Asianet Suvarna News Asianet Suvarna News

ವಿದ್ಯಾರ್ಥಿಗಳ ಕಿತ್ತಾಟ, ಬುದ್ಧಿ ಹೇಳಿದ ಟೀಚರ್ ಮೇಲೆ 3 ಸುತ್ತು ಗುಂಡು ಹಾರಿಸಿದ 10ನೇ ತರಗತಿ ವಿದ್ಯಾರ್ಥಿ!

ಗುರು ತಂದೆಗೆ ಸಮಾನ ಅಂತಾರೆ, ಗುರು ಹಾಗೂ ಶಿಷ್ಯರ ನಡುವಿನ ಸಂಬಂಧ ಅತ್ಯಂತ ಪವಿತ್ರ ಹಾಗೂ ಗೌರವಯುತವಾದದ್ದು. ಆದರೆ ಇತ್ತೀಚೆಗೆ ಹಲವು ಘಟನೆಗಳು ಈ ಸಂಬಂಧಕ್ಕೆ ಧಕ್ಕೆ ತರುತ್ತಿದೆ. ಇದೀಗ ವಿದ್ಯಾರ್ಥಿಗಳಿಬ್ಬರು ಕಿತ್ತಾಡಿಕೊಂಡ ಕಾರಣ ಕರೆದು ಬುದ್ದಿ ಮಾತು ಹೇಳಿದ್ದಾರೆ. ಇದಕ್ಕೆ ಆಕ್ರೋಶಗೊಂಡ ವಿದ್ಯಾರ್ಥಿ ಕಂಟ್ರಿ ಪಿಸ್ತೂಲ್‌ನಿಂದ 3 ಗುಂಡು ಹಾರಿಸಿದ ಘಟನೆ ನಡದಿದೆ

10th Class student shoot 3 rounds his teacher with country made pistol in Uttar Pradesh ckm
Author
First Published Sep 24, 2022, 6:38 PM IST

ಲಖನೌ(ಸೆ.24): ಹತ್ತನೇ ತರಗತಿ ವಿದ್ಯಾರ್ಥಿಗಳಿಬ್ಬರು ಶಾಲಾ ಆವರಣದಲ್ಲೇ ಕೈಕೈ ಮಿಲಾಯಿಸಿದ್ದಾರೆ. ಸುಖಾಸುಮ್ಮನೆ ಜಗಳ ತೆಗೆದ ವಿದ್ಯಾರ್ಥಿಯನ್ನು ಕರೆಸಿದ ಟೀಚರ್ ಬುದ್ದಿ ಮಾತು ಹೇಳಿದ್ದಾರೆ. ಒದಿನಲ್ಲಿ ಗಮನ ನೀಡುವಂತೆ ಸೂಚಿಸಿದ್ದಾರೆ. ಜಗಳಾ, ಕಿತ್ತಾಟಗಳು ಮರುಕಳಿಸಿದರೆ ಪೋಷಕರನ್ನು ಕರೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇಷ್ಟೇ ನೋಡಿ, ಕಾಲು ಕೆರೆದು ಜಗಳ ಮಾಡಿದ ವಿದ್ಯಾರ್ಥಿಯ ಪಿತ್ತ ನೆತ್ತಿಗೇರಿದೆ. ಟೀಚರ್ ವಿರುದ್ಧ ಸೇಡು ತೀರಿಸಲು ಮುಂದಾಗಿದ್ದಾನೆ. ಬಳಿಕ ಕಂಟ್ರಿ ಪಿಸ್ತೂಲ್‌ನಿಂದ ಶಿಕ್ಷನ ಮೇಲೆ ಗುಂಡು ಹಾರಿಸಿದ್ದಾನೆ. ಒಂದಲ್ಲ ಮೂರು ಗುಂಡು ಹಾರಿಸಿದ್ದಾನೆ. ಕೂದಲೆಳೆಯು ಅಂತರದಿಂದ ಶಿಕ್ಷಕ ಅಪಾಯದಿಂದ ಪಾರಾಗಿದ್ದಾನೆ. ಆದರೆ ಕೈಗೆ ಹಾಗೂ ದೇಹಕ್ಕೆ ಗಾಯಗಳಾಗಿವೆ. ಇದೀಗ ಶಿಕ್ಷಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉತ್ತರ ಪ್ರದೇಶದ ಸಿತಾಪುರದಲ್ಲಿ ಈ ಘಟನೆ ನಡೆದಿದೆ.

