Asianet Suvarna News Asianet Suvarna News

RCB ಜೆರ್ಸಿ ಬಿಚ್ಚಿ, ಟ್ರೆಂಟ್ ಬೌಲ್ಟ್ ನೀಡಿದ RR ಜೆರ್ಸಿ ಧರಿಸಿದ ಬಾಲಕನ ವಿಡೀಯೋ ವೈರಲ್!

ರಾಜಸ್ಥಾನ್ ರಾಯಲ್ಸ್‌ನ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ನಿಂದ ಹಂಚಿಕೊಂಡ ಕ್ಲಿಪ್‌ನಲ್ಲಿ, ಸಂಭ್ರಮದಲ್ಲಿದ್ದ ಆರ್ ಸಿಬಿಯ ಪುಟ್ಟ ಅಭಿಮಾನಿಯೊಬ್ಬ ತನ್ನ ತಂಡದ ಜರ್ಸಿಯನ್ನು ಬಿಚ್ಚಿ, ರಾಜಸ್ಥಾನ ರಾಯಲ್ಸ್ ತಂಡದ ಟ್ರೆಂಟ್ ಬೌಲ್ಟ್ ನೀಡಿದ ಆರ್ ಆರ್ ತಂಡ ಜೆರ್ಸಿಯನ್ನು ಧರಿಸುತ್ತಾರೆ.
 

Young Fan Takes Off His RCB Jersey to Wear Rajasthan Royals Shirt Gifted by Trent Boult in Viral Video san
Author
Bengaluru, First Published May 28, 2022, 5:15 PM IST

ಅಹಮದಾಬಾದ್ (ಮೇ.28): ರಾಜಸ್ಥಾನ ರಾಯಲ್ಸ್ ತಂಡ ಶುಕ್ರವಾರ ರಾತ್ರಿ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2022ರ (IPL 2022) 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು (ROYAL CHALLENGERS BANGALORE) ಸೋಲಿಸಿ ಫೈನಲ್ ಗೆ ಲಗ್ಗೆ ಇಟ್ಟಿತು. ಈ ವೇಳೆ ಆರ್ ಸಿಬಿ ತಂಡದ ಅಭಿಮಾನಿಯಾಗಿದ್ದ ಪುಟ್ಟ ಬಾಲಕನ ಆಸೆಯನ್ನು ಟ್ರೆಂಟ್ ಬೌಲ್ಟ್ (trent boult) ಈಡೇರಿಸಿದ ವಿಡಿಯೋ ವೈರಲ್ ಆಗಿದೆ.

ಪಂದ್ಯ ಮುಗಿದ ಬಳಿಕ ಇಡೀ ಸ್ಟೇಡಿಯಂ ಖಾಲಿಯಾಗುತ್ತಿದ್ದ ಹೊತ್ತಿನಲ್ಲಿ, ರಾಜಸ್ಥಾನ ರಾಯಲ್ಸ್ (RAJASTHAN ROYALS)ತಂಡದ ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್ ಪೆವಿಲಿಯನ್ ಗೆ ಹಿಂದಿರುಗುವ ಹಾದಿಯಲ್ಲಿದ್ದರು. ಈ ವೇಳೆ ಆರ್ ಸಿಜಿ ಜೆರ್ಸಿ ಧರಿಸಿದ್ದ ಬಾಲಕನೊಬ್ಬ, ಟ್ರೆಂಟ್ ಬೌಲ್ಟ್ ಅವರ ರಾಜಸ್ಥಾನ ತಂಡದ ಜೆರ್ಸಿ( jersey) ಬೇಕು ಎಂದು ಕೇಳಿದ್ದ. ಇದನ್ನು ಗಮನಿಸಿದ ಬೌಲ್ಟ್ ನಿಂತ ಜಾಗದಲ್ಲಿಯೇ ತಮ್ಮ ಜೆರ್ಸಿ ಬಿಚ್ಚಿ ನೀಡುವ ಪ್ರಯತ್ನ ಮಾಡಿದರು. ಆದರೆ, ಕಬ್ಬಿಣದ ಬೇಲಿ ತಡೆಯಾಗಿದ್ದ ಕಾರಣ, ತಂಡದ ಸಿಬ್ಬಂದಿಯೊಬ್ಬರನ್ನು ಕರೆದು ತಮ್ಮ ಜೆರ್ಸಿಯನ್ನು ಅವರಿಗೆ ನೀಡಿ ಬಾಲಕನಿಗೆ ನೀಡುವಂತೆ ಸೂಚನೆ ನೀಡಿದ್ದರು. ಹುಡುಗ ತನ್ನ ಜೆರ್ಸಿಯನ್ನು ನಿಮಗೆ ನೀಡುವುದಾಗಿ ಹೇಳಿದರೂ, ಬೌಲ್ಟ್ ಮಾತ್ರ ಅದಕ್ಕೆ ಬೇಡ ಎಂದು ಹೇಳಿದ್ದರು.

