WTC Final: ಸ್ಟೀವನ್ ಸ್ಮಿತ್ ಶತಕ, ಮೊದಲ ಇನ್ನಿಂಗ್ಸ್‌ನಲ್ಲಿ ಆಸೀಸ್ ಭರ್ಜರಿ ಮೊತ್ತ!
ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ ಮೊತ್ತ ದಾಖಲು ಮಾಡಿದೆ. 3 ವಿಕೆಟ್‌ಗೆ 327 ರನ್‌ಗಳಿಂದ 2ನೇ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾ ಈ ಮತ್ತಕ್ಕೆ 142 ರನ್ ಪೇರಿಸಿ ಉಳಿದ ಏಳು ವಿಕೆಟ್‌ಗಳನ್ನು ಕಳೆದುಕೊಂಡಿತು.
ಲಂಡನ್ (ಜೂ.8): ಟ್ರಾವಿಸ್ ಹೆಡ್ ಬಳಿಕ ಅನುಭವಿ ಬ್ಯಾಟ್ಸ್‌ಮನ್ ಸ್ಟೀವನ್ ಸ್ಮಿತ್ ಕೂಡ ಶತಕ ದಾಖಲೆ ಮಾಡುವುದರೊಂದಿಗೆ ಆಸ್ಟ್ರೇಲಿಯಾ ತಂಡ 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಮೊದಲ ಇನ್ನಿಂಗ್ಸ್‌ಗಲ್ಲಿ 121.3 ಓವರ್‌ಗಳ ಆಟದಲ್ಲಿ 469 ರನ್‌ಗೆ ಆಲೌಟ್ ಆಗಿದೆ. 3 ವಿಕೆಟ್‌ಗೆ 327 ರನ್‌ಗಳಿಂದ 2ನೇ ದಿನವಾದ ಗುರುವಾರದ ಆಟ ಆರಂಭಿಸಿದ ಆಸ್ಟ್ರೇಲಿಯಾ ತಂಡ ಈ ಮೊತ್ತಕ್ಕೆ 142 ರನ್ ಪೇರಿಸಿ ಉಳಿದ 7 ವಿಕೆಟ್‌ಗಳನ್ನು ಕಳೆದುಕೊಂಡಿತು. ಅದರೊಂದಿಗೆ 500ಕ್ಕಿಂತ ಅಧಿಕ ರನ್ ಬಾರಿಸುವ ಆಸೆಯಲ್ಲಿದ್ದ ಆಸೀಸ್ ತಂಡಕ್ಕೆ ಕಡಿವಾಣ ಹಾಕುವಲ್ಲಿ ಭಾರತ ಯಶಸ್ವಿಯಾಗಿದೆ. ಇದಕ್ಕೆ ಕಾರಣವಾಗಿದ್ದು ವೇಗಿ ಮೊಹಮದ್ ಸಿರಾಜ್, 28.3 ಓವರ್‌ಗಳ ದಾಳಿ ನಡೆಸಿದ ಮೊಹಮದ್ ಸಿರಾಜ್ 108 ರನ್‌ಗೆ 4 ವಿಕೆಟ್ ಸಾಧನೆ ಮಾಡಿದರು. ಮೊದಲ ದಿನದ ಆಟದ ಅಂತ್ಯಕ್ಕೆ ಶತಕದಿಂದ ಐದು ರನ್‌ಗಳ ದೂರದಲ್ಲಿದ್ದ ಮಾಜಿ ನಾಯಕ ಸ್ಟೀವನ್ ಸ್ಮಿತ್ 268 ಎಸೆತಗಳಲ್ಲಿ 121 ರನ್ ಬಾರಿಸುವುದರೊಂದಿಗೆ ಗಮನಸೆಳೆದರು. ಇವರಿಗೆ ಉತ್ತಮ ಸಾಥ್ ನೀಡಿದ ಟ್ರಾವಿಸ್ ಹೆಡ್ ಸ್ಫೋಟಕ ಬ್ಯಾಟಿಂಗ್ ಮಾಡಿದರು. 174 ಎಸೆತ ಎದುರಿಸಿದ ಹೆಡ್ 25 ಬೌಂಡರಿ, 1 ಸಿಕ್ಸರ್‌ಗಳೊಂದಿಗೆ 163 ರನ್ ಬಾರಿಸಿದರು. 4ನೇ ವಿಕೆಟ್‌ಗೆ ಈ ಜೋಡಿ 285 ರನ್‌ಗಳ ಭರ್ಜರಿ ಜೊತೆಯಾಟವಾಡಿ ತಂಡವನ್ನು ಆಧರಿಸಿತು.
ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗುರುವಾರ ಮೊಹಮದ್ ಸಿರಾಜ್ ಕೆಟ್ಟ ಆರಂಭ ಮಾಡಿದರು. ಸ್ಟೀವನ್ ಸ್ಮಿತ್‌ಗೆ ಎತತ ಎರಡು ಹಾಫ್ ವಾಲಿ ಎಸೆತಗಳನ್ನು ಎಸೆದ ಸಿರಾಜ್ ಬೌಂಡರಿ ಚಚ್ಚಿಸಿಕೊಂಡರು. ಅದರೊಂದಿಗೆ ಸ್ಮಿತ್ ತಮ್ಮ 31ನೇ ಶತಕವವನ್ನು ಪೂರೈಸಿದರು. ಅದಲ್ಲದೆ, ಇಂಗ್ಲೆಂಡ್‌ನಲ್ಲಿ ಇದು ಅವರ 7ನೇ ಶತಕವಾಗಿದೆ. ಅದರೊಂದಿಗೆ ಇಂಗ್ಲೆಂಡ್‌ನಲ್ಲಿ ಪ್ರವಾಸಿ ಬ್ಯಾಟ್ಸ್‌ಮನ್ ಆಗಿ ಗರಿಷ್ಠ ಶತಕ ಬಾರಿಸಿದ 2ನೇ ಬ್ಯಾಟ್ಸ್‌ಮನ್ ಎನಿಸಿದ್ದಾರೆ. ಮೊದಲ ಸ್ಥಾನದಲ್ಲಿ ಡಾನ್ ಬ್ರಾಡ್ಮನ್ ಇದ್ದಾರೆ. ಅವರಿಗೆ ಸಾಥ್ ನೀಡಿದ ಟ್ರಾವಿಸ್ ಹೆಡ್ ನಿರಾಯಾಸವಾಗಿ 150ರ ಗಡಿ ದಾಟಿದರು. ವೃತ್ತಿಜೀವನದಲ್ಲಿ ನಾಲ್ಕನೇ ಬಾರಿಗೆ ಟ್ರಾವಿಸ್ ಹೆಡ್ 150 ಪ್ಲಸ್ ಮೊತ್ತವನ್ನು ಬಾರಿಸಿದ್ದಾರೆ. ಬಾರಿಸಿರುವ 6 ಶತಕದಲ್ಲೇ ನಾಲ್ಕು ಶತಕವನ್ನು ಅವರು 150 ಪ್ಲಸ್ ಬಾರಿಸಿರುವುದು ವಿಶೇಷವಾಗಿದೆ. ದಿನದ ಆರಂಭದ ಮೊದಲ ನಾಲ್ಕು ಓವರ್‌ಗಳಲ್ಲಿಯೇ ಭಾರತ 18 ರನ್ ನೀಡುವ ಮೂಲಕ ಕೆಟ್ಟ ಆರಂಭ ಮಾಡಿತ್ತು.
WTC Final: ಟೆಸ್ಟ್ ವಿಶ್ವಕಪ್ ಫೈನಲ್‌ಗೆ ಅಶ್ವಿನ್‌ಗಿಲ್ಲ ಸ್ಥಾನ, ಇದ್ಯಾವ ನ್ಯಾಯವೆಂದ ನೆಟ್ಟಿಗರು..!
2ನೇ ದಿನದ ಭೋಜನ ವಿರಾಮದ ಸಮಯದಲ್ಲಿ ಭಾರತ ಮೊದಲ ವಿಕೆಟ್ ಸಂಪಾದನೆ ಮಾಡಿತು. 163 ರನ್ ಬಾರಿಸಿದ್ದ ಟ್ರಾವಿಸ್ ಹೆಡ್ ವಿಕೆಟ್‌ಅನ್ನು ಮೊಹಮದ್ ಸಿರಾಜ್ ಉರುಳಿಸಿದರು. ಆ ಬಳಿಕ ಆಸೀಸ್‌ನ ವಿಕೆಟ್ ಪತನ ಆರಂಭವಾಯಿತು. ದಿನದ ಐದನೇ ಓವರ್‌ನಲ್ಲಿ ಮೊಹಮದ್ ಶಮಿ ಕ್ಯಾಮರೂನ್ ಗ್ರೀನ್‌ನ ವಿಕೆಟ್ ಉರುಳಿಸಿದರು. 2ನೇ ಸ್ಲಿಪ್‌ನಲ್ಲಿದ್ದ ಶುಭ್‌ಮನ್ ಗಿಲ್ ಇವರ ವಿಕೆಟ್‌ಅನ್ನು ಉರುಳಿಸಿದರು. ಇದರ ಬೆನ್ನಲ್ಲಿಯೇ ಸ್ಟೀವನ್ ಸ್ಮಿತ್ ಕೂಡ ಔಟಾದಾಗ ಆಸೀಸ್ 387 ರನ್ ಬಾರಿಸಿತ್ತು. 400 ರನ್ ಒಳಗಾಗಿ ಆಸೀಸ್‌ಅನ್ನು ಕಟ್ಟುಹಾಕುವ ಗುರಿಯಲ್ಲಿದ್ದ ಭಾರತಕ್ಕೆ ಅಲೆಕ್ಸ್ ಕ್ಯಾರಿ (48ರನ್, 69 ಎಸೆತ, 7 ಬೌಂಡರಿ, 1 ಸಿಕ್ಸರ್) ಕಗ್ಗಂಟಾಗಿ ಕಾಡಿದರು. ಬಾಲಂಗೋಚಿಗಳೊಂದಿಗೆ ಅದರಲ್ಲೂ ಪ್ರಮುಖವಾಗಿ ನಾಯಕ ಪ್ಯಾಟ್ ಕಮ್ಮಿನ್ಸ್ ಜೊತೆ 8ನೇ ವಿಕೆಟ್‌ಗೆ 66 ಎಸೆತಗಳಲ್ಲಿ 51 ರನ್ ಜೊತೆಯಾಟವಾಡಿ ತಂಡದ ಮೊತ್ತವನ್ನು 450ರ ಗಡಿಗೆ ತಂದು ನಿಲ್ಲಿಸಿದರು.
WTC Final: ಎರಡನೇ ದಿನ ಆಸೀಸ್ ಎದುರು ಟೀಂ ಇಂಡಿಯಾ ಭರ್ಜರಿ ಕಮ್‌ಬ್ಯಾಕ್..!