ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಆರ್‌ಸಿಬಿ ವುಮೆನ್ಸ್ ಮತ್ತೆ ಬೌಲಿಂಗ್‌ನಲ್ಲಿ ಹಿಡಿತ ಸಾಧಿಸಲು ಸಾಧ್ಯವಾಗಿಲ್ಲ. ಇದರ ಪರಿಣಾಮ ಗುಜರಾತ್ ಜೈಂಟ್ಸ್ 201 ರನ್ ಬೃಹತ್ ಮೊತ್ತ ನೀಡಿದೆ. ಇದೀಗ ಈ 202 ರನ್ ಚೇಸಿಂಗ್ ಆರ್‌ಸಿಬಿ ವುಮೆನ್ಸ್‌ಗೆ ಚಾಲೆಜಿಂಗ್ ಆಗಿದೆ. 

ಮುಂಬೈ(ಮಾ.07): ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಮೊದಲ ಗೆಲುವು ಹುಡುಕುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡಕ್ಕೆ ಇದೀಗ ಮತ್ತೆ ತಲೆನೋವು ಶುರುವಾಗಿದೆ. ಗುಜರಾತ್ ಜೈಂಟ್ಸ್ ಅಬ್ಬರದ ಬ್ಯಾಟಿಂಗ್ ಮೂಲಕ 7 ವಿಕೆಟ್ ನಷ್ಟಕ್ಕೆ 201 ರನ್ ಸಿಡಿಸಿದೆ. ಇದೀಗ ಆರ್‌ಸಿಬಿ 202 ರನ್ ಟಾರ್ಗೆಟ್ ಚೇಸಿಂಗ್ ಮಾಡಬೇಕಿದೆ. 

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಗುಜರಾತ್ ಜೈಂಟ್ಸ್ ತಂಡಕ್ಕೆ ಆರ್‌ಸಿಬಿ ವುಮೆನ್ಸ್ ಶಾಕ್ ನೀಡಿತು. ಸಬ್ಬಿನೇನಿ ಮೆಘನಾ ಕೇವಲ 8 ರನ್ ಸಿಡಿಸಿ ನಿರ್ಗಮಿಸಿದರು. ಆರಂಭಿಕ ಮುನ್ನಡೆ ಪಡೆದ ಆರ್‌ಸಿಬಿ ವುಮೆನ್ಸ್ ಸಂಪೂರ್ಣ ಇನ್ನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿತು. ಗುಜರಾತ್ ಜೈಂಟ್ಸ್ ಬ್ಯಾಟಿಂಗ್ ಅಬ್ಬರದಿಂದ ಉತ್ತಮ ಸ್ಥಿತಿ ಕಾಪಾಡಿಕೊಂಡಿತು.

'ಹೋಳಿ ಬಣ್ಣ ಹೋಗೋದಿಲ್ವಾ..' ಎಂದು ಅಭಿಮಾನಿಗಳನ್ನು ಕೇಳಿದ ಆರ್‌ಸಿಬಿ ಸ್ಟಾರ್‌ ಎಲ್ಲೀಸ್‌!

ಸೋಫಿಯಾ ಡಂಕ್ಲಿ ಹಾಗೂ ಹರ್ಲೀನ್ ಡಿಯೋಲ್ ಜೊತೆಯಾಟದಿಂದ ಗುಜರಾತ್ ಜೈಂಟ್ಸ್ ಚೇತರಿಸಿಕೊಂಡಿತು. ಸೋಫಿಯಾ ಡಂಕ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಇದರ ಬೆನ್ನಲ್ಲೇ ಹರ್ಲೀನ ಡಿಯೋಲ್ ಹಾಫ್ ಸೆಂಚುರಿ ಸಿಡಿಸಿದರು. ಸೋಫಿಯಾ ಕೇವಲ 28 ಎಸೆತದಲ್ಲಿ 65 ರನ್ ಸಿಡಿಸಿದರು. ಇತ್ತ ಆಶ್ಲೇ ಗಾರ್ಡ್ನರ್ 19 ರನ್ ಸಿಡಿಸಿ ನಿರ್ಗಮಿಸಿದರು. ಇಷ್ಟಾದರೂ ಗುಜರಾತ್ ಜೈಂಟ್ಸ್ ಆತಂಕಕ್ಕೆ ಒಳಗಾಗಲಿಲ್ಲ. ಹರ್ಲೀನ್ ಡಿಯೋಲ್ ಅಬ್ಬರ ಮುಂದುವರಿಯಿತು. ಡಿಯೋಲ್ 45 ಎಸೆತದಲ್ಲಿ 67 ರನ್ ಸಿಡಿಸಿ ಔಟಾದರು.