ಅದರಂತೆ ಆರ್ ಆರ್ ತಂಡದ ಸಹಾಯಕ, ಸೀದಾ ಮೈದಾನದ ತುದಿಗೆ ಬಂದು, ಜೆರ್ಸಿಯನ್ನು ಹುಡುಗನತ್ತ ಎಸೆದಿದ್ದರು. ಜರ್ಸಿ ಸಿಕ್ಕ ಸಂಭ್ರಮದಲ್ಲಿ ಹುಡುಗ, ತಾನು ಧರಿಸಿದ್ದ ಆರ್ ಸಿಬಿಯ ಜೆರ್ಸಿಯನ್ನು ಬಿಚ್ಚಿ ಆರ್ ಆರ್ ತಂಡದ ಜೆರ್ಸಿ ಧರಿಸಿಕೊಂಡರು. ಈ ವಿಡಿಯೋವನ್ನು ರಾಜಸ್ಥಾನ ರಾಯಲ್ಸ್ ತಂಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.


"ನೀವು ಟ್ರೆಂಟ್ ಬೌಲ್ಟ್ ಅನ್ನು ಪ್ರೀತಿಸದೇ ಇರಲು ಹೇಗೆ ಸಾಧ್ಯ? #RRvRCB ನಂತರ ಅವರು ಯುವ ಅಭಿಮಾನಿಯೊಬ್ಬನ ದಿನವನ್ನು ಸ್ಪೆಷಲ್ ಆಗಿಸಿದರು.," ಎಂದು ಟ್ವಿಟರ್‌ನಲ್ಲಿ ವೀಡಿಯೊ ಜೊತೆಗೆ ರಾಜಸ್ಥಾನ ರಾಯಲ್ಸ್ ತಂಡ ಬರೆದುಕೊಂಡಿದೆ.

ಟ್ರೆಂಟ್ ಬೌಲ್ಟ್ ಹಾಲಿ ನಡೆಯುತ್ತಿರುವ ಐಪಿಎಲ್ ನಲ್ಲಿ 15 ವಿಕೆಟ್ ಗಳನ್ನು ಉರುಳಿಸುವ ಮೂಲಕ ಗಮನಸೆಳೆದಿದ್ದು, ರಾಜಸ್ಥಾನ ರಾಯಲ್ಸ್ ತಂಡದ ಪರವಾಗಿ ಉತ್ತಮ ನಿರ್ವಹಣೆ ನೀಡಿದ ಬೌಲರ್ ಗಳ ಪೈಕಿ ಒಬ್ಬರಾಗಿದ್ದರು. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಸೋತಿದ್ದ ರಾಜಸ್ಥಾನ ತಂಡ, ಫೈನಲ್‌ ಗೇರಲು ಸಿಕ್ಕ 2ನೇ ಅವಕಾಶದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 7 ವಿಕೆಟ್ ಗಳಿಂದ ಮಣಿಸಿತ್ತು.

