ನವದೆಹಲಿ(ಮೇ.18): 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಪೃಥ್ವಿ ಶಾ ತೋರಿದ ಪ್ರದರ್ಶನವನ್ನು ಗಮನಿಸಿದರೆ ಆಯ್ಕೆ ಸಮಿತಿ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಆತನನ್ನು ಕಡೆಗಣಿಸಲು ಸಾಧ್ಯವೇ ಇಲ್ಲ ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ, 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಕೇವಲ 8 ಪಂದ್ಯಗಳನ್ನಾಡಿ 38.50 ಬ್ಯಾಟಿಂಗ್ ಸರಾಸರಿಯಲ್ಲಿ 166.48ರ ಸ್ಟ್ರೈಕ್‌ರೇಟ್‌ನಂತೆ 308 ರನ್‌ ಚಚ್ಚಿದ್ದರು. ಈ ಮೂಲಕ ಆರೆಂಜ್ ಕ್ಯಾಪ್ ಹೊಂದಿದ್ದ ಶಿಖರ್ ಧವನ್ ಬಳಿಕ ಟೂರ್ನಿಯಲ್ಲಿ ಗರಿಷ್ಠ ರನ್‌ ಬಾರಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಎರಡನೇ ಬ್ಯಾಟ್ಸ್‌ಮನ್ ಎನಿಸಿದ್ದರು.

ಸತತ 6 ಬೌಂಡರಿ ಬಾರಿಸಲು ನನಗೂ ಅಗಿರಲಿಲ್ಲ; ಪೃಥ್ವಿ ಸಾಧನೆಗೆ ಜೈ ಹೋ ಎಂದ ಸೆಹ್ವಾಗ್

ಪೃಥ್ವಿ ಶಾ ಇದೇ ರೀತಿಯಾದ ಬ್ಯಾಟಿಂಗ್‌ ಪ್ರದರ್ಶನ ಮುಂದುವರೆಸಿದರೆ, ಟಿ20 ವಿಶ್ವಕಪ್ ಟೂರ್ನಿಗೆ ಆತನನ್ನು ಪರಿಗಣಿಸಲೇಬೇಕಾಗುತ್ತದೆ. ಆತ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ತೋರಿದ ಫಾರ್ಮ್‌, ಗಳಿಸಿದ ರನ್‌ಗಳನ್ನು ಗಮನಿಸಿದರೆ ಆತನನ್ನು ಕಡೆಗಣಿಸಲು ಸಾಧ್ಯವೇ ಇಲ್ಲ ಎಂದು ಯೂಟೂಬ್‌ ಚಾನಲ್‌ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
 

ಈ ಆವೃತ್ತಿಯಲ್ಲಿ ಪೃಥ್ವಿ ಶಾ ಅಬ್ಬರಿಸಬಹುದು ಎಂದು ನಾವು ಈ ಮೊದಲೇ  ಮಾತನಾಡಿದ್ದೆವು. ಪಂದ್ಯದ ಮೊದಲ ಓವರ್‌ನಲ್ಲೇ 6 ಎಸೆತಗಳಲ್ಲಿ 6 ಬೌಂಡರಿ ಬಾರಿಸುವುದು ಅಷ್ಟು ಸುಲಭದ ಮಾತಲ್ಲ ಎಂದು ಚೋಪ್ರಾ ಹೇಳಿದ್ದಾರೆ.

ಐಪಿಎಲ್‌ 2021: ವೀಕ್ಷಣೆಯಲ್ಲಿ ದಾಖಲೆ ಬರೆದ ಚೆನ್ನೈ-ಮುಂಬೈ ಇಂಡಿಯನ್ಸ್‌ ಮ್ಯಾಚ್

ತನ್ನ ಅಂಡರ್‌ 19 ವಿಶ್ವಕಪ್ ಸಹಪಾಠಿ, ಕೋಲ್ಕತ ನೈಟ್‌ ರೈಡರ್ಸ್‌ ವೇಗಿ ಶಿವಂ ಮಾವಿ ಎಸೆದ ಪಂದ್ಯದ ಮೊದಲ ಓವರ್‌ನಲ್ಲೇ ಪೃಥ್ವಿ ಶಾ 6 ಎಸೆತಗಳಲ್ಲಿ 6 ಬೌಂಡರಿ ಚಚ್ಚುವ ಮೂಲಕ ತಾನೆಷ್ಟು ಅಪಾಯಕಾರಿ ಬ್ಯಾಟ್ಸ್‌ಮನ್ ಎನ್ನುವುದನ್ನು ಜಗತ್ತಿಗೆ ಸಾರಿ ಹೇಳಿದ್ದರು. 

ಚೊಚ್ಚಲ ಟೆಸ್ಟ್‌ ಪಂದ್ಯದಲ್ಲೇ ಆಕರ್ಷಕ ಶತಕ ಚಚ್ಚುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಪೃಥ್ವಿ ಶಾ, ಅದಾದ ಬಳಿಕ ಗಾಯದ  ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿದ್ದರು.