ಭಾರತ ಹಾಗೂ ಪಾಕಿಸ್ತಾನ ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಭಿಮಾನಿಗಳು ಜೈ ಶ್ರೀರಾಮ್‌ ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ. ಇದರ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. 

ಅಹಮದಾಬಾದ್‌ (ಅ.14): ವಿಶ್ವದ ಅತಿದೊಡ್ಡ ಸ್ಟೇಡಿಯಂ ಎನಿಸಿಕೊಂಡಿರುವ ನರೇಂದ್ರ ಮೋದಿ ಸ್ಟೇಡಿಯಂ ಶನಿವಾರ ಫುಲ್‌ಹೌಸ್‌ ಆಗಿತ್ತು. ಅದಕ್ಕೆ ಕಾರಣ ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್‌ ಮುಖಾಮುಖಿ. ಈ ವೇಳೆ ಅಭಿಮಾನಿಗಳು ಪಾಕಿಸ್ತಾನ ತಂಡವನ್ನು ಕೆಣಕುವಂಥ ಸಾಕಷ್ಟು ಘೋಷಣೆಗಳು ಮೈದಾನದಲ್ಲಿ ಕೂಗಿದಿದ್ದಾರೆ. ಇದಕ್ಕೆ ಪಾಕಿಸ್ತಾನದ ಕೆಲ ಪತ್ರಕರ್ತರು ಹಾಗೂ ಅಭಿಮಾನಿಗಳು ಸೋಶಿಯಲ್‌ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಇದರ ನಡುವೆ 1.30 ಲಕ್ಷ ಪ್ರೇಕ್ಷಕ ಸಾಮರ್ಥ್ಯ ಹೊಂದಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತದ ಅಭಿಮಾನಿಗಳು ಏಕಕಾಲದಲ್ಲಿ ಜೈ ಶ್ರೀರಾಮ್‌ ಘೋಷಣೆ ಕೂಗಿದ ಹಾಡುಗಳ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. 'ಜೈ ಶ್ರೀರಾಮ್‌, ಜೈಶ್ರೀರಾಮ್‌.. ಜೈಶ್ರೀರಾಮ್‌, ರಾಜಾರಾಮ್‌..' ಎನ್ನುವ ಹಾಡನ್ನು ಅಭಿಮಾನಿಗಳು ಏಕಕಾಲದಲ್ಲಿ ಮೈದಾನದಲ್ಲಿ ಹಾಡಿದ್ದಾರೆ. ಆದಿಪುರುಷ್‌ ಸಿನಿಮಾದ ಈ ಹಾಡು ಸ್ಟೇಡಿಯಂನ ಡಿಜೆ ಹಾಕುತ್ತಿದ್ದಂತೆ ಅಭಿಮಾನಿಗಳು, ಹಾಡಿಗೆ ದನಿಗೂಡಿಸಿ ತಮ್ಮ ಎರಡೂ ಕೈಗಳನ್ನು ಎತ್ತು ಜೈ ಶ್ರೀರಾಮ್‌.. ಜೈ ಶ್ರೀರಾಮ್‌ ಎಂದು ಘೋಷಣೆ ಕೂಗಿದ್ದಾರೆ.

ಇನ್ನು ಮೊಬೈಲ್‌ನಲ್ಲಿ ಪಂದ್ಯದ ನೇರಪ್ರಸಾರ ಹಕ್ಕು ಹೊಂದಿರುವ ಡಿಸ್ನಿ ಹಾಟ್‌ಸ್ಟಾರ್‌ ಕೂಡ ಹೊಸ ದಾಖಲೆ ಮಾಡಿದೆ. ಭಾರತ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ವೇಳೆ ಏಕಕಾಲದಲ್ಲಿ 3.1 ಕೋಟಿ ಮಂದಿ ಪಂದ್ಯವನ್ನು ವೀಕ್ಷಿಸುತ್ತಿದ್ದರು. ಇದು ಹೊಸ ದಾಖಲೆ ಎನಿಸಿದೆ.

