WTC Final ಟ್ರಾವಿಸ್ ಶತಕ, ಸ್ಮಿತ್ 95 ರನ್; ಆಸಿಸ್ ಬೃಹತ್ ಮೊತ್ತಕ್ಕೆ ಬಳಲಿದ ಭಾರತ!
ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಮೊದಲ ದಿನವೇ ಆಸ್ಟ್ರೇಲಿಯಾ ಮಿಂಚಿನ ಪ್ರದರ್ಶನ ನೀಡಿದೆ. ಪ್ರಮುಖ ಮೂರು ವಿಕೆಟ್ ಕಳೆದುಕೊಂಡರು ಟ್ರಾವಿಸ್ ಹೆಡ್ ಶತಕ, ಸ್ಟೀವ್ ಸ್ಮಿತ್ ಹಾಫ್ ಸೆಂಚುರಿಯಿಂದ ಆಸ್ಟ್ರೇಲಿಯಾ ಮೊದಲ ದಿನದ ಗೌರವಕ್ಕೆ ಪಾತ್ರವಾಗಿದೆ.
ಓವಲ್(ಜೂ.07): ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಮೊದಲ ದಿನವೇ ರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಆದರೆ ಟ್ರಾವಿಸ್ ಹೆಡ್, ಸ್ಟೀವ್ ಸ್ಮಿತ್ ಅಬ್ಬರಕ್ಕೆ ಆಸ್ಟ್ರೇಲಿಯಾ ಮೊದಲ ದಿನದ ಗೌರವ ಸಂಪಾದಿಸಿದೆ. ಟೀಂ ಇಂಡಿಯಾ ಪ್ರಮುಖ ಮೂರ ವಿಕೆಟ್ ಕಬಳಿಸಿದರೂ ಆಸ್ಟ್ರೇಲಿಯಾ ಕಟ್ಟಿ ಹಾಕಲು ಸಾಧ್ಯವಾಗಿಲ್ಲ.ಟ್ರಾವಿಸ್ ಹೆಡ್ ಆಕರ್ಷಕ ಸೆಂಚುರಿ ಸಿಡಿಸಿದರೆ, ಸ್ಟೀವ್ ಸ್ಮಿತ್ ಅಜೇಯ 95 ರನ್ ಮೂಲಕ ಅಬ್ಬರಿಸಿದ್ದಾರೆ. ಇದರ ಪರಿಣಾಮ ಮೊದಲ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 3 ವಿಕೆಟ್ ನಷ್ಟಕ್ಕೆ 327 ರನ್ ಸಿಡಿಸಿದೆ.
ಟಾಸ್ ಗೆದ್ದ ಟೀಂ ಇಂಡಿಯಾ , ಆಸೀಸ್ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿತು. ಆಸ್ಟ್ರೇಲಿಯಾದ ಆರಂಭದಲ್ಲೇ ಉಸ್ಮಾನ್ ಖವಾಜ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಓವಲ್ ಮೈದಾನದ ಪಿಚ್ ಕಂಡೀಷನ್ ಲಾಭ ಪಡೆದುಕೊಂಡ ಆಸ್ಟ್ರೇಲಿಯಾ ಅಷ್ಟೇ ವೇಗದಲ್ಲಿ ತಿರುಗೇಟು ನೀಡಿತು. ಡೇವಿಡ್ ವಾರ್ನರ್ ಹಾಗೂ ಮಾರ್ನಸ್ ಲಬುಶಾನೆ ಜೊತೆಯಾಟದಿಂದ ಆಸೀಸ್ ಚೇತರಿಸಿಕೊಂಡಿತು.
WTC Final: ಆಂಗ್ಲರ ನಾಡಿನಲ್ಲಿ ರಾರಾಜಿಸಿದ ಭಾರತದ ತ್ರಿವರ್ಣ ಧ್ವಜ..!
ಡೇವಿಡ್ ವಾರ್ನರ್ 43 ರನ್ ಸಿಡಿಸಿ ಔಟಾದರು. ಮಾರ್ನಸ್ ಲಬುಶಾನೆ 26 ರನ್ ಸಿಡಿಸಿ ಔಟಾದರು. ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಸಿರಾಜ್ ತಲಾ ಒಂದು ವಿಕೆಟ್ ಕಬಳಿಸಿ ಟೀಂ ಇಂಡಿಯಾ ಅಲ್ಪ ಮುನ್ನಡೆ ತಂದುಕೊಟ್ಟರು. ಆದರೆ ಸ್ಟೀವನ್ ಸ್ಮಿತ್ ಹಾಗೂ ಟ್ರಾವಿಸ್ ಹೆಡ್ ಜೊತೆಯಾಟಕ್ಕೆ ಟೀಂ ಇಂಡಿಯಾ ಸುಸ್ತಾಯಿತು.
