WPL 2023 ಗುಜರಾತ್ ಜೈಂಟ್ಸ್ ಅಬ್ಬರ, ಆರ್‌ಸಿಬಿ ವುಮೆನ್ಸ್ಗೆ 189 ರನ್ ಟಾರ್ಗೆಟ್!
ಗುಜರಾತ್ ಜೈಂಟ್ಸ್ ವಿರುದ್ಧ ಆರ್‌ಸಿಬಿ ಮಹಿಳಾ ತಂಡಕ್ಕೆ 189 ರನ್ ಟಾರ್ಗೆಟ್. ಇದೀಗ ಈ ಟಾರ್ಗೆಟ್ ಚೇಸ್ ಮಾಡಲು ಆರ್‌ಸಿಬಿ ಸಜ್ಜಾಗಿದೆ. ಬ್ರೇಬೋರ್ನ್ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮಹಿಳೆಯರಿಗೆ ಚೇಸಿಂಗ್ ಸಾಧ್ಯವೇ?

ಮುಂಬೈ(ಮಾ.18): ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಆರ್‌ಸಿಬಿ ಮಹಿಳಾ ತಂಡ ಮತ್ತೆ ಬೌಲಿಂಗ್‌ನಲ್ಲಿ ದುಬಾರಿಯಾಗಿದೆ. ಗುಜರಾತ್ ಜೈಂಟ್ಸ್ ವಿರುದ್ಧ ಹೋರಾಟದಲ್ಲಿ ಆರ್‌ಸಿಬಿ ಸಂಘಟಿತ ದಾಳಿ ಪ್ರದರ್ಶಿಸುವಲ್ಲಿ ಮತ್ತೆ ವಿಫಲವಾಗಿದೆ. ಇದರ ಪರಿಣಾ ಗುಜರಾತ್ ಜೈಂಟ್ಸ್ 4 ವಿಕೆಟ್ ನಷ್ಟಕ್ಕೆ 188 ರನ್ ಸಿಡಿಸಿದೆ.
ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಕಣಕ್ಕಿಳಿಯಿತು. ಸೋಫಿಯಾ ಡಂಕ್ಲಿ ಹಾಗೂ ಲೌರಾ ವೋಲ್ವಾರ್ಟ್ ಅಬ್ಬರದ ಆರಂಭಕ್ಕೆ ಆರ್‌ಸಿಬಿ ಬ್ರೇಕ್ ಹಾಕುವಲ್ಲಿ ಯಶಸ್ವಿಯಾಯಿತು.ಈ ಜೋಡಿ 27 ರನ್ ಸಿಡಿಸುವಷ್ಟರಲ್ಲೇ ಆರ್‌ಸಿಬಿ ಮೊದಲ ವಿಕೆಟ್ ಪಡೆದು ಸಂಭ್ರಮಿಸಿತು. ಆದರೆ ಆರ್‌ಸಿಬಿ ಮಹಿಳೆಯರ ಸಂಭ್ರಮಕ್ಕೆ ಲೌರಾ ವೋಲ್ವಾರ್ಟ್ ಶಾಕ್ ನೀಡಿದರು. ಕಾರಣ ಸ್ಫೋಟಕ ಬ್ಯಾಟಿಂಗ್ ಮೂಲಕ ಗುಜರಾತ್ ಜೈಂಟ್ಸ್ ತಂಡಕ್ಕೆ ಆಸರೆಯಾದರು.
RCB ಇಬ್ಬರು ದಿಗ್ಗಜ ಕ್ರಿಕೆಟಿಗರ ಜೆರ್ಸಿ ನಂಬರ್‌ಗೆ ವಿದಾಯ..! Miss You Legends
ಲೌರಾಗೆ ಸಬ್ಬಿನೇನಿ ಮೆಘನಾ ಉತ್ತಮ ಸಾಥ್ ನೀಡಿದರು. ಇತ್ತ ಲೌರ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಮೆಘಾನ 31 ರನ್ ಸಡಿಸಿ ಔಟಾದರು. ಆಶ್ಲೇ ಗಾರ್ಡ್ನರ್ ಜೊತೆ ಇನ್ನಿಂಗ್ಸ್ ಮುಂದುವರಿಸಿದ ಲೌರ, 42 ಎಸೆತದಲ್ಲಿ 68 ರನ್ ಸಿಡಿಸಿದರು. ಇತ್ತ ಆಶ್ಲೆ ಗಾರ್ಡ್ನರ್ 41 ರನ್ ಕಾಣಿಕೆ ನೀಡಿದರು.
ದಯಾಳನ್ ಹೇಮಲತಾ ಅಜೇಯ 16 ರನ್ ಸಿಡಿಸಿದರೆ, ಇತ್ತ ಹರ್ಲೀನ್ ಡಿಯೋಲ್ ಅಜೇಯ 12 ರನ್ ಸಿಡಿಸಿದರು. ಈ ಮೂಲಕ ಗುಜರಾತ್ ಜೈಂಟ್ಸ್ 4 ವಿಕೆಟ್ ನಷ್ಟಕ್ಕೆ 188 ರನ್ ಸಿಡಿಸಿದೆ.
ಗುಜರಾತ್ ಜೈಂಟ್ಸ್ ಕಟ್ಟಿಹಾಕಲು ಆರ್‌ಸಿಬಿ ವುಮೆನ್ಸ್ 7 ಬೌಲರ್ ಪ್ರಯೋಗ ಮಾಡಿತು. ಆದರೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಶ್ರೇಯಾಂಕ ಪಾಟೀಲ್ 2, ಪ್ರೀತಿ ಬೋಸೆ 1 ಹಾಗೂ ಸೋಫಿಯಾ ಡಿವೈನ್ 1 ವಿಕೆಟ್ ಕಬಳಿಸಿದರು.
IPL 2023: ವಿಲ್ ಜ್ಯಾಕ್ಸ್ ಬದಲಿಗೆ RCB ತಂಡಕ್ಕೆ ಹೊಸ ಕಿವೀಸ್ ಅಸ್ತ್ರ ಸೇರ್ಪಡೆ...!
ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಸತತ 5 ಪಂದ್ಯ ಸೋತು ನಿರಾಸೆ ಅನುಭವಿಸಿದ್ದ ಆರ್‌ಸಿಬಿ, ಕಳೆದ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ 5 ವಿಕೆಟ್ ಗೆಲುವು ದಾಖಲಿಸಿತ್ತು. ಈ ಮೂಲಕ ಮೊದಲ ಗೆಲುವಿನ ಸಿಹಿ ಕಂಡಿತ್ತು. ಯುಪಿ ವಾರಿಯರ್ಸ್ ತಂಡವನ್ನು 135 ರನ್‌ಗಳಿಗೆ ಆಲೌಟ್ ಮಾಡಿದ ಆರ್‌ಸಿಬಿ, 18 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತ್ತು. ಈ ಮೂಲಕ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದ ಆರ್‌ಸಿಬಿ 4ನೇ ಸ್ಥಾನಕ್ಕೆ ಜಿಗಿತ ಕಂಡಿತ್ತು. ಇದಕ್ಕೂ ಮೊದಲು ಆಡಿದ 5 ಪಂದ್ಯಗಳಲ್ಲಿ ಆರ್‌ಸಿಬಿ ಸೋಲು ಅನುಭವಿಸಿತ್ತು. ಆರ್‌ಸಿಬಿ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿತ್ತು. ಕಳೆದ ಪಂದ್ಯದಲ್ಲಿನ ಗೆಲುವಿ ಮೂಲಕ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತ್ತು.