ರಾಜಸ್ಥಾನ ರಾಯಲ್ಸ್ ತಂಡದ ಟ್ವಿಟರ್ ಖಾತೆ ಹ್ಯಾಕ್ ಮಾಡಿದ ಚಾಹಲ್2022ರ ಐಪಿಎಲ್ ಗೆ ತಾವೇ ನಾಯಕ ಎನ್ನುವ ಪೋಸ್ಟ್ ಪ್ರಕಟಿಸಿದ ಲೆಗ್ ಸ್ಪಿನ್ನರ್ಗೊಂದಲಗಳ ಬಳಿಕ ಸ್ಪಷ್ಟೀಕರಣ ನೀಡಿದ ರಾಜಸ್ಥಾನ ರಾಯಲ್ಸ್

ಬೆಂಗಳೂರು ( ಮಾ. 16): ಚೆಸ್ ಚಾಂಪಿಯನ್ (Chess Champion) ಆಗಿ ಆ ಬಳಿಕ ಕ್ರಿಕೆಟ್ ನಲ್ಲೂ ಯಶಸ್ಸಯ ಕಂಡ ಟೀಮ್ ಇಂಡಿಯಾದ ಸ್ಪಿನ್ನರ್ ಯಜುವೇಂದ್ರ ಚಾಹಲ್ (Yuzvendra Chahal), ಇತ್ತೀಚಿನ ದಿನಗಳಲ್ಲಿ ತಮ್ಮ ಹಾಸ್ಯದ ಕಾರಣದಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದ್ದಾರೆ. ಈ ನಡುವೆ ಅವರ ಮತ್ತೊಂದು ಕಲೆ ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ತಮ್ಮ ರಂಜನೀಯ ಟ್ವೀಟ್ ಗಳಿಂದ ಗಮನಸೆಳೆಯುವ ರಾಜಸ್ಥಾನ ರಾಯಲ್ಸ್ (RAJASTHAN ROYALS) ತಂಡದ ಟ್ವಿಟರ್ ಅಕೌಂಟ್ ಅನ್ನೇ ಹ್ಯಾಕ್ ಮಾಡುವ ಮೂಲಕ ಯಜುವೇಂದ್ರ ಚಾಹಲ್, ರಾಜಸ್ಥಾನ ಟೀಮ್ ಗೆ ಶಾಕ್ ನೀಡಿದ್ದಾರೆ.

ಟ್ವಿಟರ್ ಖಾತೆ (Twitter) ಹ್ಯಾಕ್ ಮಾಡಿದ್ದಲ್ಲದೆ, 2022ರ ಐಪಿಎಲ್ ಗೆ ರಾಜಸ್ಥಾನ ರಾಯಲ್ಸ್ ತಂಡ ತಮ್ಮನ್ನು ನೂತನ ನಾಯಕನಾಗಿ ಘೋಷಣೆ ಮಾಡಿದೆ ಎಂದು ಚಿತ್ರ ಸಮೇತ ಪೋಸ್ಟ್ ಮಾಡಿದ್ದರು. ಇದರ ಟ್ವಿಟರ್ ನೋಟಿಫಿಕೇಶನ್ ಬಂದ ಬಳಿಕ ಎಲ್ಲರಿಗೂ ಅಚ್ಚರಿಯಾಗಿತ್ತು.

ಆರ್‌ಆರ್‌ ಟ್ವಿಟರ್‌ ಅಕೌಂಟ್‌ ಹ್ಯಾಕ್‌ ಮಾಡಿ ಚಹಲ್‌ ಮಾಡಿರುವ ಟ್ವೀಟ್‌ಗೆ ಬರೋಬ್ಬರಿ 45 ಸಾವಿರ ಲೈಕ್ಸ್‌ಗಳು ಹರಿದು ಬಂದಿವೆ. 10 ಸಾವಿರಕ್ಕೂ ಹೆಚ್ಚು ರೀ ಟ್ವೀಟ್‌ಗಳಾಗಿವೆ. ಇನ್ನೂ ಕೆಲವರು ಚಾಹಲ್ ನೂತನ ಕ್ಯಾಪ್ಟನ್ ಆಗಿರುವುದಕ್ಕೆ ಶುಭವನ್ನೂ ಹಾರೈಸಿದ್ದಾರೆ.

Scroll to load tweet…


ಈ ಟ್ವೀಟ್ ಗೆ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ನಿಜವಾದ ನಾಯಕ ಸಂಜು ಸ್ಯಾಮ್ಸನ್ ( Sanju Samson ) ಕೂಡ ಚಹಾಲ್ ಅವರನ್ನು ಅಭಿನಂದಿಸಿದ್ದಾರೆ, ಅದಕ್ಕೆ ಆರ್ ಆರ್ ಖಾತೆಯು ಅವರನ್ನು 'ಅಸೂಯೆ' ಎಂದು ಬರೆದು ಪೋಸ್ಟ್ ಮಾಡಿತ್ತು.

