Team India ನಾಯಕ ರೋಹಿತ್‌ ಶರ್ಮಾ ಟ್ವಿಟರ್‌ ಖಾತೆ ಹ್ಯಾಕ್‌? ಕಾಲೆಳೆದ ಚಹಲ್..!

* ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟ್ವಿಟರ್ ಅಕೌಂಟ್ ಹ್ಯಾಕ್

* ಕ್ರಿಕೆಟ್‌ ಬಾಲ್‌ ತಿನ್ನಬಹುದೇ? ಎಂದು ರೋಹಿತ್ ಖಾತೆಯಿಂದ ಟ್ವೀಟ್

* ಅಣ್ಣಾ ಎಲ್ಲಾ ಸರಿಯಿದೆ ತಾನೆ ಎಂದ ಸ್ಪಿನ್ನರ್ ಯುಜುವೇಂದ್ರ ಚಹಲ್

Team India Captain Rohit Sharma bizarre tweets goes Viral Yuzvendra Chahal reacts kvn

ನವದೆಹಲಿ(ಮಾ.02): ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ (Rohit Sharma) ಅವರ ಟ್ವೀಟರ್‌ ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್‌ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಮಂಗಳವಾರ ರೋಹಿತ್‌ ಅವರ ಅಧಿಕೃತ ಖಾತೆಯಿಂದ ಟಾಸ್‌ ಬಗ್ಗೆ ಮೊದಲ ಟ್ವೀಟ್‌ ಮಾಡಲಾಗಿತ್ತು. ಕೆಲ ಗಂಟೆಗಳ ಬಳಿಕ ಕ್ರಿಕೆಟ್‌ ಚೆಂಡಿನ ಬಗ್ಗೆ ಟ್ವೀಟ್‌ ಮಾಡಲಾಗಿದೆ. ಟ್ವೀಟ್‌ಗಳು ಆಹಾರ ಸೇವನೆ, ಸೋಮಾರಿತನದ ಬಗ್ಗೆಯೇ ಆಗಿರುವ ಕಾರಣ, ರೋಹಿತ್‌ರ ಖಾತೆ ಹ್ಯಾಕ್‌ ಆಗಿರಬಹುದು ಎಂದು ಹಲವರು ಅಭಿಪ್ರಾಯಿಸಿದ್ದಾರೆ. ಖಾತೆ ಹ್ಯಾಕ್‌ ಆಗಿ ಹಲವು ಗಂಟೆಗಳಾದರೂ ಅದು ಸರಿಹೋಗದೆ ಇರುವುದು ಅಚ್ಚರಿಗೆ ಕಾರಣವಾಗಿದೆ.

ಲಂಕಾ ಎದುರಿನ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ಬೀಗುತ್ತಿರುವ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ(Team India), ಇದೀಗ ಟೆಸ್ಟ್ ಸರಣಿಯನ್ನಾಡಲು ಸಜ್ಜಾಗುತ್ತಿದೆ. ಮಾರ್ಚ್‌ 04ರಿಂದ ಮೊಹಾಲಿಯಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳು ಮೊದಲ ಪಂದ್ಯವನ್ನಾಡಲಿದೆ. ಇದೇ ಮೊದಲ ಬಾರಿಗೆ ರೋಹಿತ್ ಶರ್ಮಾ ಪೂರ್ಣ ಪ್ರಮಾಣದ ನಾಯಕನಾಗಿ ಭಾರತ ಟೆಸ್ಟ್ ತಂಡವನ್ನು ಮುನ್ನಡೆಸಲಿದ್ದಾರೆ. ಟೆಸ್ಟ್ ಸರಣಿಗೂ ಮುನ್ನ ರೋಹಿತ್ ಶರ್ಮಾ ಅವರ ಈ ಟ್ವೀಟ್‌ಗಳು ಅಚ್ಚರಿಗೆ ಕಾರಣವಾಗಿವೆ. 

