Asianet Suvarna News Asianet Suvarna News

India vs New zealand; ಕ್ರಿಕೆಟಿಗರು ಯಂತ್ರಗಳಲ್ಲ, ವಿಶ್ರಾಂತಿ ಬೇಕೆ ಬೇಕು; ನಾಯಕ ರೋಹಿತ್ ಹೇಳಿಕೆ ಸಂಚಲನ!

  • ನ.17ರಿಂದ ಭಾರತ ಹಾಗೂ ನ್ಯೂಜಿಲೆಂಡ್ ಟಿ20 ಸರಣಿ
  • ಮೊದಲ ಪಂದ್ಯಕ್ಕೂ ಮುನ್ನ ನಾಯಕ ರೋಹಿತ್ ಸುದ್ದಿಗೋಷ್ಠಿ
  • ರೋಹಿತ್ ಹೇಳಿಕೆ, ಬಿಸಿಸಿಐ ವಿರುದ್ಧ ಅಭಿಮಾನಿಗಳ ಆಕ್ರೋಶ
     
Workload management  most important Players are not machines says Rohit sharma ahed of India vs New zealand series ckm
Author
Bengaluru, First Published Nov 16, 2021, 9:30 PM IST

ಜೈಪುರ(ನ.16):  ಟಿ20 ವಿಶ್ವಕಪ್ ಟೂರ್ನಿಯಲ್ಲಿ ಲೀಗ್ ಹಂತದಿಂದ ಹೊರಬಿದ್ದ ಟೀಂ ಇಂಡಿಯಾ ಇದೀಗ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ದದ ಟಿ20 ಸರಣಿಗೆ ಸಜ್ಜಾಗಿದೆ. ನವೆಂಬರ್ 17 ರಿಂದ ಟಿ20 ಟೂರ್ನಿ ಆರಂಭಗೊಳ್ಳುತ್ತಿದೆ. ಟೂರ್ನಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಆಟಗಾರರ ಮೇಲಿನ ಒತ್ತಡ ಕುರಿತು ಖಡಕ್ ಮಾತುಗಳನ್ನಾಡಿದ್ದಾರೆ. ಕ್ರಿಕೆಟಿಗರು ಯಂತ್ರಗಳಲ್ಲ ಅವರಿಗೆ ವಿಶ್ರಾಂತಿ ಅಗತ್ಯವಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಆಧುನಿಕ ಕ್ರಿಕೆಟ್‌ನಲ್ಲಿ ಕ್ರಿಕೆಟಿಗರು ತೀವ್ರ ಒತ್ತಡದ ವಾತಾವರಣದಲ್ಲಿ ಆವಾಡುತ್ತಿದ್ದಾರೆ ಅನ್ನೋ ಮಾತಿದೆ. ಇದು ಹಲವು ಬಾರಿ ನಿಜವಾಗಿದೆ. ಅದರಲ್ಲೂ ಟೀಂ ಇಂಡಿಯಾ ಕ್ರಿಕೆಟಿಗರ ಬಿಡುವಿಲ್ಲದ ವೇಳಾಪಟ್ಟಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಸ್ವರವಿದೆ. ಇದೀಗ ರೋಹಿತ್ ಶರ್ಮಾ ಕೂಡ ಇದಕ್ಕೆ ಧನಿಗೂಡಿಸಿದ್ದಾರೆ. ಸತತ ಕ್ರಿಕೆಟ್‌ ಆಡಲು ಆಟಗಾರರು ಮಶಿನ್‌ಗಳಲ್ಲ, ಅವರಿಗೂ ವಿಶ್ರಾಂತಿಯ ಅಗತ್ಯವಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಸತತ ಹಾಗೂ ಬಿಡುವಿಲ್ಲದ ಕ್ರಿಕೆಟ್ ಹಾಗೂ ಪ್ರಯಾಣದಿಂದ ದೇಹ ಮಾತ್ರವಲ್ಲ ಮನಸ್ಸು ಕೂಡ ದಣಿಯುತ್ತದೆ. ಇದರಿಂದ ಉತ್ತಮ ಫಲಿತಾಂಶ ನಿರೀಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ ಕೆಲ ಟೂರ್ನಿಗಳಿಂದ ಹೊರಗುಳಿಯಲೇಬೇಕಾಗಿದೆ. ಆಟಗಾರರ ವರ್ಕ್‌ಲೋಡ್ ಅರಿತುಕೊಳ್ಳುವ ಅಗತ್ಯವಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಕೆಲ ಆಟಾಗಾರರು ಯಾವ ಟೂರ್ನಿ ಹಾಗೂ ಪಂದ್ಯ ಮಿಸ್ ಮಾಡಿಕೊಳ್ಳದೇ ಆಡುತ್ತಿದ್ದಾರೆ. ಅಂಥವರಿಗೆ ವಿಶ್ರಾಂತಿಯ ಅಗತ್ಯವಿದೆ. ಇದರಿಂದ ಆಟಗಾರರು ಮಾನಸಿಕ ಹಾಗೂ ಶಾರೀರಕವಾಗಿ ಫಿಟ್ ಆಗಿರುತ್ತಾರೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ICC schedule:ಏಕದಿನ, ಟಿ20 ವಿಶ್ವಕಪ್ ಸೇರಿ 3 ಟೂರ್ನಿಗೆ ಭಾರತ ಆತಿಥ್ಯ, ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ!

