ಪುಣೆ(ಅ.10): ಸೌತ್ ಆಫ್ರಿಕಾ ವಿರುದ್ದದ 2ನೇ ಟೆಸ್ಟ್ ಪಂದ್ಯ ಟೀಂ ಇಂಡಿಯಾ ನಾಯಕನಾಗಿ ವಿರಾಟ್ ಕೊಹ್ಲಿಗೆ 50ನೇ ಪಂದ್ಯ. ಪುಣೆ ಟೆಸ್ಟ್ ಪಂದ್ಯದಲ್ಲಿ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದ ಕೊಹ್ಲಿ, ಮಾಜಿ ನಾಯಕ ಸೌರವ್ ಗಂಗೂಲಿ ದಾಖಲೆಯನ್ನು ಪುಡಿ ಮಾಡಿದ್ದಾರೆ. ಕೊಹ್ಲಿ 50ನೇ ಟೆಸ್ಟ್ ಪಂದ್ಯಕ್ಕೆ ಬಿಸಿಸಿಐ ಸೇರಿದಂತೆ ಕ್ರಿಕೆಟ್ ದಿಗ್ಗಜರು ಅಭಿನಂದನೆ ಸಲ್ಲಿಸಿದ್ದಾರೆ.   ಇನ್ನು ಸ್ಪಿನ್ನರ್ ಯಜುವೇಂದ್ರ ಚಹಾಲ್ ಕೂಡ ಕೊಹ್ಲಿಗೆ ಶುಭಕೋರಿದ್ದಾರೆ. ಆದರೆ ಚಹಾಲ್ ಅಭಿನಂದನೆ ಇದೀಗ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಸೌರವ್ ಗಂಗೂಲಿ ದಾಖಲೆ ಮುರಿದ ವಿರಾಟ್ ಕೊಹ್ಲಿ!

ಕೊಹ್ಲಿಗೆ ಶುಭಕೋರುವ ವೇಳೆ ತನ್ನುನ್ನು ತಾನು ಟ್ರೋಲ್ ಮಾಡಿದ್ದಾರೆ. ಅಭಿನಂದನೆಗಳು ಸಹೋದರ. ನನಗಿಂತ 50 ಟೆಸ್ಟ್ ಪಂದ್ಯ ಹೆಚ್ಚು ಅಷ್ಟೇ ಎಂದು ಚಹಾಲ್ ಟ್ವೀಟ್ ಮಾಡಿದ್ದಾರೆ. 2016ರಲ್ಲಿ ಏಕದಿನ ಹಾಗೂ ಟಿ20 ಕ್ರಿಕೆಟ್‌ಗೆ ಪದಾಪರ್ಣೆ ಮಾಡಿರುವ ಚಹಾಲ್, ಇದುವರೆಗೆ ಟೆಸ್ಟ್ ಪಂದ್ಯ ಆಡಿಲ್ಲ. ಒಂದು ಟೆಸ್ಟ್ ಪಂದ್ಯ ಆಡದ ಚಹಾಲ್, ವಿಶೇಷವಾಗಿ ಕೊಹ್ಲಿಗೆ ಅಭಿನಂದಿಸಿದ್ದಾರೆ.  

 

ಇದನ್ನೂ ಓದಿ: ಪುಣೆ ಟೆಸ್ಟ್: ಮಯಾಂಕ್ ಶತಕ, ಟೀಂ ಇಂಡಿಯಾಗೆ ಮೊದಲ ದಿನದ ಗೌರವ

ಕೊಹ್ಲಿ 50ನೇ ಟೆಸ್ಟ್ ಪಂದ್ಯಕ್ಕೆ ಬಿಸಿಸಿಐ ಅಭಿನಂದನೆ ಸಲ್ಲಿಸಿತ್ತು. ಕೊಹ್ಲಿ ಭಾರತದ ಪರ ನಾಯಕನಾಗಿ 49 ಪಂದ್ಯದಲ್ಲಿ 29 ಗೆಲುವು ಸಾಧಿಸಿದ್ದಾರೆ. ಧೋನಿ ಭಾರತದ ಪರ 60 ಟೆಸ್ಟ್ ಪಂದ್ಯದಲ್ಲಿ ನಾಯಕನಾಗಿದ್ದರೆ, ಸೌರವ್ ಗಂಗೂಲಿ 49 ಪಂದ್ಯದಲ್ಲಿ ಭಾರತ ಟೆಸ್ಟ್ ತಂಡವನ್ನು ಮುನ್ನಡೆಸಿದ್ದಾರೆ.

ಇದನ್ನೂ ಓದಿ: ಅರ್ಧಶತಕ ಪೂರೈಸಿದ ನಾಯಕ ವಿರಾಟ್ ಕೊಹ್ಲಿ

ಕೊಹ್ಲಿ ಸಾಧನೆಗೆ ಬಿಸಿಸಿಐ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದೆ. ವಿಶ್ವದ ಬೆಸ್ಟ್ ಟೆಸ್ಟ್ ಕ್ಯಾಪ್ಟನ್ ಪಟ್ಟ ಕೈವಶ ಮಾಡಲು ಕೊಹ್ಲಿಗೆ ಹಾದಿ ದೂರವಿಲ್ಲ. ಇದೀಗ ಸೌತ್ ಆಫ್ರಿಕಾ ವಿರುದ್ದ 1-0 ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ, 2ನೇ ಪಂದ್ಯದ ಮೊದಲ ದಿನವೂ ಅಬ್ಬರಿಸಿದೆ. ಈ ಪಂದ್ಯ ಗೆದ್ದು ಸರಣಿ ಕೈವಶ ಮಾಡಲು ಕೊಹ್ಲಿ ಸೈನ್ಯ ಸಜ್ಜಾಗಿದೆ.