ಮೊದಲ ಟ್ವೀಟ್‌ನಲ್ಲಿ ಕ್ರಿಕೆಟ್‌ ಬಾಲ್‌ ತಿನ್ನಬಹುದೇ? ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಟೀಂ ಇಂಡಿಯಾ ಲೆಗ್ ಸ್ಪಿನ್ನರ್ ಅಣ್ಣಾ..? ಏನಾಗಿದೆ, ಎಲ್ಲಾ ಸರಿಯಿದೆ ತಾನೆ ಎಂದು ಪ್ರಶ್ನಿಸಿದ್ದಾರೆ.

ಇನ್ನು ಖ್ಯಾತ ವೀಕ್ಷಕ ವಿವರಣೆಗಾರ ಹರ್ಷಾ ಬೋಗ್ಲೆ ಕೂಡಾ ಟ್ವೀಟ್ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಎಲ್ಲಾ ಸರಿಯಿದೆಯಾ ಕ್ಯಾಪ್ಟನ್‌? ಎಂದು ಪ್ರಶ್ನಿಸಿದ್ದಾರೆ.

2ನೇ ಅಭ್ಯಾಸ ಪಂದ್ಯದಲ್ಲೂ ಗೆದ್ದ ಭಾರತ ವನಿತೆಯರು

ರಂಗಿಯೋರಾ(ನ್ಯೂಜಿಲೆಂಡ್‌): ಭಾರತ ಮಹಿಳಾ ತಂಡ ಐಸಿಸಿ ಏಕದಿನ ವಿಶ್ವಕಪ್‌ನ 2ನೇ ಅಭ್ಯಾಸ ಪಂದ್ಯದಲ್ಲೂ ಗೆಲುವು ಸಾಧಿಸಿದ್ದು, ವಿಶ್ವಕಪ್‌ಗೆ ಭರ್ಜರಿ ಸಿದ್ಧತೆ ಕೈಗೊಂಡಿದೆ. ಮಂಗಳವಾರ ಭಾರತ, ವೆಸ್ಟ್‌ಇಂಡೀಸ್‌ ವಿರುದ್ಧ 81 ರನ್‌ಗಳಿಂದ ಜಯಗಳಿಸಿತು. 

India Tour of Ireland ಜೂನ್‌ನಲ್ಲಿ ಐರ್ಲೆಂಡ್‌ ವಿರುದ್ಧ ಟಿ20 ಸರಣಿಯಾಡಲಿದೆ ಟೀಂ ಇಂಡಿಯಾ

ಮೊದಲು ಬ್ಯಾಟ್‌ ಮಾಡಿದ ಭಾರತ ಸ್ಮೃತಿ ಮಂಧಾನ (67), ದೀಪ್ತಿ ಶರ್ಮಾ(51) ಅರ್ಧಶತಕಗಳ ನೆರವಿನಿಂದ 50 ಓವರ್‌ಗಳಲ್ಲಿ 258 ರನ್‌ ಗಳಿಸಿ ಆಲೌಟ್‌ ಆಯಿತು. ಕಠಿಣ ಗುರಿ ಬೆನ್ನತ್ತಿದ ವಿಂಡೀಸ್‌, 9 ವಿಕೆಟ್‌ಗೆ 177 ರನ್‌ಗಳಿಸಿ ಸೋಲೊಪ್ಪಿಕೊಂಡಿತು. ಪೂಜಾ ವಸ್ತ್ರಾಕರ್‌ 3, ಮೇಘನಾ, ರಾಜೇಶ್ವರಿ, ದೀಪ್ತಿ ತಲಾ 2 ವಿಕೆಟ್‌ ಕಿತ್ತರು. ಭಾರತ ಮೊದಲ ಅಭ್ಯಾಸ ಪಂದ್ಯದಲ್ಲಿ ದ.ಆಫ್ರಿಕಾ ವಿರುದ್ಧ ಗೆದ್ದಿತ್ತು.