ಟೀಂ ಇಂಡಿಯಾ ತನ್ನೆಲ್ಲಾ ಶಕ್ತಿ ಬಳಸಿ ಜೊತೆಯಾಟಕ್ಕೆ ಬ್ರೇಕ್ ಹಾಕಲು ಪ್ರಯತ್ನಿಸಿತು. ಆದರೆ ಸಾಧ್ಯವಾಗಲಿಲ್ಲ. ಟ್ರಾವಿಸ್ ಹೆಡ್ ಹಾಗೂ ಸ್ಮಿತ್ ಹೋರಾಟದಿಂದ ಆಸ್ಟ್ರೇಲಿಯಾ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು. ಹೆಡ್ ಆಕರ್ಷಕ ಸೆಂಚುರಿ ಸಿಡಿಸಿ ಮಿಂಚಿದರು. ಇತ್ತ ಸ್ಮಿತ್ ಹಾಫ್ ಸೆಂಚುರಿ ದಾಖಲಿಸಿದರು. ದಿನದಾಟದ ಅಂತ್ಯದಲ್ಲಿ ಹೆಡ್ ಅಜೇಯ 146 ರನ್ ಸಿಡಿಸಿದರೆ. ಸ್ಮಿತ್ ಅಜೇಯ 95 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಮೊದಲ ದಿನದಾಟದಲ್ಲಿ ಹೆಡ್ ಹಾಗೂ ಸ್ಮಿತ್ ಹೋರಾಟದಿಂದ ಆಸ್ಟ್ರೇಲಿಯಾ 3 ವಿಕೆಟ್ ನಷ್ಟಕ್ಕೆ 327 ರನ್ ಸಿಡಿಸಿದೆ.
Ashes Test: ಇಂಗ್ಲೆಂಡ್ ತಂಡ ಪ್ರಕಟ, ನಿವೃತ್ತಿ ವಾಪಾಸ್ ಪಡೆದು ಆಂಗ್ಲರ ಪಡೆ ಕೂಡಿಕೊಂಡ ಮೋಯಿನ್ ಅಲಿ
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಿಂದ ಸ್ಪಿನ್ ಬೌಲರ್ ಆರ್ ಅಶ್ವಿನ್ ಹೊರಗಿಟ್ಟ ಟೀಂ ಇಂಡಿಯಾ ನಿರ್ಧಾರಕ್ಕೆ ಹಲವು ಮಾಜಿ ಕ್ರಿಕೆಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಂಬರ್ 1 ಟೆಸ್ಟ್ ಬೌಲರ್ ಹೊರಗಿಟ್ಟಿರುವುದು ಟೀಂ ಇಂಡಿಯಾಗೆ ದುಬಾರಿಯಾಗಲಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಮೊದಲ ದಿನದಲ್ಲಿ ಭಾರತ 3 ವಿಕೆಟ್ ಕಬಳಿಸಿದರೆ, ಮೂರು ವಿಕೆಟ್‌ಗಳು ವೇಗಿಗಳ ಪಾಲಾಗಿದೆ. ರವೀಂದ್ರ ಜಡೇಜಾ 14 ಓವರ್ ಬೌಲಿಂಗ್ ಮಾಡಿದ್ದಾರೆ. ಆದರೆ ಸ್ಪಿನ್ ಬೌಲಿಂಗ್‌ಗೆ ವಿಕೆಟ್ ಬಿದ್ದಿಲ್ಲ. ಇತ್ತ ಅಶ್ವಿನ್ ಅಲಭ್ಯತೆ ಮೊದಲ ದಿನವೇ ಕಾಡಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಭಾರತ ತಂಡ
ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ,ಶ್ರೀಕಾರ್ ಭರತ್, ರವೀಂದ್ರ ಜಡೇಜಾ, ಶಾರ್ದುಲ್ ಠಾಕೂರ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್