ಯೂಸುಫ್ ಪಠಾಣ್ ಅವರಿಗೆ ಪಶ್ಚಿಮ ಬಂಗಾಳದ ಬಹರಾಮ್‌ಪುರ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಟಿಎಂಸಿ ಪಕ್ಷವು ಘೋಷಿಸಿದೆ. ಬಹರಾಮ್‌ಪುರ ಕ್ಷೇತ್ರವು ಕಾಂಗ್ರೆಸ್‌ನ ಭದ್ರಕೋಟೆಯಾಗಿ ಗುರುತಿಸಿಕೊಂಡಿದೆ. ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಈ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಫೈಟ್ ನೀಡಲು ಮಾಜಿ ಕ್ರಿಕೆಟಿಗನಿಗೆ ಟಿಎಂಸಿ ಮಣೆ ಹಾಕಿದೆ.

ಕೋಲ್ಕತ(ಮಾ.10): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಎರಡು ವಿಶ್ವಕಪ್ ವಿಜೇತ ತಂಡದ ಸದಸ್ಯ ಯೂಸುಫ್ ಪಠಾಣ್ ಕ್ರಿಕೆಟ್ ಬಳಿಕ ಇದೀಗ ರಾಜಕೀಯದಲ್ಲಿ ತಮ್ಮ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಇದೀಗ ಮುಂಬರುವ ಲೋಕಸಭಾ ಚುನಾವಣೆಗೆ ಟಿಎಂಸಿ ಪಕ್ಷವು ಮೊದಲ ಹಂತದಲ್ಲಿ 42 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದು, ಯೂಸುಫ್ ಪಠಾಣ್‌ ಅವರನ್ನು ತಮ್ಮ ಪಕ್ಷದ ಅಭ್ಯರ್ಥಿಯನ್ನಾಗಿ ಘೋಷಿಸಿದೆ.

ಹೌದು, ಯೂಸುಫ್ ಪಠಾಣ್ ಅವರಿಗೆ ಪಶ್ಚಿಮ ಬಂಗಾಳದ ಬಹರಾಮ್‌ಪುರ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಟಿಎಂಸಿ ಪಕ್ಷವು ಘೋಷಿಸಿದೆ. ಬಹರಾಮ್‌ಪುರ ಕ್ಷೇತ್ರವು ಕಾಂಗ್ರೆಸ್‌ನ ಭದ್ರಕೋಟೆಯಾಗಿ ಗುರುತಿಸಿಕೊಂಡಿದೆ. ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಈ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಫೈಟ್ ನೀಡಲು ಮಾಜಿ ಕ್ರಿಕೆಟಿಗನಿಗೆ ಟಿಎಂಸಿ ಮಣೆ ಹಾಕಿದೆ.

Scroll to load tweet…

5 ಪಂದ್ಯಗಳ ಟೆಸ್ಟ್ ಸರಣಿ, 5 ಸ್ಟಾರ್ ಆಟಗಾರರ ಉಗಮ..!

ಭಾರತೀಯ ಕಾಂಗ್ರೆಸ್ ಪಕ್ಷವು ಇದುವರೆಗೂ ಪಶ್ಚಿಮ ಬಂಗಾಳದಲ್ಲಿ ತನ್ನ ಅಭ್ಯರ್ಥಿಗಳ ಹೆಸರನ್ನು ಘೋಷಿಸಿಲ್ಲ. ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಬಹರಾಮ್‌ಪುರ ಕ್ಷೇತ್ರದಿಂದ ಕಳೆದ ಐದು ಬಾರಿಯಿಂದ ಸ್ಪರ್ಧಿಸುತ್ತಾ ಬಂದಿದ್ದಾರೆ. ಮತ್ತೊಮ್ಮೆ ಇದೇ ಕ್ಷೇತ್ರದಿಂದ ಸ್ಪರ್ಧಿಸಲು ಅಧೀರ್ ರಂಜನ್ ಚೌಧರಿ ಬಯಸ್ಸಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯೂಸುಫ್ ಪಠಾಣ್ ಹಾಗೂ ಅಧೀರ್ ರಂಜನ್ ಚೌಧರಿ ನಡುವೆ ನೇರಾ ನೇರ ಹಣಾಹಣಿ ನಿರೀಕ್ಷಿಸಲಾಗಿದೆ. 

ಅಪ್ಪಟ ಕನ್ನಡ ಮಾತಾಡಿದ RCB ಮನೆ ದೇವ್ರು ಎಬಿ ಡಿವಿಲಿಯರ್ಸ್‌..! ವಿಡಿಯೋ ವೈರಲ್

ತೃಣಮೂಲ ಕಾಂಗ್ರೆಸ್ ಪಕ್ಷವು, INDIA ಮೈತ್ರಿಕೂಟದ ಭಾಗವಾಗಿದ್ದರೂ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯೇತರ ಪಕ್ಷದ ಜತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎನ್ನುವುದನ್ನು ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ. ಈ ಮೊದಲು ತೃಣಮೂಲ ಕಾಂಗ್ರೆಸ್ ಪಕ್ಷವು INDIA ಮೈತ್ರಿಕೂಟದ ಭಾಗವಾದ ಬಳಿಕ ಬಹರಾಮ್‌ಪುರ ಹಾಗೂ ಇನ್ನೊಂದು ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ಒಲವು ತೋರಿತ್ತು. ಆದರೆ ಕಾಂಗ್ರೆಸ್ ಪಕ್ಷವು ತಮಗೆ ಹೆಚ್ಚಿನ ಕ್ಷೇತ್ರಗಳು ಬೇಕು ಎಂದು ಪಟ್ಟು ಹಿಡಿದಿದ್ದರಿಂದ ಈ ಕ್ಷೇತ್ರ ಹಂಚಿಕೆ ಮಾತುಕತೆ ಮುರಿದು ಬಿತ್ತು. ಈ ಕಾರಣಕ್ಕಾಗಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧಿಸಲು ತೀರ್ಮಾನಿಸಿದೆ.