ವುಮೆನ್ಸ್‌ ಪ್ರೀಮಿಯರ್ ಲೀಗ್ ಆಟಗಾರ್ತಿಯರ ಹರಾಜಿನಲ್ಲಿ ಆರ್‌ಸಿಬಿ ಭರ್ಜರಿ ಖರೀದಿಮೂವರು ತಾರಾ ಆಟಗಾರ್ತಿಯರನ್ನು ಖರೀಸಿದ ಬೆಂಗಳೂರು ಮೂಲದ ಫ್ರಾಂಚೈಸಿಮಂಧನಾ ಜತೆಗೆ ಇಬ್ಬರು ವಿದೇಶಿ ಆಲ್ರೌಂಡರ್‌ ಖರೀದಿಸಿದ ಆರ್‌ಸಿಬಿ

ಬೆಂಗಳೂರು(ಫೆ.13): ಚೊಚ್ಚಲ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿಯು ಸಾಕಷ್ಟು ಅಳೆದು ತೂಗಿ ತಮಗೆ ಬೇಕಾದ ಆಟಗಾರ್ತಿಯರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮೊದಲ ಸುತ್ತಿನಲ್ಲೇ ಆರ್‌ಸಿಬಿ ಫ್ರಾಂಚೈಸಿಯು ಪ್ರಮುಖ ಮೂವರು ಆಟಗಾರ್ತಿಯರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ.

Add Asianetnews Kannada as a Preferred SourcegooglePreferred

ಹೌದು, ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿಯು ಮೊದಲಿಗೆ 50 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ಸ್ಮೃತಿ ಮಂಧನಾ ಅವರನ್ನು 3.40 ಕೋಟಿ ರುಪಾಯಿ ನೀಡಿ ಖರೀದಿಸುವಲ್ಲಿ ಯಶಸ್ವಿಯಾಯಿತು. ಇದಾದ ಬಳಿಕ ನ್ಯೂಜಿಲೆಂಡ್‌ ಸ್ಟಾರ್ ಆಲ್ರೌಂಡರ್ ಸೋಫಿ ಡಿವೈನ್ ಅವರನ್ನು ಮೂಲ ಬೆಲೆ 50 ಲಕ್ಷ ರುಪಾಯಿಗೆ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸೋಫಿ ಡಿವೈನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಪಾರ ಅನುಭವವನ್ನು ಹೊಂದಿದ್ದು, ಮೂಲ ಬೆಲೆಗೆ ಆರ್‌ಸಿಗೆ ಸಿಕ್ಕಿದ್ದು ಉತ್ತಮ ಆಯ್ಕೆ ಎನಿಸಿಕೊಂಡಿತು.

Scroll to load tweet…
Scroll to load tweet…

ಇನ್ನು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್‌ ತಂಡದ ಸ್ಟಾರ್ ಆಲ್ರೌಂಡರ್‌ ಎಲೈಸಿ ಪೆರ್ರಿಯವರನ್ನು 1.80 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. 50 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ಪೆರ್ರಿಯನ್ನು ಖರೀದಿಸಲು ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿ ನಡುವೆ ಪೈಪೋಟಿ ಏರ್ಪಟ್ಟಿತ್ತಾದರೂ, ಪಟ್ಟು ಬಿಡದ ಆರ್‌ಸಿಬಿ ಕೊನೆಗೂ 1.80 ಕೋಟಿ ರುಪಾಯಿ ನೀಡಿ ತನ್ನತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

Scroll to load tweet…

WPL Auction: ದಾಖಲೆಯ ಮೊತ್ತಕ್ಕೆ ಆರ್‌ಸಿಬಿ ತೆಕ್ಕೆಗೆ ಬಂದ ಸ್ಮೃತಿ ಮಂಧನಾ..!

