* ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತಕ್ಕೆ ಡಬಲ್‌ ಶಾಕ್* ಮೊದಲ ಸೆಷನ್‌ನಲ್ಲೇ ಕೊಹ್ಲಿ-ಪೂಜಾರ ವಿಕೆಟ್ ಪತನ* ಎರಡು ವಿಕೆಟ್ ಕಬಳಿಸಿದ ಕೈಲ್ ಜೇಮಿಸನ್

ಸೌಥಾಂಪ್ಟನ್‌(ಜೂ.23): ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದ ಕೊನೆಯ ದಿನದಾಟದ ಆರಂಭಲ್ಲೇ ಭಾರತಕ್ಕೆ ಅತಿದೊಡ್ಡ ಆಘಾತ ಎದುರಾಗಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ್ ಪೂಜಾರ ಅವರನ್ನು ಪೆವಿಲಿಯನ್ನಿಗಟ್ಟುವಲ್ಲಿ ಕೈಲ್ ಜೇಮಿಸನ್ ಯಶಸ್ವಿಯಾಗಿದ್ದಾರೆ. 

ಹೌದು, ಐದನೇ ದಿನದಾಟದಂತ್ಯಕ್ಕೆ 8 ರನ್‌ಗಳೊಂದಿಗೆ ಇನಿಂಗ್ಸ್ ಆರಂಭಿಸಿದ ವಿರಾಟ್‌ ಕೊಹ್ಲಿ 13 ರನ್‌ ಬಾರಿಸಿದ್ದಾಗ, ಕೈಲ್ ಜೇಮಿಸನ್ ಬೌಲಿಂಗ್‌ನಲ್ಲಿ ವಿಕೆಟ್‌ ಕೀಪರ್ ವ್ಯಾಟ್ಲಿಂಗ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಮೊದಲ ಇನಿಂಗ್ಸ್‌ನಲ್ಲೂ ವಿರಾಟ್ ಕೊಹ್ಲಿ ಆರ್‌ಸಿಬಿಯಾಗಿರುವ ಜೇಮಿಸನ್‌ಗೆ ವಿಕೆಟ್ ಒಪ್ಪಿಸಿದ್ದರು. ಮೊದಲ ಇನಿಂಗ್ಸ್‌ನಲ್ಲಿ 44 ರನ್‌ ಗಳಿಸಿದ್ದ ಕೊಹ್ಲಿಯನ್ನು ಜೇಮಿಸನ್‌ ಎಲ್‌ಬಿ ಬಲೆಗೆ ಕೆಡುವುವಲ್ಲಿ ಯಶಸ್ವಿಯಾಗಿದ್ದರು.

ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌: ಕೊನೆಯ ದಿನದಾಟದ ಹವಾಮಾನ ರಿಪೋರ್ಟ್‌ ಔಟ್..!

Scroll to load tweet…

ಇದರ ಬೆನ್ನಲ್ಲೇ ಟೆಸ್ಟ್‌ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಸಹಾ 15 ರನ್‌ ಬಾರಿಸಿ ಜೇಮಿಸನ್‌ಗೆ ಎರಡನೇ ಬಲಿಯಾಗಿದ್ದಾರೆ

Scroll to load tweet…

ಸದ್ಯ 37.3 ಓವರ್ ಅಂತ್ಯದ ವೇಳೆಗೆ ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡು 72 ರನ್‌ ಬಾರಿಸಿದ್ದು, ಒಟ್ಟಾರೆ 40 ರನ್‌ಗಳ ಮುನ್ನಡೆ ಸಾಧಿಸಿದೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ರಿಷಭ್ ಪಂತ್ ಹಾಗೂ ಅಜಿಂಕ್ಯ ರಹಾನೆ ಕ್ರೀಸ್‌ನಲ್ಲಿದ್ದಾರೆ.