Scroll to load tweet…


ಇದಾದ 15 ನಿಮಿಷಕ್ಕೆ ಚಾಹಲ್ ಕುರಿತಾಗಿಯೇ ಮತ್ತೊಂದು ಟ್ವೀಟ್ ಮಾಡಲಾಗಿತ್ತು. ಮುಂಬರುವ ಐಪಿಎಲ್ ನಲ್ಲಿ ಜೋಸ್ ಬಟ್ಲರ್ ( Jose Butler ) ಅಂಕಲ್ ಜೊತೆ ಚಾಹಲ್ ಇನ್ನಿಂಗ್ಸ್ ಆರಂಭಿಸಬೇಕು ಎನ್ನಬೇಕಿದ್ದರೆ, ಈ ಪೋಸ್ಟ್ ಅನ್ನು 10 ಸಾವಿರ ಬಾರಿ ರೀ ಟ್ವೀಟ್ ಮಾಡಿ ಎಂದು ಪೋಸ್ಟ್ ಮಾಡಿದ್ದರು. ಇದನ್ನು ಅಭಿಮಾನಿಗಳು 13 ಸಾವಿರ ಬಾರಿ ರೀ ಟ್ವೀಟ್ ಮಾಡಿದ್ದು 46 ಸಾವಿರ ಲೈಕ್ ಗಳು ಹರಿದು ಬಂದಿವೆ. ಇದಾದ ಅರ್ಧಗಂಟೆಯ ಬಳಿಕ ಚಾಹಲ್ ತಮ್ಮ ಕುರಿತಾಗಿ ಮತ್ತೊಂದು ಪೋಸ್ಟ್ ಕೂಡ ಮಾಡಿದ್ದಾರೆ. 

Scroll to load tweet…


ಹಲವು ವರ್ಷಗಳ ಕಾಲ ಆರ್ ಸಿಬಿ ಪರವಾಗಿ ಆಡಿದ್ದ ಯಜುವೇಂದ್ರ ಚಾಹಲ್ ಅವರನ್ನು ಈ ಬಾರಿಯ ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡ 6.5 ಕೋಟಿ ರೂಪಾಯಿಗೆ ಖರೀದಿಸಿತ್ತು. ಕೆಲ ದಿನಗಳ ಹಿಂದೆ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡ್ತೇನೆ ಎಂದು ಯಜುವೇಂದ್ರ ಚಾಹಲ್ ಹೇಳಿದ ಬೆನ್ನಲ್ಲಿಯೇ ಈ ಕೈಚಳಕವನ್ನು ತೋರಿಸಿದ್ದಾರೆ.

Team India ನಾಯಕ ರೋಹಿತ್‌ ಶರ್ಮಾ ಟ್ವಿಟರ್‌ ಖಾತೆ ಹ್ಯಾಕ್‌? ಕಾಲೆಳೆದ ಚಹಲ್..!
 ಆದರೆ, ಅವರಿಗೆ ಟ್ವಿಟರ್ ಖಾತೆಯ ಪಾಸ್ ವರ್ಡ್ ಅನ್ನು ಫ್ರಾಂಚೈಸಿಯ ಮುಖ್ಯವ್ಯವಸ್ಥಾಪಕ ಅಧಿಕಾರಿ ಜೇಕ್ ಲುಶ್ ಮ್ಯಾಕ್ರಮ್ ಅವರು ನೀಡಿದ್ದರು. ಕೇರಳದ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ ಅವರನ್ನು ಐಪಿಎಲ್ 2021 ಟೂರ್ನಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡದ ಕ್ಯಾಪ್ಟನ್‌ ಆಗಿ ನೇಮಕ ಮಾಡಿದೆ. ಈಗ ಐಪಿಎಲ್ 2022 ಟೂರ್ನಿ ಸಲುವಾಗಿ 14 ಕೋಟಿ ರೂ.ಗಳ ಭಾರಿ ಬೆಲೆ ನೀಡಿ ಸ್ಯಾಮ್ಸನ್‌ ಅವರನ್ನು ತನ್ನಲ್ಲೇ ಉಳಿಸಿಕೊಂಡಿತ್ತು.

Yuzvendra Chahal : "ಪಾಜಿ, ನಿಂಬು ಕಟ್ಟಾ ಹೇ" ರೀಲ್ ಗೆ ಸಖತ್ ರೆಸ್ಪಾನ್ಸ್!
ಅಶ್ವಿನ್ ಮತ್ತು ಚಾಹಲ್ ಹೊರತಾಗಿ ರಾಜಸ್ಥಾನ್‌ ರಾಯಲ್ಸ್‌ ತಂಡದಲ್ಲಿ ಕೆಸಿ ಕಾರಿಯಪ್ಪ, ತೇಜಸ್‌ ಬರೋಕ ಮತ್ತು ರಿಯಾನ್‌ ಪರಾಗ್‌ ಅವರಂತಹ ಸ್ಪಿನ್ನರ್‌ಗಳಿದ್ದಾರೆ. ಐಪಿಎಲ್ 2022 ಟೂರ್ನಿ, ಮಾರ್ಚ್ 26ರಿಂದ ಮೇ 29ರವರೆಗೆ ನಡೆಯಲಿದ್ದು, ರಾಜಸ್ಥಾನ್‌ ರಾಯಲ್ಸ್‌ ತಂಡ ತನ್ನ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಎದುರು ಮಾರ್ಚ್‌ 29ರಂದು ಮುಂಬೈನಲ್ಲಿ ಕಾದಾಡಲಿದೆ.