ಟೆಸ್ಟ್‌ ವಿಶ್ವಕಪ್: ರೋಹಿತ್ ಶರ್ಮಾ ನೇತೃತ್ವದ ಭಾರತವೇ ನಂ.1

ಬಾಂಗ್ಲಾದೇಶ ಎದುರಿನ ಮೊದಲ ಟೆಸ್ಟ್ ಪಂದ್ಯ ಗೆಲ್ಲುತ್ತಿದ್ದಂತೆಯೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

WTC Points Table India retains top spot Bangladesh slips to sixth kvn

ದುಬೈ: ಟೆಸ್ಟ್‌ನಲ್ಲಿ ಗೆಲುವಿನ ಓಟ ಮುಂದುವರಿಸಿರುವ ಟೀಂ ಇಂಡಿಯಾ, 2023-25ರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿದೆ. ಭಾನುವಾರ ಬಾಂಗ್ಲಾದೇಶ ವಿರುದ್ಧದ ಗೆಲುವಿನ ಮೂಲಕ 12 ಅಂಕಗಳನ್ನು ಪಡೆದಿರುವ ರೋಹಿತ್‌ ಶರ್ಮಾ ನಾಯಕತ್ವದ ಭಾರತ ತಂಡ ಗೆಲುವಿನ ಪ್ರತಿಶತವನ್ನು ಶೇಕಡಾ 71.67ಕ್ಕೆ ಹೆಚ್ಚಿಸಿಕೊಂಡಿದೆ.

ಭಾರತ ಈ ಬಾರಿ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 10 ಪಂದ್ಯಗಳನ್ನಾಡಿದೆ. 7 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ತಂಡ, 2ರಲ್ಲಿ ಸೋಲನುಭವಿಸಿ, 1 ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟುಕೊಂಡಿದೆ. ತಂಡ ಒಟ್ಟಾರೆ 88 ಅಂಕ ಗಳಿಸಿತ್ತಾದರೂ, ನಿಧಾನಗತಿ ಬೌಲಿಂಗ್ ಕಾರಣಕ್ಕೆ 2 ಅಂಕ ಕಳೆದುಕೊಂಡಿರುವ ಕಾರಣ ಸದ್ಯ 86 ಅಂಕಗಳನ್ನು ಹೊಂದಿದೆ. ಪಟ್ಟಿಯಲ್ಲಿ ಸದ್ಯ ಆಸ್ಟ್ರೇಲಿಯಾ 2ನೇ ಸ್ಥಾನದಲ್ಲಿದೆ. ಕಳೆದ ಬಾರಿ ಫೈನಲ್‌ನಲ್ಲಿ ಭಾರತವನ್ನು ಸೋಲಿಸಿ ಚಾಂಪಿಯನ್ ಆಗಿದ್ದ ಆಸ್ಟ್ರೇಲಿಯಾ ಸದ್ಯ ಶೇಕಡಾ 62.50 ಗೆಲುವಿನ ಪ್ರತಿಶತ ಹೊಂದಿದೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆದ್ದ ಶ್ರೀಲಂಕಾ(ಶೇ.50 ಗೆಲುವಿನ ಪ್ರತಿಶತ) 3ನೇ ಸ್ಥಾನದಲ್ಲಿದ್ದರೆ, ಚೊಚ್ಚಲ ಆವೃತ್ತಿಯ ಚಾಂಪಿಯನ್ ನ್ಯೂಜಿಲೆಂಡ್ ತಂಡ ಶೇಕಡಾ 42.86 ಗೆಲುವಿನ ಪ್ರತಿಶತದೊಂದಿಗೆ 4ನೇ ಸ್ಥಾನದಲ್ಲಿದೆ.

ಪಾದ್ರಿಯಾಗಬೇಕೆಂದು ಬಯಸಿದ್ದ ಈ ಕ್ರಿಕೆಟಿಗ ವಿಶ್ವದ ಅಪಾಯಕಾರಿ ವೇಗಿ; ಈತನ ದಾಳಿಗೆ ಎದುರಾಳಿ ಪಡೆ 38 ರನ್‌ಗೆ ಆಲೌಟ್!

