ಸೋಫಿಯಾ ಡಿವೈನ್ ಕೇವಲ 36 ಎಸೆತದಲ್ಲಿ 99 ರನ್ ಸಿಡಿಸುವ ಮೂಲಕ ಆರ್‌ಸಿಬಿ 189 ರನ್ ಟಾರ್ಗೆಟನ್ನು ಕೇವಲ 15.3 ಓವರ್‌ಗಳಲ್ಲಿ ಚೇಸ್ ಮಾಡಿದೆ.

ಮುಂಬೈ(ಮಾ.18): ಸೋಫಿಯಾ ಡಿವೈನ್ ಸ್ಫೋಟಕ ಬ್ಯಾಟಿಂಗ್, ನಾಯಕಿ ಸ್ಮೃತಿ ಮಂಧಾನ ದಿಟ್ಟ ಹೋರಾಟದಿಂದ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ವುಮೆನ್ಸ್ 8 ವಿಕೆಟ್ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 4 ಅಂಕ ಸಂಪಾದಿಸಿದೆ. 15.3 ಓವರ್‌ಗಳಲ್ಲಿ ಗೆಲುವು ದಾಖಲಿಸುವ ಮೂಲಕ ಅಂಕ ಪಟ್ಟಿಯಲ್ಲಿ ನೆಟ್‌ರನ್ ರೇಟ್ ಉತ್ತಮಪಡಿಸಿಕೊಂಡಿದೆ.

ಗುಜರಾತ್ ಜೈಂಟ್ಸ್ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಲು ಯತ್ನಿಸಿದ ಆರ್‌ಸಿಬಿ ಮಹಿಳಾ ತಂಡಕ್ಕೆ ಸಾಧ್ಯವಾಗಲಿಲ್ಲ. ಹೀಗಾಗಿ ಆರ್‌ಸಿಬಿ 189 ರನ್ ಟಾರ್ಗೆಟ್ ಪಡೆಯಿತು. ಚೇಸಿಂಗ್ ಇಳಿದ ಆರ್‌ಸಿಬಿ ತಂಡಕ್ಕೆ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಉತ್ತಮ ಆರಂಭ ಸಿಕ್ಕಿತು. ಕಳೆದ 6 ಪಂದ್ಯದಲ್ಲಿ ನಿರಾಸೆ ಅನುಭವಿಸಿದ್ದ ನಾಯಕಿ ಸ್ಮೃತಿ ಮಂಧಾನ ಫಾರ್ಮ್‌‌ಗೆ ಮರಳಿದರು. ಇತ್ತ ಸೋಫಿಯಾ ಡಿವೈನ್ ಕೂಡ ಉತ್ತಮ ಸಾಥ್ ನೀಡಿದರು. ಇದರ ಪರಿಣಾಮ ಆರ್‌ಸಿಬಿ ಸ್ಫೋಟಕ ಆರಂಭ ಪಡೆಯಿತು.

RCB ಇಬ್ಬರು ದಿಗ್ಗಜ ಕ್ರಿಕೆಟಿಗರ ಜೆರ್ಸಿ ನಂಬರ್‌ಗೆ ವಿದಾಯ..! Miss You Legends

ಸ್ಮೃತಿ ಮಂಧಾನ ಬೌಂಡರಿ ಸಿಕ್ಸರ್ ಆಟಕ್ಕೆ ಅಭಿಮಾನಿಗಳು ಸಂಭ್ರಮಿಸಿದರು. ಇತ್ತ ಸೋಫಿಯಾ ಡಿವೈನ್ ಬ್ಯಾಟಿಂಗ್ ಪ್ರದರ್ಶನಕ್ಕೆ ಗುಜರಾತ್ ಜೈಂಟ್ಸ್ ಬೆಚ್ಚಿ ಬಿದ್ದಿತು. 20 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿದ ಸೋಫಿಯಾ ಡಿವೈನ್ ದಾಖಲೆ ಬರೆದರು. ಮಹಿಳಾ ಪ್ರಮಿಯರ್ ಲೀಗ್ ಟೂರ್ನಿಯಲ್ಲಿ ದಾಖಾದ 3ನೇ ಅತೀ ವೇಗದ ಅರ್ಧಶತಕ ಅನ್ನೋ ಹೆಗ್ಗಳಿಕೆಗೆ ಪಾತ್ರವಾಯಿತು. 