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಲೀಗ್ ಹಂತದಿಂದ ಹೊರಬಿದ್ದಿತ್ತು. ಹೀಗಾಗಿ ಕೆಲ ದಿನಗಳ ವಿಶ್ರಾಂತಿ ಸಿಕ್ಕಿದೆ. ಆದರೆ ನ್ಯೂಜಿಲೆಂಡ್ ತಂಡ ನವೆಂಬರ್ 14 ರಂದು ಆಸ್ಟ್ರೇಲಿಯಾ ವಿರುದ್ದ ಫೈನಲ್ ಪಂದ್ಯ ಆಡಿದೆ. ರನ್ನರ್ ಅಪ್ ಪ್ರಶಸ್ತಿ ಪಡೆದಿರುವ ನ್ಯೂಜಿಲೆಂಡ್ ತಂಡಕ್ಕೆ ವಿಶ್ರಾಂತಿಯೇ ಇಲ್ಲ. ದುಬೈನಿಂದ ಭಾರತ ತಲುಪಿರುವ ನ್ಯೂಜಿಲೆಂಡ್ ನಾಳೆ(ನ.17) ಮೈದಾನಕ್ಕಿಳಿಯಲಿದೆ. 

ಈ ರೀತಿಯ ಒತ್ತಡ ವಾತಾವರಣ ಆಟಗಾರರಿಗೆ ಉತ್ತಮವಲ್ಲ ಅನ್ನೋ ವಾದ ಬಲವಾಗುತ್ತಿದೆ. ಟಿ20 ಸರಣಿಯಿಂದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಹೊರಗುಳಿದ್ದಾರೆ. ಸತತ ಕ್ರಿಕೆಟ್‌ನಿಂದ ವಿಶ್ರಾಂತಿ ಪಡೆದಿದ್ದಾರೆ. ವಿಲಿಯಮ್ಸನ್ ಟೆಸ್ಟ್ ಟೂರ್ನಿಗೆ ಮರಳಲಿದ್ದಾರೆ. 

ಟೀಂ ಇಂಡಿಯಾ ನೂತನ ಕೋಚ್ ರಾಹುಲ್ ದ್ರಾವಿಡ್ ಕೂಡ ಆಟಗಾರರ ಮೇಲಿನ ಒತ್ತಡ ಕುರಿತು ಮಾತನಾಡಿದ್ದಾರೆ. ಕ್ರಿಕೆಟಿಗರು ಫುಟ್ಬಾಲ್ ಪಟುಗಳ ರೀತಿ ಅನುಕರಿಸಬೇಕಿದೆ. ವರ್ಕ್‌ಲೋಡ್ ನಿಭಾಯಿಸಲು ಫುಟ್ಬಾಲ್ ಪಟುಗಳು ಎಲ್ಲಾ ಪಂದ್ಯಗಳನ್ನು ಆಡುವುದಿಲ್ಲ. ಇದನ್ನು ಕ್ರಿಕೆಟಿಗರು ಅನುಸರಿಸಬೇಕು ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.

Sachin Tendulkar Debut; ಕ್ರಿಕೆಟ್ ದೇವರ ಅಂತಾರಾಷ್ಟ್ರೀಯ ಕ್ರಿಕೆಟ್‌ ಪದಾರ್ಪಣೆಗೆ 32 ವರ್ಷದ ಸಂಭ್ರಮ!

ನ್ಯೂಜಿಲೆಂಡ್ ವೇಗಿ ಟಿಮ್ ಸೌಥಿ ಕೂಡ ಸತತ ಕ್ರಿಕೆಟ್ ಟೂರ್ನಿ ಆಟಗಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದಿದ್ದಾರೆ. ಬಿಡುವಿಲ್ಲದ ಸರಣಿ, ಕೋವಿಡ್ ಬಯೋಬಬಲ್ ಸೇರಿದಂತೆ ಹಲವು ಕಾರಣದಿಂದ ಆಟಗಾರರು ಬಳಲುತ್ತಿದ್ದಾರೆ. ಟಿ20 ವಿಶ್ವಕಪ್ ಟೂರ್ನಿಗೂ ಮೊದಲು ನ್ಯೂಜಿಲೆಂಡ ತಂಡ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು.  ಟಿ20 ವಿಶ್ವಕಪ್ ಫೈನಲ್ ಪಂದ್ಯದ ಸೋಲಿನಿಂದ ನ್ಯೂಜಿಲೆಂಡ್ ಇನ್ನು ಹೊರಬಂದಿಲ್ಲ. ಅಷ್ಟರಲ್ಲೇ ಮತ್ತೊಂದು ಸರಣಿಗೆ ಸಜ್ಜಾಗಬೇಕಿದೆ ಎಂದು ಟಿಮ್ ಸೌಥಿ ಹೇಳಿದ್ದಾರೆ
 

Follow Us:
Download App:
  • android
  • ios