10ನೇ ತರಗತಿ ವಿದ್ಯಾರ್ಥಿ(10 class Student) ತಾನೊಬ್ಬ ಗ್ಯಾಂಗ್‌ಸ್ಟರ್ ಎಂದು ಹೇಳಿಕೊಂಡೇ ತಿರುಗಾಡುತ್ತಿದ್ದ. ಸುಖಾಸುಮ್ಮನೆ ತರಗತಿ ವಿದ್ಯಾರ್ಥಿಗಳ ಜೊತೆ ಜಗಳಕ್ಕಿಳಿಯುತ್ತಿದ್ದ. ಈ ಮೂಲಕ ತಾನು ಈ ಕಾಲೇಜಿನ ಗ್ಯಾಂಗ್‌ಸ್ಟರ್ ಎಂದು ಗುರುತಿಸಿಕೊಳ್ಳು ಪ್ರಯತ್ನದಲ್ಲಿದ್ದ. ಹೀಗೆ ಮತ್ತೊರ್ವ ವಿದ್ಯಾರ್ಥಿಯೊಂದಿಗೆ ಜಗಳಕ್ಕೆ ಇಳಿದಿದ್ದಾನೆ. ತಕ್ಕ ಸಮಯದಲ್ಲಿ ಸ್ಥಳಕ್ಕೆ ಹಾಜರಾದ ಶಿಕ್ಷಕ(Teacher) ಜಗಳ ಬಿಡಿಸಿದ್ದಾರೆ. 

Vijayapura: ಕಂಟ್ರೀ ಪಿಸ್ತೂಲ್ ಮಾಫಿಯಾ ಬೇಧಿಸಿದ ಪೊಲೀಸರು: ನಾಲ್ವರ ಬಂಧನ

ಬಳಿಕ ಪುಂಡ ವಿದ್ಯಾರ್ಥಿಯನ್ನು(Uttar Pradesh Shoot) ಕರೆದು ಬುದ್ದಿ ಮಾತು ಹೇಳಿದ್ದಾರೆ. ಇದೇ ವರ್ತನೆ ಮುಂದುವರಿದರೆ ಪೋಷಕರನ್ನು ಕರೆಸುವುದಾಗಿ ಎಚ್ಚರಿಸಿದ್ದಾರೆ. ಇಷ್ಟೇ ಅಲ್ಲ ವಿದ್ಯಾರ್ಥಿಗಳಿಗೆ ಶಿಸ್ತು ಮುಖ್ಯ. ಅದನ್ನು ಉಲ್ಲಂಘಿಸಿದರೆ ಟಿಸಿ ನೀಡಿ ಹೊರಕಳುಹಿಸುವುದಾಗಿ ಶಿಕ್ಷಕ ಎಚ್ಚರಿಸಿದ್ದಾರೆ. ಈ ಬುದ್ದಿಮಾತುಗಳಿಂದ ಕೆರಳಿದ ವಿದ್ಯಾರ್ಥಿ, ನೇರವಾಗಿ ಶಾಲೆಯಿಂದ ಹೊರಬಂದು ಕಂಟ್ರಿ ಪಿಸ್ತೂಲ್(Pistol) ಸಂಗ್ರಹಿಸಿ ಮತ್ತೆ ಶಾಲೆಗೆ ಮರಳಿದ್ದಾನೆ.