IPL 2022: RCB ಸೋಲಿನ ನಡುವೆ ಕಚಗುಳಿಯಿಡುವ ಬೆಸ್ಟ್ ಮೀಮ್ಸ್‌ಗಳಿವು..!

ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಆರಂಭಿಕ ಆಟಗಾರ ಜೋಸ್ ಬಟ್ಲರ್ (Jose Buttler) ಬಾರಿಸಿದ ಹಾಲಿ ಸೀಸನ್ ನ ನಾಲ್ಕನೇ ಶತಕದ ನೆರವಿನಿಂದ, ಏಕಪಕ್ಷೀಯವಾಗಿದ್ದ ಪಂದ್ಯದಲ್ಲಿ ಬೆಂಗಳೂರು ತಂಡವನ್ನು ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ರಜತ್ ಪಾಟಿದಾರ್ ಅವರ ಅರ್ಧಶತಕದೊಂದಿಗೆ 8 ವಿಕೆಟ್ ಗೆ 157 ರನ್ ಗಳ ಸಾಧಾರಣ ಮೊತ್ತ ಪೇರಿಸಿತು. ಆರ್ ಆರ್ ಪರ ಪ್ರಸಿದ್ಧ್ ಕೃಷ್ಣ ಮತ್ತು ಒಬೆದ್ ಮೆಕಾಯ್ ತಲಾ ಮೂರು ವಿಕೆಟ್ ಉರುಳಿಸಿದರು. ಬಟ್ಲರ್ ನಂತರ ಮಿಂಚಿನ ಚೇಸ್‌ಗೆ ಕಾರಣರಾದರು, ಅಜೇಯ 106 ರನ್‌ಗಳನ್ನು ಸಿಡಿಸುವ ಮೂಲಕ ರಾಜಸ್ಥಾನ 18.1 ಓವರ್ ಗಳಲ್ಲಿ ಇನ್ನೂ 7 ವಿಕೆಟ್ ಬಾಕಿ ಇರುವಂತೆಯೇ ಗೆಲುವಿನ ದಡಸೇರಿತು.

IPL 2022: ರಾಯಲ್ಸ್‌ ಎದುರು ಆರ್‌ಸಿಬಿ ಸೋತಿದ್ದೆಲ್ಲಿ? ಇಲ್ಲಿವೆ 3 ಕಾರಣಗಳು..!

ಸೋಲಿನ ನಂತರ ಗೆಲುವಿನ ದಾರಿಗೆ ಮರಳುವುದು ನಮಗೆ ಅಭ್ಯಾಸವಾಗಿದೆ. ಟೂರ್ನಿಮೆಂಟ್ ಮುಗಿಯುವ ವೇಳೆಗೆ ಸಾಕಷ್ಟು ಬಾರಿ ತಂಡ ಏರಿಳಿತ ಕಾಣುತ್ತದೆ ಇದು ಸಹಜ ಕೂಡ. ನಾವು ಕೆಲ ಪಂದ್ಯ ಸೋತಿದ್ದೇವೆ. ಆದರೆ, ಸೋಲಿನ ನಂತರ ಗೆಲುವಿನ ದಾರಿಗೆ ಹೇಗೆ ಬರಬೇಕು ಎನ್ನುವುದು ನಮಗೆ ತಿಳಿದಿತ್ತು. ಇಡೀ ಟೂರ್ನಿಯಲ್ಲಿ ಉತ್ತಮವಾಗಿ ಆಡಿದ್ದೇವೆ' ಎಂದು ರಾಜಸ್ಥಾನ ತಂಡದ ನಾಯಕ ಸಂಜು ಸ್ಯಾಮ್ಸನ್ ಹೇಳಿದ್ದಾರೆ.

Follow Us:
Download App:
  • android
  • ios