ಆರ್‌ಸಿಬಿ ಇಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಲಿದೆ. ಗುಜರಾತ್ ವಿರುದ್ಧ ಗೆದ್ದ ಆರ್‌ಸಿಬಿ ಬೌಲಿಂಗ್‌ನಲ್ಲಿ ಸುಧಾರಣೆ ಅಗತ್ಯ. ಡೆಲ್ಲಿ ಕೂಡಾ ಮುಂಬೈ ವಿರುದ್ಧ ಗೆದ್ದ ಉತ್ಸಾಹದಲ್ಲಿದೆ. ಶ್ರೇಯಾಂಕ ಗಾಯದಿಂದ ಹೊರಬಿದ್ದಿದ್ದು, ಸ್ನೇಹ್ ರಾಣಾ ತಂಡ ಸೇರಿದ್ದಾರೆ. 

ವಡೋದರ: ಈ ಬಾರಿ ಡಬ್ಲ್ಯುಪಿಎಲ್‌ನಲ್ಲಿ ಸತತ 2ನೇ ಗೆಲುವಿನ ನಿರೀಕ್ಷೆಯಲ್ಲಿರುವ ಆರ್‌ಸಿಬಿ ಸೋಮವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಡಲಿದೆ. ಆರ್‌ಸಿಬಿ ಆರಂಭಿಕ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ವಿರುದ್ಧ ದಾಖಲೆಯ 202 ರನ್‌ ಬೆನ್ನತ್ತಿ ಗೆಲುವು ಸಾಧಿಸಿತ್ತು. 

ತಂಡದ ಬ್ಯಾಟಿಂಗ್‌ ವಿಭಾಗ ಬಲಿಷ್ಠವಾಗಿದ್ದರೂ, ಬೌಲಿಂಗ್‌ ವಿಭಾಗದಲ್ಲಿ ಸುಧಾರಿತ ಪ್ರದರ್ಶನ ನೀಡಬೇಕಿದೆ. ಮತ್ತೊಂದೆಡೆ ಮುಂಬೈ ಇಂಡಿಯನ್ಸ್‌ ವಿರುದ್ಧ ಕೊನೆ ಎಸೆತದಲ್ಲಿ ರೋಚಕ ಗೆಲುವು ಸಾಧಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ಕೂಡಾ ಸತತ 2ನೇ ಗೆಲುವಿನ ಕಾತರದಲ್ಲಿದೆ.

ಪಂದ್ಯ: ಸಂಜೆ 7.30ಕ್ಕೆ

IPL 2025 ಸಂಪೂರ್ಣ ವೇಳಾಪಟ್ಟಿ ಪ್ರಕಟ: ಬೆಂಗಳೂರಿನಲ್ಲಿ ಮೊದಲ ಪಂದ್ಯ ಯಾವಾಗ?

ಶ್ರೇಯಾಂಕ ಔಟ್, ಆರ್‌ಸಿಬಿಗೆ ಸ್ನೇಹ್ ರಾಣಾ

ಬೆಂಗಳೂರು: ಗಾಯದಿಂದಾಗಿ ಈ ಬಾರಿ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್)ನಿಂದ ಆರ್‌ಸಿಬಿ ಯುವ ಆಟಗಾರ್ತಿ, ಕರ್ನಾಟಕದ ಶ್ರೇಯಾಂಕ ಪಾಟೀಲ್ ಹೊರಬಿದ್ದಿದ್ದಾರೆ. ಶುಕ್ರವಾರ ನಡೆದ ಗುಜರಾತ್ ವಿರುದ್ಧ ಪಂದ್ಯದಲ್ಲೂ ಶ್ರೇಯಾಂಕ ಆಡಿರಲಿಲ್ಲ. ಅವರ ಬದಲು ಆರೌಂಡರ್ ಸ್ನೇಹ್
ರಾಣಾ ಆರ್‌ಸಿಬಿ ಸೇರ್ಪಡೆಗೊಂಡಿದ್ದಾರೆ.

