ಕೋಲ್ಕತಾ(ಮೇ.15): ಐಪಿಎಲ್ ಟೂರ್ನಿ ಮುಗಿಸಿರುವ ಟೀಂ ಇಂಡಿಯಾ ಕ್ರಿಕೆಟಿಗರು ಇದೀಗ ವಿಶ್ವಕಪ್ ಟೂರ್ನಿಗೆ ಸಜ್ಜಾಗುತ್ತಿದ್ದಾರೆ. ಇದರ ಬೆನ್ನಲ್ಲೇ ಐಪಿಎಲ್ ಟೂರ್ನಿ ಪ್ರದರ್ಶನದ  ಹೋಲಿಕೆ ಕೂಡ ನಡೆಯುತ್ತಿದೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಮಾಜಿ ನಾಯಕ ಸೌರವ್ ಗಂಗೂಲಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ 2019: ಸೆಮಿಫೈನಲ್‌ಗೆ ಯಾವ ತಂಡ? ಭವಿಷ್ಯ ನುಡಿದ ಗಂಗೂಲಿ!

ಐಪಿಎಲ್ ನಾಯಕತ್ವವನ್ನು ಟೀಂ ಇಂಡಿಯಾ ಜೊತೆ ಹೋಲಿಕೆ ಮಾಡುವುದು ಸರಿಯಲ್ಲ. ಐಪಿಎಲ್ ಟೂರ್ನಿಯಲ್ಲಿ ಕೊಹ್ಲಿ ನಾಯಕನಾಗಿ ವಿಫಲರಾಗಿದ್ದಾರೆ. ಆದರ ಟೀಂ  ಇಂಡಿಯಾ ಕಂಡ ಯಶಸ್ವಿ ನಾಯಕ ಕೊಹ್ಲಿ. 2019ರ ವಿಶ್ವಕಪ್ ಟೂರ್ನಿಯಲ್ಲಿ ಕೊಹ್ಲಿಗೆ ಸಲಹೆ ನೀಡಲು ಎಂ.ಎಸ್.ಧೋನಿ ಹಾಗೂ ರೋಹಿತ್ ಶರ್ಮಾ ಕೂಡ ತಂಡದಲ್ಲಿದ್ದಾರೆ ಎಂದು ಗಂಗೂಲಿ ಹೇಳಿದ್ದಾರೆ.

ಇದನ್ನೂ ಓದಿ: ಕೊಹ್ಲಿ ನಾಯಕತ್ವಕ್ಕೆ ಅಪಸ್ವರವೆತ್ತಿದ ಗಂಭೀರ್‌ಗೆ ಗಂಗೂಲಿ ತಿರುಗೇಟು!

ಮೇ.20 ರಿಂದ  ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಪ್ರತಿಷ್ಠಿತ ಟೂರ್ನಿಗೆ ಇಂಗ್ಲೆಂಡ್ ಆತಿಥ್ಯ ವಹಿಸಿದೆ. ಜೂನ್ 5 ರಂದು ಸೌತ್ಆಫ್ರಿಕಾ ವಿರುದ್ಧ ಭಾರತ ಮೊದಲ ಪಂದ್ಯ ಆಡಲಿದೆ. ಜುಲೈ 14 ರಂದು  ಲಾರ್ಡ್ಸ್ ಮೈದಾನದಲ್ಲಿ ಫೈನಲ್ ಪಂದ್ಯ ಆಯೋಜಿಸಲಾಗಿದೆ.