ಏಕದಿನ ವಿಶ್ವಕಪ್‌ನಲ್ಲಿ ಆಡಲು ಸ್ಮೃತಿಗೆ ಅನುಮತಿ

ರಂಗಿಯೋರಾ(ನ್ಯೂಜಿಲೆಂಡ್‌): ಮಾ.4ರಿಂದ ಅರಂಭಗೊಳ್ಳಲಿರುವ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಆಡಲು ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾಗೆ ಬಿಸಿಸಿಐನಿಂದ ಅನುಮತಿ ದೊರೆತಿದೆ. 

ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಅಭ್ಯಾಸ ಪಂದ್ಯದ ವೇಳೆ ಸ್ಮೃತಿ ಹೆಲ್ಮೆಟ್‌ಗೆ ಚೆಂಡು ಬಡಿದಿತ್ತು. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಸ್ಕ್ಯಾನಿಂಗ್‌ಗೆ ಒಳಪಡಿಸಲಾಗಿತ್ತು. ಕಿವಿ ಕೆಳಗಿನ ಭಾಗದಲ್ಲಿ ಸಣ್ಣ ಪ್ರಮಾಣದ ಗಾಯವಾಗಿದ್ದು, ಮಾರ್ಚ್‌ 6ರಂದು ಪಾಕಿಸ್ತಾನ ವಿರುದ್ಧ ಭಾರತ ಆಡಲಿರುವ ಮೊದಲ ಪಂದ್ಯದ ವೇಳೆಗೆ ಸಂಪೂರ್ಣ ಗುಣಮುಖರಾಗಲಿದ್ದಾರೆ ಎಂದು ತಂಡಗಳು ಮೂಲಗಳು ತಿಳಿಸಿವೆ. ಸ್ಮೃತಿ ವಿಶ್ವಕಪ್‌ ಪಂದ್ಯಗಳನ್ನು ತಪ್ಪಿಸಿಕೊಳ್ಳಬಹುದು ಎನ್ನುವ ಆತಂಕ ಭಾರತ ತಂಡವನ್ನು ಕಾಡುತ್ತಿತ್ತು.

ಅಂಧ ಮಹಿಳಾ ಕ್ರಿಕೆಟ್: ಕರ್ನಾಟಕ ಶುಭಾರಂಭ

ಬೆಂಗಳೂರು: ಅಂಧ ಮಹಿಳೆಯರ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಕರ್ನಾಟಕ ಕ್ರಿಕೆಟ್ ತಂಡ ಶುಭಾರಂಭ ಮಾಡಿದೆ. ಮಂಗಳವಾರ ರಾಜಸ್ಥಾನ ವಿರುದ್ದದ ಪಂದ್ಯದಲ್ಲಿ ರಾಜ್ಯ ತಂಡವು 89 ರನ್‌ಗಳ ಗೆಲುವು ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡವು ನಿಗದಿತ 15 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 144 ರನ್ ಕಲೆಹಾಕಿತ್ತು. ಕರ್ನಾಟಕ ತಂಡದ ಪರ ಗಂಗಾ(44), ವರ್ಷಾ(24) ಉತ್ತಮ ರನ್‌ ಗಳಿಸಲು ನೆರವಾದರು.

ಇನ್ನು ಸವಾಲಿನ ಗುರಿ ಬೆನ್ನತ್ತಿದ ರಾಜಸ್ಥಾನ ತಂಡವು 13.5 ಓವರ್‌ಗಳಲ್ಲಿ 55 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಸುನಿತಾ 13 ರನ್ ನೀಡಿ 2 ವಿಕೆಟ್ ಪಡೆದರು. ರಾಜ್ಯ ತಂಡವು ಬುಧವಾರ ಗುಜರಾತ್ ವಿರುದ್ದ ಕಣಕ್ಕಿಳಿಯಲಿದೆ.

Latest Videos
Follow Us:
Download App:
  • android
  • ios