ಗುಜರಾತ್‌ಗೆ ಶರಣಾದ ಯುಪಿ

ವಡೋದರಾ: 3ನೇ ಆವೃತ್ತಿ ವುಮೆನ್ಸ್‌ ಪ್ರೀಮಿಯರ್‌ ಲೀಗ್‌ನಲ್ಲಿ ಗುಜರಾತ್‌ ಜೈಂಟ್ಸ್‌ ಮೊದಲ ಗೆಲುವು ದಾಖಲಿಸಿದೆ. ಭಾನುವಾರ ಯುಪಿ ವಾರಿಯರ್ಸ್‌ ವಿರುದ್ಧ ತಂಡಕ್ಕೆ 6 ವಿಕೆಟ್‌ ಜಯ ಲಭಿಸಿತು.

ಮೊದಲು ಬ್ಯಾಟ್‌ ಮಾಡಿದ ಯುಪಿ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 143 ರನ್‌ ಕಲೆಹಾಕಿತು. ನಾಯಕಿ ದೀಪ್ತಿ ಶರ್ಮಾ 39, ಉಮಾ ಚೆಟ್ರಿ 24, ಅಲಾನ ಕಿಂಗ್‌ 19 ರನ್‌ ಗಳಿಸಿದರು. ಸುಲಭ ಗುರಿಯನ್ನು ಗುಜರಾತ್‌ ತಂಡ 18 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟದಲ್ಲಿ ಬೆನ್ನತ್ತಿ ಜಯಗಳಿಸಿತು. ಆ್ಯಶ್ಲೆ ಗಾರ್ಡ್ನರ್‌ 32 ಎಸೆತಗಳಲ್ಲಿ 52, ಹರ್ಲಿನ್‌ ಡಿಯೋಲ್‌ ಔಟಾಗದೆ 34, ಡಿಯಾಂಡ್ರಾ ಡೊಟಿನ್‌ ಔಟಾಗದೆ 33 ರನ್‌ ಗಳಿಸಿದರು.

ಐಪಿಎಲ್ 2025: ಆರ್‌ಸಿಬಿ ಫ್ರಾಂಚೈಸಿ ವಿರಾಟ್ ಕೊಹ್ಲಿ ಕೈಬಿಟ್ಟು ರಜತ್‌ ಪಾಟೀದಾರ್‌ಗೆ ನಾಯಕ ಪಟ್ಟಕಟ್ಟಿದ್ದೇಕೆ?

ಇಂದಿನ ಪಂದ್ಯಗಳು

ಆರ್‌ಸಿಬಿ-ಡೆಲ್ಲಿ ಕ್ಯಾಪಿಟಲ್ಸ್‌

ಸಂಜೆ: 7.30ಕ್ಕೆ

ಘಜಾನ್ಫರ್‌ ಬದಲು ಸ್ಪಿನ್ನರ್‌ ಮುಜೀಬ್‌ ಮುಂಬೈ ತಂಡಕ್ಕೆ

ಮುಂಬೈ: ಗಾಯಗೊಂಡು ಈ ಬಾರಿ ಐಪಿಎಲ್‌ನಿಂದ ಹೊರಬಿದ್ದಿರುವ ಅಲ್ಲಾಹ್‌ ಘಜಾನ್ಫರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡ ಅಫ್ಘಾನಿಸ್ತಾನದ ಮತ್ತೋರ್ವ ಸ್ಪಿನ್ನರ್‌ ಮುಜೀಬ್‌ ಉರ್‌ ರಹ್ಮಾನ್‌ರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ. 18 ವರ್ಷದ ಘಜಾನ್ಫರ್‌ರನ್ನು ಹರಾಜಿನಲ್ಲಿ ಮುಂಬೈ ₹4.80 ಕೋಟಿ ನೀಡಿ ಖರೀದಿಸಿತ್ತು. ಆದರೆ ಇತ್ತೀಚೆಗೆ ಜಿಂಬಾಬ್ವೆ ಸರಣಿ ವೇಳೆ ಗಾಯಗೊಂಡ ಕಾರಣ ಐಪಿಎಲ್‌ಗೆ ಗೈರಾಗಲಿದ್ದಾರೆ. ಇನ್ನು, ಮುಜೀಬ್‌ ಈ ವರೆಗೂ 300 ಟಿ20 ಪಂದ್ಯಗಳನ್ನಾಡಿದ್ದಾರೆ.