ಶಾಲೆಗೆ ಬಂದ 10ನೇ ತರಗತಿ ವಿದ್ಯಾರ್ಥಿ ನೇರವಾಗಿ ಶಿಕ್ಷನ ಮೇಲೆ ಗುಂಡು ಹಾರಿಸಿದ್ದಾನೆ. ಮೂರು ಸುತ್ತು ಹಾರಿಸಿದ ಗುಂಡು ಕೈ, ದೇಹಕ್ಕೆ ತಾಗಿದೆ. ಮತ್ತೆ ಗುಂಡು ಹಾರಿಸಲು ಮುಂದಾದಾಗ ಶಿಕ್ಷಕ ವಿದ್ಯಾರ್ಥಿ ಕೈ ಹಿಡಿದಿದ್ದಾರೆ. ಕೆಲ ಹೊತ್ತು ಶಿಕ್ಷಕ ಹಾಗೂ ವಿದ್ಯಾರ್ಥಿ ನಡುವೆ ಜಟಾಪಟಿ ನಡೆದಿದೆ. ಇದೇ ವೇಳೆ ಸಹಾಯಕ್ಕೆ ಬಂದ ಕೆಲವರು ವಿದ್ಯಾರ್ಥಿ ಕೈಯಲ್ಲಿದ್ದ ಪಿಸ್ತೂಲ್ ಕಸಿದಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ವಿದ್ಯಾರ್ಥಿಯನ್ನು ವಶಕ್ಕೆ ಪಡೆದಿದ್ದಾರೆ. 

 

ಅಪ್ಪನ ಪಿಸ್ತೂಲ್‌ನಲ್ಲಿ ಮಕ್ಕಳ ಆಟ, ಅಚಾನಕ್ಕಾಗಿ ಸಿಡಿದ ಗುಂಡಿನಿಂದ 2 ವರ್ಷದ ಪುತ್ರ ಸಾವು!

ಶಿಕ್ಷಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶಿಕ್ಷಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಇಡೀ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಭಯಾನಕ ವಿಡಿಯೋ ವೈರಲ್ ಆಗಿದೆ. ಈ ರೀತಿಯ ವಿದ್ಯಾರ್ಥಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಹಲವರು ಆಗ್ರಹಿಸಿದ್ದಾರೆ.

ಪೊಲೀಸರಿಗೆ ಆಟಿಕೆ ಪಿಸ್ತೂಲ್‌ ತೋರಿಸಿ ತಪ್ಪಿಸಿಕೊಂಡಿದ್ದ ಡ್ರಗ್‌ ಪೆಡ್ಲರ್‌ ಬಂಧನ
ಡ್ರಗ್‌್ಸ ಪ್ರಕರಣ ಸಂಬಂಧ ಬೆಂಗಳೂರಿನಲ್ಲಿ ಬಂಧಿಸಲು ಬಂದಿದ್ದಾಗ ತಮಗೆ ಅಟಿಕೆ ಪಿಸ್ತೂಲ್‌ ತೋರಿಸಿ ಬೆದರಿಕೆ ಹಾಕಿ ತಪ್ಪಿಸಿಕೊಂಡಿದ್ದ ಮೀನು ವ್ಯಾಪಾರಿಯೊಬ್ಬನನ್ನು ಕೊನೆಗೂ ಕೇರಳ ಪೊಲೀಸರು ಬಲೆಗೆ ಹಾಕಿಕೊಂಡಿದ್ದಾರೆ. ಕೇರಳ ಮೂಲದ ಜಾಫರ್‌ ಬಂಧಿತನಾಗಿದ್ದು, ಆರೋಪಿಯಿಂದ ಆಟಿಕೆ ಪಿಸ್ತೂಲ್‌ ಜಪ್ತಿ ಮಾಡಲಾಗಿದೆ.

Follow Us:
Download App:
  • android
  • ios