Asianet Suvarna News Asianet Suvarna News

ವಿಶ್ವ ಸಮುದ್ರ ದಿನಾಚರಣೆ; ಮಹತ್ವದ ಸಂದೇಶ ಸಾರಿದ ರೋಹಿತ್ ಶರ್ಮಾ!

ಇಂದು ವಿಶ್ವ ಸಮುದ್ರ ದಿನಾಚರಣೆ. ಪ್ರತಿ ದಿನವೂ ಒಂದೊಂದು ದಿನಾಚರಣೆ ಬರುತ್ತಿದೆ ಎಂದು ಸುಮ್ಮನಾಗಬೇಡಿ. ಸಮುದ್ರ ದಿನಾಚರಣೆ ಅಷ್ಟೇ ಪ್ರಾಮುಖ್ಯತೆ ಪಡೆದಿದೆ. ಇದೀಗ ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ವಿಶ್ವ ಸಮುದ್ರ ದಿನಾಚರಣೆಯಂದು ಅಭಿಮಾನಿಗಳಿಗೆ ಮಹತ್ವದ ಸಂದೇಶ ನೀಡಿದ್ದಾರೆ.
 

World Oceans Day Rohit sharma sent special message to fans
Author
Bengaluru, First Published Jun 8, 2020, 3:44 PM IST

ಮುಂಬೈ(ಜೂ.08): ಟೀಂ ಇಂಡಿಯಾ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಪರಿಸರ, ಪ್ರಾಣಿ, ಪಕ್ಷಿಗಳಿಗೆ ವಿಶೇಷ ಮಹತ್ವ ನೀಡುತ್ತಾರೆ. ಪರಿಸರಕ್ಕೆ ಹಾನಿಯಾದಾಗ, ಪ್ರಾಣಿಗಳಿಗೆ ಹಿಂಸೆ ನೀಡಿದಾಗ ರೋಹಿತ್ ಶರ್ಮಾ ತಕ್ಷಣವೇ ಪ್ರತಿಕ್ರಿಯೆ ನೀಡುತ್ತಾರೆ. ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಾರೆ. ಇತ್ತೀಚೆಗೆ ಕೇರಳದಲ್ಲಿ ನಡೆದ ಗರ್ಭಿಣಿ ಆನೆ ಹತ್ಯೆ ಘಟನೆಯನ್ನು ರೋಹಿತ್ ಶರ್ಮಾ ಖಂಡಿಸಿದ್ದರು. ಇದೀಗ ವಿಶ್ವ ಸಮದ್ರ ದಿನಾಚರಣೆ(ಜೂ.08)ಗೆ ರೋಹಿತ್ ಶರ್ಮಾ ಅಭಿಮಾನಿಗಳಿಗೆ ಮಹತ್ವದ ಸಂದೇಶ ಸಾರಿಸಿದ್ದಾರೆ.

ಗರ್ಭೀಣಿ ಆನೆ ಕೊಂದ ಸುದ್ದಿ ಕೇಳಿ ಮರುಗಿದ ಕೊಹ್ಲಿ, ರೋಹಿತ್; ಜನತೆಗೆ ಮನವಿ ಮಾಡಿದ ಕ್ರಿಕೆಟರ್ಸ್!

ವಿಶ್ವ ಸಮುದ್ರ ದಿನದ ಶುಭಾಶಯಗಳು. ನಾವು ನಮ್ಮ ಸಮುದ್ರ, ಸಮುದ್ರೊಳಗಿನ ಜೀವರಾಶಿಗಳನ್ನು ಆರೋಗ್ಯವಾಗಿ, ಶುಚಿಯಾಗಿಡೋಣ ಎಂದು ಟ್ವಿಟರ್ ಮೂಲಕ ಸಂದೇಶ ಸಾರಿಸದ್ದಾರೆ. ಸಮುದ್ರ ಕಿನಾರೆಯಲ್ಲಿ ಕೂತು ಪ್ರಕೃತಿಯ ಆನಂದಿಸುತ್ತಿರುವ ಫೋಟೋ ಕೂಡ ಹಾಕಿದ್ದಾರೆ.

 

ಇತ್ತೀಚೆಗೆ ವಿಶ್ವಪರಿಸರ ದಿನಾಚರಣೆಗೂ ರೋಹಿತ್ ಶರ್ಮಾ ಸಂದೇಶ ಸಾರಿಸಿದ್ದರು. ಭಾರತದಲ್ಲಿ ಅಳಿವಿನಂಚಿನಲ್ಲಿರುವ ಘೇಂಡಾಮೃಗ ವನ್ಯಜೀವಿ ಕುರಿತು ರೋಹಿತ್ ಶರ್ಮಾ ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದಾರೆ. ವಿಶೇಷ ಅಂದರೆ ರೋಹಿತ್ ಶರ್ಮಾ ವಿಶ್ವ ವನ್ಯಜೀವಿ ಸಂಸ್ಥೆಯ ಭಾರತದ ರಾಯಭಾರಿಯಾಗಿದ್ದಾರೆ.

ಖೇಲ್‌ ರತ್ನಕ್ಕೆ ರೋಹಿತ್‌ ಶರ್ಮಾ ಹೆಸರು ಶಿಫಾರಸು

ಪರಿಸರ ಮಾತ್ರವಲ್ಲ ವಾಯು ಮಾಲಿನ್ಯ ಕುರಿತು ರೋಹಿತ್ ಶರ್ಮಾ ಧನಿ ಎತ್ತಿದ್ದಾರೆ. ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿರುವ ರೋಹಿತ್ ಶರ್ಮಾ ಸದ್ಯ ಮುಂಬೈನಲ್ಲಿ ಕುಟುಂದ ಜೊತೆ ಕಾಲಕಳೆಯುತ್ತಿದ್ದಾರೆ. ಮುಂಬೈನಲ್ಲಿ ಗರಿಷ್ಠ ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿರುವ ಕಾರಣ ಮನೆಯೊಳಗೆ ಬಂಧಿಯಾಗಿದ್ದಾರೆ.

Follow Us:
Download App:
  • android
  • ios