ಬಸ್-ಆಟೋ ಮುಖಾಮುಖಿ | 12 ಮಹಿಳೆಯರು ಓರ್ವ ವ್ಯಕ್ತಿ ಸಾವು

ಗ್ವಾಲಿಯರ್(ಮಾ.23): ಆಟೋರಿಕ್ಷಾ ಮತ್ತು ಬಸ್ ಡಿಕ್ಕಿಯಾಗಿ 12 ಮಹಿಳೆಯರು ಸೇರಿ 13 ಜನರು ಮೃತಪಟ್ಟ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ. 4 ಮಹಿಳೆಯರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ.

ಜಿಲ್ಲಾ ಕೇಂದ್ರದಿಂದ 15 ಕಿಮೀ ದೂರದದ ಸ್ಟೋನ್ ಪಾರ್ಕ್ ಏರಿಯಾದಲ್ಲಿ ಅಂಗನವಾಡಿಯಲ್ಲಿ ಮಕ್ಕಳಿಗೆ ಅಡುಗೆ ಮಾಡಿಟ್ಟು ಮರಳಿ ಬರುವಾಗ ಬೆಳಗ್ಗೆ 5.30ಕ್ಕೆ ಘಟನೆ ನಡೆದಿದೆ. ಮೂವರು ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೋ ಡ್ರೈವರ್ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರು.

ಪತ್ನಿ ಮೇಲೆ ಅನುಮಾನ: ಗುಪ್ತಾಂಗವನ್ನೇ ತಂತಿಯಲ್ಲಿ ಹೊಲಿದ ಕ್ರೂರಿ ಗಂಡ!

ಅವರು ಎರಡು ರಿಕ್ಷಾಗಳಲ್ಲಿ ಹೋಗಿದ್ದರು. ಇದರಲ್ಲಿ ಒಂದು ಆಟೋ ಕೆಟ್ಟು ಹೋಗಿತ್ತು. ಹಾಗಾಗಿ ಒಂದರಲ್ಲಿಯೇ ಹಿಂದಿರುಗಿ ಬರಲು ನಿರ್ಧರಿಸಿದ್ದರು ಎನ್ನಲಾಗಿದೆ. ಬಸ್ ಡ್ರೈವರ್ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ.

ಸಿಎಂ ಶಿವರಾಜ್ ಸಿಂಗ್ ಅವರು ಮೃತರ ಕುಟುಂಬಕ್ಕೆ ತಲಾ 4 ಲಕ್ಷ ಪರಿಹಾರ ಘೋಷಿಸಿದ್ದಾರೆ. ಬಸ್ ಅಥವಾ ಆಟೋ ಚಾಲಕ ಚಾಲನೆ ವೇಳೆ ನಿದ್ರಿಸಿರಬಹುದು ಎನ್ನಲಾಗಿದೆ.