ಇನ್ನು ಪಾಕಿಸ್ತಾನದ ಪತ್ರಕರ್ತ ಇಹ್ತಿಶಾಮ್ ಉಲ್ ಹಕ್ ಅಹಮದಾಬಾದ್‌ ಪ್ರೇಕ್ಷಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಇದೊಂದು ಕೆಟ್ಟ ಪ್ರೇಕ್ಷಕರು. ಭಿನ್ನ ಮನಸ್ಥಿತಿ ಹೊಂದಿರುವ ಪ್ರೇಕ್ಷಕರು. ಪಾಕಿಸ್ತಾನ ತಂಡದ ಆಟಗಾರರು ಬೌಂಡರಿ ಬಾರಿಸಿದಾಗ, ಬಹುಶಃ ತಂಡ ಮುಚ್ಚಿದ ಬಾಗಿಲಿನ ಗ್ರೌಂಡ್‌ನಲ್ಲಿ ಬ್ಯಾಟಿಂಗ್‌ ಮಾಡುತ್ತಿರುವಂತೆ ಕಂಡಿದೆ. ಒಂದೇ ಒಂದು ಚಪ್ಪಾಳೆಯಿಲ್ಲ, ಒಂದೇ ಒಂದು ಮೆಚ್ಚುಗೆಯಿಲ್ಲ. ನಾನು ಇಂಗ್ಲೆಂಡ್‌ನಲ್ಲಿ ಕ್ರಿಕೆಟ್‌ ಪಂದ್ಯಗಳನ್ನು ಕವರ್‌ ಮಾಡಿದ್ದೇನೆ. ಅಲ್ಲಿ ಆಸ್ಟ್ರೇಲಿಯಾ ಆಟಗಾರರು ಉತ್ತಮ ಶಾಟ್‌ ಹೊಡೆದಾಗ, ಐರಿಶ್‌ ಆಟಗಾರರು ಅಥವಾ ಇನ್ನಾವುದೇ ಎದುರಾಳಿಗಳು ಉತ್ತಮ ಶಾಟ್‌ ಹೊಡೆದಾಗ ಅದನ್ನು ಮೆಚ್ಚಿ ಚಪ್ಪಾಳೆ ಬಾರಿಸುತ್ತಿದ್ದರು' ಎಂದು ಬರೆದುಕೊಂಡಿದ್ದಾರೆ.

'ನಮ್ಮಲ್ಲಿ ಪ್ರತಿಭೆಗಳಿಲ್ಲ..' ಪಾಕಿಸ್ತಾನದ ಬ್ಯಾಟಿಂಗ್‌ ನೋಡಿಯೇ ನಿರಾಸೆಯಾದ ಶೋಯೆಬ್‌ ಅಖ್ತರ್‌!

ಇನ್ನು ಪ್ರತಿ ಬಾರಿ ಭಾರತೀಯರು ಹಾಗೂ ಟೀಂ ಇಂಡಿಯಾವನ್ನು ಕೆಣಕುವುದರಲ್ಲೇ ಖುಷಿ ಕಾಣುವ ಫರೀದ್‌ ಖಾನ್‌ ಕೂಡ ಅಹಮದಾಬಾದ್‌ ಪ್ರೇಕ್ಷಕರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. 'ಹಮ್‌ ತುಮಾರೇ ಬಾಪ್‌ ಹೇಂ' (ನಾವು ನಿಮ್ಮ ಅಪ್ಪ) ಎಂದೆನ್ನುವ ಸ್ಲೋಗನ್‌ಗಳು ಸ್ಟೇಡಿಯಂನಲ್ಲಿ ಬಂದಿವೆ. ಕ್ಲಾಸಿಕ್‌ ಇಂಡಿಯನ್ಸ್‌ಗಳು ಗೇಮ್‌ಗೆ ಅವಮಾನ ಮಾಡಿದ್ದಾರೆ. ನೀವು ಬೆಳೆದು ಬಂದ ರೀತಿಯನ್ನು ವಿಶ್ವಕ್ಕೆ ತಿಳಿಸುತ್ತಿದ್ದೀರಿ' ಎಂದು ಅವರು ಬರೆದುಕೊಂಡಿದ್ದಾರೆ.

ದೇವ್ರನ್ನ ಬೇಡಿಕೊಂಡು ಬಾಲ್‌ ಎಸೆದ ಹಾರ್ದಿಕ್‌, ಬಿತ್ತು ಇಮಾಮ್‌ ವಿಕೆಟ್‌! ವಿಡಿಯೋ ವೈರಲ್

Scroll to load tweet…