Asianet Suvarna News Asianet Suvarna News

ದಿಗ್ಗಜ ಕ್ರಿಕೆಟಿಗ ಶೇನ್‌ ವಾರ್ನ್‌ಗೇ ಸ್ಪಿನ್‌ ಪಾಠ ಮಾಡಿದ ಭೂಪ!

* ಸ್ಪಿನ್ ದಿಗ್ಗಜ ಶೇನ್‌ ವಾರ್ನ್‌ಗೆ ಬೌಲಿಂಗ್ ಪಾಠ ಮಾಡಿದ ಕ್ರಿಕೆಟ್ ಅಭಿಮಾನಿ

* ಸೌಥಾಂಪ್ಟನ್‌ ಪಿಚ್‌ ಕುರಿತಂತೆ ಟ್ವೀಟ್‌ ಮಾಡಿದ್ದ ಶೇನ್ ವಾರ್ನ್‌

* ವಾರ್ನ್‌ಗೆ ಸ್ಪಿನ್ ಪಾಠ ಹೇಳಿಕೊಟ್ಟ ಅಭಿಮಾನಿ ಟ್ವೀಟ್ ವೈರಲ್

WTC Final Cricket fan asks Shane Warne if he understands how spin works kvn
Author
New Delhi, First Published Jun 21, 2021, 11:09 AM IST

ನವದೆಹಲಿ(ಜೂ.21): ಭಾರತ ವಿರುದ್ಧ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಸ್ಪಿನ್ನರ್‌ ಆಡಿಸದ ನ್ಯೂಜಿಲೆಂಡ್‌ ತಂಡದ ನಿರ್ಧಾರವನ್ನು ಟ್ವೀಟರಲ್ಲಿ ಟೀಕಿಸಿದ್ದಕ್ಕೆ ಆಸ್ಪ್ರೇಲಿಯಾದ ದಿಗ್ಗಜ ಸ್ಪಿನ್ನರ್‌ ಶೇನ್‌ ವಾರ್ನ್‌ಗೆ ಕ್ರಿಕೆಟ್‌ ಅಭಿಮಾನಿಯೊಬ್ಬ ಸ್ಪಿನ್‌ ಪಾಠ ಮಾಡಿದ್ದಾನೆ. 

‘ಈ ಪಿಚ್‌ನಲ್ಲಿ ನ್ಯೂಜಿಲೆಂಡ್‌ ಸ್ಪಿನ್ನರ್‌ ಆಡಿಸದೆ ಇರುವುದು ನಿರಾಸೆ ಮೂಡಿಸಿದೆ. ಭಾರತ ಇಬ್ಬರು ಸ್ಪಿನ್ನರ್‌ಗಳೊಂದಿಗೆ ಆಡುತ್ತಿದ್ದು, ಉತ್ತಮ ನಿರ್ಧಾರ ಎನಿಸುತ್ತಿದೆ’ ಎಂದು ವಾರ್ನ್‌ ಟ್ವೀಟಿಸಿದ್ದರು. 

ಇದಕ್ಕೆ ಪ್ರತಿಕ್ರಿಯಿಸಿರುವ ಅಭಿಮಾನಿ ‘ವಾರ್ನ್‌ ನಿಮಗೆ ಸ್ಪಿನ್‌ ಹೇಗೆ ವರ್ಕ್ ಆಗುತ್ತೆ ಗೊತ್ತಾ?, ಪಿಚ್‌ ಒಣಗಿದರಷ್ಟೇ ಚೆಂಡು ಸ್ಪಿನ್‌ ಆಗಲಿದೆ. ಮಳೆ ಬೀಳುತ್ತಲೇ ಇರುವಾಗ ಸ್ಪಿನ್‌ ಹೇಗೆ ಆಗುತ್ತೆ’ ಎಂದಿದ್ದಾನೆ. ಈ ಟ್ವೀಟ್‌ ಭಾರೀ ವೈರಲ್‌ ಆಗಿದೆ.

ಈ ಟ್ವೀಟ್‌ ಸ್ಕ್ರೀನ್‌ಶಾಟ್ ಹಂಚಿಕೊಂಡಿರುವ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ಸ್ಪಿನ್ ಕುರಿತಂತೆ ಅರ್ಥಮಾಡಿಕೊಳ್ಳಲು ವಾರ್ನ್‌ ಇದನ್ನು ಫ್ರೇಮ್‌ ಮಾಡಿಟ್ಟುಕೊಳ್ಳಲಿ ಎಂದು ತಮಾಷೆ ಮಾಡಿದ್ದಾರೆ.

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 217 ರನ್ ಬಾರಿಸಿ ಸರ್ವಪತನ ಕಂಡಿದೆ. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್‌ ಆರಂಭಿಸಿರುವ ನ್ಯೂಜಿಲೆಂಡ್ ತಂಡವು ಮೂರನೇ ದಿನದಾಟದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 101 ರನ್‌ ಬಾರಿಸಿದೆ. ನಾಲ್ಕನೇ ದಿನದಾಟದಲ್ಲಿ ಪಿಚ್ ಯಾವ ರೀತಿ ವರ್ತಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. 
 

Follow Us:
Download App:
  • android
  • ios