ಕಳೆದೆರಡು ಬಾರಿ ಫೈನಲ್ ಪ್ರವೇಶಿಸಲು ವಿಫಲವಾಗಿರುವ ಇಂಗ್ಲೆಂಡ್ ತಂಡ ಸದ್ಯ ಶೇ.42.19 ಜಯದ ದಾಖಲೆಯೊಂದಿಗೆ 5ನೇ, ಬಾಂಗ್ಲಾದೇಶ (ಶೇಕಡಾ 39.29) 6ನೇ ಸ್ಥಾನಕ್ಕೆ ಕುಸಿದಿದೆ. ದಕ್ಷಿಣ ಆಫ್ರಿಕಾ (ಶೇಕಡಾ 38.89), ಪಾಕಿಸ್ತಾನ (ಶೇಕಡಾ 19.05) ಹಾಗೂ ವೆಸ್ಟ್ ಇಂಡೀಸ್ (ಶೇಕಡಾ 18.52) ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.

ಫೈನಲ್ ಮೇಲೆ ಭಾರತ ಕಣ್ಣು: ಲೆಕ್ಕಾಚಾರ ಹೇಗೆ?

ಭಾರತ ತಂಡ ಕಳೆದೆರಡು ಆವೃತ್ತಿಗಳಲ್ಲಿ ಫೈನಲ್ ಪ್ರವೇಶಿಸಿತ್ತು. ಆದರೆ ಕ್ರಮವಾಗಿ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ಫೈನಲ್‌ನಲ್ಲಿ ಸೋತು ಪ್ರಶಸ್ತಿ ತಪ್ಪಿಸಿಕೊಂಡಿತ್ತು. ಭಾರತ ಈ ಬಾರಿಯೂ ಫೈನಲ್‌ಗೇರುವ ಫೇವರಿಟ್ ತಂಡ ಎನಿಸಿಕೊಂಡಿದೆ. ರೋಹಿತ್‌ ಪಡೆಗೆ ಇನ್ನು 9 ಟೆಸ್ಟ್ ಪಂದ್ಯಗಳು ಬಾಕಿ ಇವೆ. ಬಾಂಗ್ಲಾವಿರುದ್ಧ ಒಂದು, ಅಕ್ಟೋಬರ್ - ನವೆಂಬರ್‌ನಲ್ಲಿ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳನ್ನು ಆಡಲಿವೆ. 

ಶೇನ್ ವಾರ್ನ್ ರೆಕಾರ್ಡ್ ಸರಿಗಟ್ಟಿದ ಅಶ್ವಿನ್; ರವಿ ಯಶಸ್ಸಿನಲ್ಲಿ ಧೋನಿಗೂ ಸಲ್ಲಬೇಕು ಕ್ರೆಡಿಟ್..!

ಬಳಿಕ ನ.22ರಿಂದ 2025ರ ಜ.7ರ ವರೆಗೆ ಆಸ್ಟ್ರೇಲಿಯಾ ವಿರುದ್ದ ಪಂದ್ಯಗಳ ನಿರ್ಣಾಯಕ ಸರಣಿಯಲ್ಲಿ ಪಾಲ್ಗೊಳ್ಳಲಿವೆ. ಭಾರತ ಉಳಿದ 9 ಪಂದ್ಯಗಳ ಪೈಕಿ 5ರಲ್ಲಿ ಗೆದ್ದರೂ ನಿರಾಯಾಸವಾಗಿ ಫೈನಲ್‌ಗೇರಲಿದೆ. 4ರಲ್ಲಿ ಗೆದ್ದು, 1 ಪಂದ್ಯದಲ್ಲಿ ಡ್ರಾ ಸಾಧಿಸಿದರೂ ತಂಡದ ಗೆಲುವಿನ ಪ್ರತಿಶತ ಶೇ.60ಕ್ಕಿಂತ ಹೆಚ್ಚಿರಲಿದೆ. ಆಗಲೂ ಭಾರತ ಫೈನಲ್ ಪ್ರವೇಶಿಸುವ ಸಾಧ್ಯತೆ ಹೆಚ್ಚು.
 

Latest Videos
Follow Us:
Download App:
  • android
  • ios