ಸದ್ಯ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿಯು ತನ್ನ ಪರ್ಸ್‌ನಲ್ಲಿರುವ 12 ಕೋಟಿ ರುಪಾಯಿ ಪೈಕಿ 5.60 ಕೋಟಿ ರುಪಾಯಿಗಳನ್ನು ಈ ಮೂವರು ಆಟಗಾರ್ತಿಯರಿಗೆ ಖರ್ಚು ಮಾಡಿದೆ. ಆದರೆ ಮೂರು ಉತ್ತಮ ಆಟಗಾರ್ತಿಯರನ್ನು ತನ್ನತ್ತ ಸೆಳೆದುಕೊಳ್ಳುವ ಮೂಲಕ ಬಲಿಷ್ಠ ತಂಡ ಕಟ್ಟುವತ್ತ ದಿಟ್ಟ ಹೆಜ್ಜೆಯಿಟ್ಟಿದೆ.

ವುಮೆನ್ಸ್‌ ಪ್ರೀಮಿ​ಯರ್‌ ಲೀಗ್‌​(​ಮ​ಹಿಳಾ ಐಪಿ​ಎ​ಲ್‌​)ನ ಹರಾ​ಜು ಪ್ರಕ್ರಿ​ಯೆ ಇಂದು ಮುಂಬೈ​ನಲ್ಲಿ ಆರಂಭವಾಗಿದ್ದು, 246 ಭಾರ​ತೀ​ಯರು ಸೇರಿ​ದಂತೆ ಒಟ್ಟು 409 ಆಟ​ಗಾ​ರ್ತಿಯರು ವಿವಿಧ ತಂಡ​ಗ​ಳಿಗೆ ಬಿಕ​ರಿ​ಯಾ​ಗುವ ನಿರೀ​ಕ್ಷೆ​ಯ​ಲ್ಲಿ​ದ್ದಾರೆ.

ಪಟ್ಟಿ​ಯಲ್ಲಿ 163 ವಿದೇಶಿ ಆಟ​ಗಾರ್ತಿಯರ ಜೊತೆ​ಗೆ, 199 ಅಂತಾ​ರಾ​ಷ್ಟ್ರೀಯ ಪಂದ್ಯ​ವಾ​ಡ​ದ​ ಆಟ​ಗಾ​ರ್ತಿಯರೂ ಇದ್ದಾರೆ. ಟೂರ್ನಿಯ 5 ತಂಡ​ಗಳು ಹರಾ​ಜಿ​ನಲ್ಲಿ ಪಾಲ್ಗೊ​ಳ್ಳ​ಲಿದ್ದು ಕನಿಷ್ಠ 30 ವಿದೇ​ಶಿ​ಗರು ಸೇರಿ ಗರಿಷ್ಠ 90 ಆಟ​ಗಾ​ರ್ತಿಯರು ಬಿಕ​ರಿ​ಯಾ​ಗಬಹುದು. ಪ್ರತೀ ತಂಡ ಕನಿಷ್ಠ 15, ಗರಿಷ್ಠ 18 ಆಟಗಾರ್ತಿಯರನ್ನು ಖರೀದಿಸಿಬಹುದಾಗಿದ್ದು, ಗರಿಷ್ಠ 12 ಕೋಟಿ ರು. ಬಳ​ಸ​ಬ​ಹು​ದಾ​ಗಿ​ದೆ. 24 ಅಟಗಾ​ರ್ತಿ​ಯರು ಗರಿಷ್ಠ ಅಂದರೆ 50 ಲಕ್ಷ ರು. ಮೂಲ​ಬೆಲೆ, 30 ಅಟ​ಗಾ​ರ್ತಿ​ಯರು 40 ಲಕ್ಷ ರು. ಮೂಲ​ಬೆ​ಲೆಯ ಪಟ್ಟಿ​ಯ​ಲ್ಲಿ​ದ್ದಾರೆ.

ವೇದಾ ಕೃಷ್ಣ​ಮೂರ್ತಿ, ರಾಜೇ​ಶ್ವರಿ, ವೃಂದಾ ಸೇರಿ​ದಂತೆ ಕರ್ನಾ​ಟ​ಕದ 21 ಆಟ​ಗಾ​ರ್ತಿ​ಯರು ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ.