Yuzvendra Chahal : "ಪಾಜಿ, ನಿಂಬು ಕಟ್ಟಾ ಹೇ" ರೀಲ್ ಗೆ ಸಖತ್ ರೆಸ್ಪಾನ್ಸ್!
ಇನ್ಸ್ ಟಾಗ್ರಾಮ್ ನಲ್ಲಿ ಸಖತ್ ರೀಲ್ಸ್ ಮಾಡುವ ಚಾಹಲ್
ಧವನ್, ಕುಲದೀಪ್ ಜತೆಗೂಡಿ ಹೊಸ ರೀಲ್ ಪೋಸ್ಟ್ ಮಾಡಿರುವ ಚಾಹಲ್
ಇನ್ಸ್ ಟಾಗ್ರಾಮ್ ನಲ್ಲಿ 5 ಮಿಲಿಯನ್ ವೀವ್ಸ್ ಪಡೆದುಕೊಂಡಿರುವ ರೀಲ್
ಬೆಂಗಳೂರು (ಫೆ. 16): ಟೀಮ್ ಇಂಡಿಯಾದ ಸೂಪರ್ ಸ್ಪಿನ್ನರ್ ಕ್ರಿಕೆಟ್ ನಿಂದ ನಿವೃತ್ತಿಯಾದ ಬಳಿಕ ನಟನೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯಬಹುದು. ಐಪಿಎಲ್ ಹರಾಜಿನಲ್ಲಿ ಇತ್ತೀಚೆಗೆ ರಾಜಸ್ಥಾನ ರಾಯಲ್ಸ್ ತಂಡ ಕೂಡಿಕೊಂಡಿರುವ ಯಜುವೇಂದ್ರ ಚಾಹಲ್, ಇನ್ಸ್ ಟಾಗ್ರಾಮ್ ನಲ್ಲಿ ಹೊಸ ರೀಲ್ ಅನ್ನು ಪೋಸ್ಟ್ ಮಾಡಿದ್ದು, ಇದನ್ನು ನೋಡಿದ ಬಳಿಕ ಹೆಚ್ಚಿನವರಿಗೆ ಈ ಅಭಿಪ್ರಾಯ ಬರುವುದು ಗ್ಯಾರಂಟಿ. ಮಂಗಳವಾರ ಈ ವಿಡಿಯೋವನ್ನು ಚಾಹಲ್ ಹಂಚಿಕೊಂಡಿದ್ದು, ಇದರಲ್ಲಿ ಚಾಹಲ್ ಅವರೊಂದಿಗೆ ಶಿಖರ್ ಧವನ್ ಹಾಗೂ ಕುಲದೀಪ್ ಯಾದವ್ ಕೂಡ ಇದ್ದಾರೆ.
ಮೂವರು ಒಂದೇ ಹಾಸಿಗೆಯಲ್ಲಿ ಕುಳಿತಿದ್ದರೆ, ಲಿಂಬೆಹಣ್ಣನ್ನು ಚಾಹಲ್ ನೆಕ್ಕುತ್ತಾ ಹೇಳಿರುವ ಲಿಪ್ ಸಿಂಕ್ ಡೈಲಾಗ್ ಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಇದು ಚಿತ್ರವೊಂದರ ಡೈಲಾಗ್ ಆಗಿದ್ದು, ಚಾಹಲ್ ಹಾಗೂ ಶಿಖರ್ ಧವನ್ ಅವರೊಂದಿಗೆ ಕುಲದೀಪ್ ಯಾದವ್ ಅವರ ನಟನೆ ಕೂಡ ಗಮನಸೆಳೆದಿದೆ.
ವಿಡಿಯೋ ಕ್ಲಿಪ್‌ನಲ್ಲಿ, ಯಜುವೇಂದ್ರ ಚಾಹಲ್, ಶಿಖರ್ ಧವನ್ ಮತ್ತು ಕುಲದೀಪ್ ಯಾದವ್ ತಮಾಷೆಯ ಸಂಭಾಷಣೆಗೆ ಲಿಪ್ ಸಿಂಕ್ ಮಾಡಿದ್ದಾರೆ. "ನಿಂಬು ಕಟ್ಟಾ ಹೈ ಯಾರ್ (ಗೆಳೆಯ ನಿಂಬೆ ತುಂಬಾ ಹುಳಿಯಾಗಿದೆ)," ಎಂದು ಹೇಳುವ ಚಾಹಲ್, ಧವನ್ ಕಡೆ ನೋಡುತ್ತಾರೆ. ಇದಕ್ಕೆ ಪ್ರತಿಯಾಗಿ ಶಿಖರ್ ಧವನ್, ಭಯ ಬೇಡ ಗೆಳೆಯ, ಸಾಧ್ಯವಾದರೇ ನಾನು ಸಿಹಿಯಾದ ನಿಂಬೆಹಣ್ಣು ತಂದು ಕೊಡುವೆ ಎನ್ನುವ ಡೈಲಾಗ್ ಗೆ ನಟಿಸಿದ್ದಾರೆ. ಇದನ್ನು ಕೇಳಿದ ಕುಲದೀಪ್ ಯಾದವ್ ಮಕ್ಕಳ ರೀತಿಯಲ್ಲಿ ನಗುವ ದೃಶ್ಯ ಇದಾಗಿದೆ.
Yuzvendra Chahal : ಪುಷ್ಪಾ ಡೈಲಾಗ್ ಗೆ ಚಾಹಲ್ ಮಸ್ತ್ ಲಿಪ್ ಸಿಂಕ್, ಕಾಮೆಂಟ್ ಮಾಡಿದ ವಾರ್ನರ್!
"ಖಟ್ಟಾ ನಿಂಬು (ಹುಳಿ ನಿಂಬೆ)," ಎಂದು ಯಜುವೇಂದ್ರ ಚಾಹಲ್ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊವನ್ನು ಹಂಚಿಕೊಳ್ಳುವಾಗ ಬರೆದಿದ್ದಾರೆ. ಈ ವಿಡಿಯೋವನ್ನು ಆಲ್ರೌಂಡರ್ ದೀಪಕ್ ಹೂಡಾ ಚಿತ್ರೀಕರಿಸಿದ್ದಾರೆ ಎಂದು ಚಾಹಲ್ ತಮ್ಮ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ಫೋಟೋ ಮತ್ತು ವಿಡಿಯೋ ಹಂಚಿಕೊಳ್ಳುವ ಸಾಮಾಜಿಕ ಜಾಲತಾಣದ ವೇದಿಕೆಯಾಗಿರುವ ಇನ್ಸ್ ಟಾಗ್ರಾಮ್ ನ ರೀಲ್ ನಲ್ಲಿ ಈ ವಿಡಿಯೋಗೆ 5 ಮಿಲಿಯನ್ ವೀವ್ಸ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ಇದೇ ಕ್ಲಿಪ್ ಅನ್ನು ಶಿಖರ್ ಧವನ್ ಕೂಡ ಹಂಚಿಕೊಂಡಿದ್ದು ಅಂದಾಜು 3.6 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಕಾಶ್ಮೀರದ ಚುಮು-ಚುಮು ಚಳಿಯಲ್ಲಿ ಯುಜುವೇಂದ್ರ ಚೆಹಲ್-ಧನಶ್ರೀ ವರ್ಮಾ ಫಸ್ಟ್ ಆನಿವರ್ಸರಿ..!
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಈ ವಿಡಿಯೋ ಚಿತ್ರೀಕರಿಸಿರುವ ದೀಪಕ್ ಹೂಡಾ, "ನಿಮ್ಮೆಲ್ಲರದು ನಟನೆ ಅದ್ಭುತ' ಎಂದು ಕಾಮೆಂಟ್ ನಲ್ಲಿ ಬರೆದಿದ್ದಾರೆ. "ಬಾಲಿವುಡ್ ಚಾಹಲ್ ಹಾಗೂ ಧವನ್ ಗೆ ಅವಕಾಶ ನೀಡುವತ್ತ ಗಮನ ನೀಡಬೇಕು. ಖಂಡಿತಾ ಈ ಚಿತ್ರ ಬ್ಲಾಕ್ ಬಸ್ಟರ್ ಆಗಲಿದೆ' ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬರು, "ನಿಮ್ಮೆಲ್ಲರ ನಟನೆ ಅದ್ಭುತವಾಗಿದೆ' ಎಂದು ಅಭಿಪ್ರಾಯ ತಿಳಿಸಿದ್ದಾರೆ. ಯಜುವೇಂದ್ರ ಚಾಹಲ್ ಸಾಮಾನ್ಯವಾಗಿ ಇನ್ಸ್ ಟಾಗ್ರಾಮ್ ನಲ್ಲಿ ತಮ್ಮ ಫನ್ನಿ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗೆ ಮದುವೆಯ ವಾರ್ಷಿಕೋತ್ಸವ ಆಚರಿಸಿಕೊಂಡ ಚಾಹಲ್ ಪತ್ನಿ ಧನಶ್ರೀ ವರ್ಮ ಜೊತೆಗೆ ಮಾಡಿರುವ ರೀಲ್ 16 ಮಿಲಿಯನ್ ವೀಕ್ಷಣೆ ಕಂಡು ವೈರಲ್ ಆಗಿತ್ತು. ಆ ಬಳಿಕ ಪುಷ್ಪಾ ಚಿತ್ರದ ಡೈಲಾಗ್ ಲಿಪ್ ಸಿಂಗ್ ವಿಡಿಯೋ ಮಾಡಿದ್ದರು. ಇದಕ್ಕೆ 10 ಮಿಲಿಯನ್ ವೀಕ್ಷಣೆ ದಾಖಲಾಗಿತ್ತು.