ಸ್ಮೃತಿ ಮಂಧನಾ 37 ರನ್ ಸಿಡಿಸಿ ಔಟಾದರು. ಆದರೆ ಸೋಫಿಯಾ ಡಿವೈನ್ ಅಬ್ಬರ ಮುಂದುವರಿಯಿತು. ಸೋಫಿಯಾ 36 ಎಸೆತದಲ್ಲಿ 9 ಬೌಂಡರಿ ಹಾಗೂ 8 ಸಿಕ್ಸರ್ ಮೂಲಕ 99 ರನ್ ಸಿಡಿಸಿ ಔಟಾದರು. ಕೇವಲ 1ರನ್‌ನಿಂದ ಶತಕ ಮಿಸ್ ಮಾಡಿಕೊಂಡರು. 

ಎಲ್ಲಿಸ್ ಪೆರಿ ಹಾಗೂ ಹೀಥರ್ ನೈಟ್ ಜೊತೆಯಾಟಿಂದ ಆರ್‌ಸಿಬಿ ಸುಲಭವಾಗಿ ಗೆಲುವಿನ ದಡ ಸೇರಿತು. ಪೆರಿ ಅಜೇಯ 19 ರನ್ ಸಿಡಿಸಿದರೆ, ನೈಟ್ ಅಜೇಯ 22 ರನ್ ಸಿಡಿಸಿದರು. ಈ ಮೂಲಕ ಆರ್‌ಸಿಬಿ 15.3 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿತು. ಈ ಮೂಲಕ ಆರ್‌ಸಿಬಿ ಪ್ಲೇ-ಆಫ್‌ಗೇರುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

IPL 2023: ವಿಲ್‌ ಜ್ಯಾಕ್ಸ್‌ ಬದಲಿಗೆ RCB ತಂಡಕ್ಕೆ ಹೊಸ ಕಿವೀಸ್ ಅಸ್ತ್ರ ಸೇರ್ಪಡೆ...!

ಗುಜರಾತ್‌ ಬೌಲರ್‌ಗಳನ್ನು ಚೆಂಡಾಡಿದ ಸೋಫಿ, 20 ಎಸೆತದಲ್ಲಿ ಅರ್ಧಶತಕ ಸಿಡಿಸಿದರು. ಸೋಫಿ ಹಾಗೂ ಸ್ಮೃತಿ ಮಂಧನಾ(37) ಮೊದಲ ವಿಕೆಟ್‌ಗೆ 9.2 ಓವರಲ್ಲಿ 125 ರನ್‌ ಸೇರಿಸಿದರು. ಡಿವೈನ್‌ರ ಇನ್ನಿಂಗ್‌್ಸನಲ್ಲಿ 9 ಬೌಂಡರಿ, 8 ಸಿಕ್ಸರ್‌ ಇತ್ತು. ಶತಕಕ್ಕೆ ಒಂದು ರನ್‌ ಬೇಕಿದ್ದಾಗ ಔಟ್‌ ಆಗಿ ನಿರಾಸೆ ಅನುಭವಿಸಿದರು. 94 ಮೀ. ದೂರಕ್ಕೆ ಚೆಂಡನ್ನಟ್ಟಿಡಬ್ಯುಪಿಎಲ್‌ನಲ್ಲಿ ಅತಿದೊಡ್ಡ ಸಿಕ್ಸರ್‌ ಸಿಡಿಸಿದ ದಾಖಲೆಯನ್ನೂ ಡಿವೈನ್‌ ಬರೆದರು. ಎಲೈಸಿ ಪೆರ್ರಿ ಔಟಾಗದೆ 19, ಹೆಥರ್‌ ನೈಟ್‌ ಔಟಾಗದೆ 22 ರನ್‌ ಸಿಡಿಸಿ ತಂಡವನ್ನು 15.3 ಓವರಲ್ಲಿ ಗೆಲ್ಲಿಸಿದರು.