (ಸಂಖ್ಯೆ 6ಇ-6225) ಪ್ರಯಾಣಿಸುತ್ತಿದ್ದರು. ಈ ವೇಳೆ ಹಿಂಬದಿ ಆಸನದಲ್ಲಿ ಕುಳಿತ್ತಿದ್ದ ಕೃಷ್ಣನ್ ಹಿಂಬದಿಯಿಂದ ಕೈ ಹಾಕಿ ಮಹಿಳೆಯ ಎದೆ ಭಾಗವನ್ನು ಬಲವಾಗಿ ಮುಟ್ಟಿದ್ದಾನೆ. ಈ ವೇಳೆ ಮಹಿಳೆ ಆತನಿಗೆ ಎಚ್ಚರಿಕೆ ನೀಡಿದ್ದಾರೆ. ಸ್ವಲ್ಪ ಸಮಯದ ನಂತರ ಕೃಷ್ಣನ್ ಮತ್ತೆ ಮೂರು-ನಾಲ್ಕು ಬಾರಿ ಅಸಭ್ಯವಾಗಿ ವರ್ತಿಸಿದ್ದಾನೆ. ಈ ವೇಳೆ ಆ ಮಹಿಳೆ ವಿಮಾನದ ಸಿಬ್ಬಂದಿಯನ್ನು ಕರೆದು ಕೃಷ್ಣನ್‌ನ ಚೇಷ್ಟೆಯ ಬಗ್ಗೆ ಹೇಳಿದ್ದಾರೆ. ವಿಮಾನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಾಗ, ಮಹಿಳೆ ಘಟನೆ ಸಂಬಂಧ ಬಿಐಎಎಲ್ ಠಾಣೆಗೆ ದೂರು ನೀಡಿದ್ದಾರೆ.
Chitradurga: ಹೆಂಡತಿ ಶೀಲವನ್ನೇ ಶಂಕಿಸಿ ಬರ್ಬರವಾಗಿ ಕೊಚ್ಚಿ ಹತ್ಯೆಗೈದ ಗಂಡ
ಈ ದೂರಿನ ಮೇರೆಗೆ ವಿಮಾನ ನಿಲ್ದಾಣದಲ್ಲೇ ಆರೋಪಿ ಕೃಷ್ಣನ್‌ನನ್ನು ಬಂಧಿಸಿದ ಪೊಲೀಸರು, ಆತನ ವಿಚಾರಣೆ ನಡೆಸಿ ಠಾಣಾ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ. ಈ ಸಂಬಂಧ ಬಿಐಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್: ವ್ಯಕ್ತಿ ಬಂಧನ, 1 ಲಕ್ಷ ವಶ
ಬೆಂಗಳೂರು: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ(IPL Cricket Betting) ತೊಡಗಿದ್ದ ವ್ಯಕ್ತಿಯೊಬ್ಬನನ್ನು ಕೇಂದ್ರ ಅಪರಾಧ ವಿಭಾಗದ(CCB) ಪೊಲೀಸರು ಬಂಧಿಸಿದ್ದಾರೆ.
ಸುಬ್ಬಣ್ಣ ಗಾರ್ಡನ್ ನಿವಾಸಿ ಶಿವಶಂಕರ್(46) ಬಂಧಿತ. ಈತನಿಂದ .1.10 ಲಕ್ಷ ನಗದು, ಮೊಬೈಲ್ ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಏ.19ರಂದು ನಡೆದ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಡುವಿನ ಕ್ರಿಕೆಟ್ ಪಂದ್ಯದ ಸೋಲು-ಗೆಲುವು ಕುರಿತು ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಜೂಜಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಂಡತಿಯನ್ನು ಗರ್ಭಿಣಿ ಮಾಡ್ಬೇಕು ಅನ್ನೋ ಕಾರಣಕ್ಕೆ 15 ದಿನದ ಪೆರೋಲ್ ಪಡೆದ ಅಪರಾಧಿ!
ಆರೋಪಿಯು ಬುಲೆಟ್‌ಎಕ್ಸ್(BulletX) ಎಂಬ ಆ್ಯಪ್(App) ಬಳಸಿಕೊಂಡು ಸಾರ್ವಜನಿಕರಿಂದ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಜೂಜಾಡುತ್ತಿದ್ದ. ಪಂದ್ಯದ ಸೋಲು-ಗೆಲುವಿನ ಮೇಲೆ ಬೆಟ್ಟಿಂಗ್ ಕಟ್ಟಿದವರಿಗೆ ಹಣವನ್ನು ವರ್ಗಾಯಿಸುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.