ದಯಾಲನ್ ಹೇಮಲತಾ 16 ರನ್ ಕಾಣಿಕೆ ನೀಡಿದರು. ನಾಯಕಿ ಸ್ನೇಹಾ ರಾಣಾ 2 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಈ ಮೂಲಕ ಗುಜರಾತ್ ಜೈಂಟ್ಸ್ 7 ವಿಕೆಟ್ ನಷ್ಟಕ್ಕೆ 201 ರನ್ ಸಿಡಿಸಿತು. 

ಆರ್‌ಸಿಬಿ ಮಹಿಳೆಯರು ಮೊದಲೆರಡು ಪಂದ್ಯದಲ್ಲಿ ಮುಗ್ಗರಿಸಿದ್ದಾರೆ. ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 60 ರನ್ ಹೀನಾಯ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ಆರ್‌ಸಿಬಿ 223 ರನ್ ಬಿಟ್ಟುಕೊಟ್ಟಿತ್ತು. ದ್ವಿತೀಯ ಪಂದ್ಯದಲ್ಲಿ ಆರ್‌ಸಿಬಿ ವುಮೆನ್ಸ್ , ಮುಂಬೈ ಇಂಡಿಯನ್ಸ್ ವಿರುದ್ಧ ಹೋರಾಡಿತ್ತು. ಈ ಪಂದ್ಯದಲ್ಲಿ ಆರ್‌ಸಿಬಿ 155 ರನ್ ಸಿಡಿಸಿತ್ತು. ಆದರೆ ಈ ಟಾರ್ಗೆಟ್‌ನ್ನು 14.2 ಓವರ್‌ಗಳಲ್ಲಿ ಚೇಸ್ ಮಾಡಿತು. ಆರ್‌ಸಿಬಿ 9 ವಿಕೆಟ್ ಹೀನಾಯ ಸೋಲು ಕಂಡಿತ್ತು.

WPL 2023: ಹೋಳಿ ಬಣ್ಣದಲ್ಲಿ ಮಿಂದೆದ್ದ ಆರ್‌ಸಿಬಿ ಮಹಿಳೆಯರು!

ಆರ್‌ಸಿಬಿ ವುಮೆನ್ಸ್ ಪ್ಲೇಯಿಂಗ್ 11
ಸ್ಮೃತಿ ಮಂಧನಾ(ನಾಯಕಿ), ಸೋಫಿಯಾ ಡಿವೈನ್, ಎಲ್ಲಿಸ್ ಪೆರಿ, ಹೀಥರ್ ನೈಟ್, ರಿಚಾ ಘೋಷ್, ಪೂನ್ ಖೆಮ್ನಾರ್, ಕಾನಿಕಾ ಅಹುಜಾ, ಶ್ರೇಯಂಕಾ ಪಾಟೀಲ್, ಮೆಗನ್ ಸ್ಕಟ್, ರೇಣುಕ ಠಾಕೂರ್ ಸಿಂಗ್, ಪ್ರೀತ್ ಬೋಸ್

ಗುಜರಾತ್ ಜೈಂಟ್ಸ್ ಪ್ಲೇಯಿಂಗ್ 11
ಸಬ್ಬಿನೇನಿ ಮೆಘನಾ, ಸೋಫಿಯಾ ಡಂಕ್ಲಿ, ಹರ್ಲಿನ್ ಡಿಯೋಲ್, ಅನ್ನಾಬೆಲ್ ಸದರ್ಲೆಂಡ್, ಸುಶ್ಮಾ ವರ್ಮಾ, ಆಶ್ಲೇ ಗಾರ್ಡ್ನರ್, ಡೈಲನ್ ಹೇಮಲತಾ, ಸ್ನೆಹ ರಾಣಾ, ಕಿಮ್ ಗಾರ್ಥ್, ಮಾನ್ಸಿ ಜೋಶಿ, ತನುಜಾ ಕನ್ವಾರ್