ICC schedule:ಏಕದಿನ, ಟಿ20 ವಿಶ್ವಕಪ್ ಸೇರಿ 3 ಟೂರ್ನಿಗೆ ಭಾರತ ಆತಿಥ್ಯ, ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ!

  • ಮುಂದಿನ 8 ಟೂರ್ನಿ ವೇಳಾಪಟ್ಟಿ ಪ್ರಕಟಿಸಿಗ ಐಸಿಸಿ
  • ಭಾರತ ಆತಿಥ್ಯವಹಿಸಲಿದೆ ಮೂರು ಐಸಿಸಿ ಟೂರ್ನಿ
  • 2025ರ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಆತಿಥ್ಯ
ICC announces 2024 to 2031 schedule India to host 3 new events Champions Trophy return to Pakistan ckm

ದುಬೈ(ನ.16): ಕೊರೋನಾ ಆತಂಕ ನಡುವೆ ಹಲವು ಅಡೆತಡೆ ಎದುರಿಸಿ  ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ICC) ಟಿ20 ವಿಶ್ವಕಪ್ 2021 ಟೂರ್ನಿಯನ್ನು(T20 World cup 2021) ಯಶಸ್ವಿಯಾಗಿ ಮಾಡಿದೆ. ಇದೀಗ ಐಸಿಸಿ, ಮುಂದಿನ 10 ವರ್ಷಗಳ ಕ್ರಿಕೆಟ್ ಟೂರ್ನಿ ವೇಳಾಪಟ್ಟಿ(ICC schedule) ಪ್ರಕಟಿಸಿದೆ. 2014 ರಿಂದ 2031ರ ಅವಧಿಯಲ್ಲಿನ ಐಸಿಸಿ ಕ್ರಿಕೆಟ್ ಟೂರ್ನಿಯಲ್ಲಿ ಘೋಷಿಸಿದೆ. ವಿಶೇಷ ಅಂದರೆ ಮುಂದಿನ ದಶಕದ  8 ಐಸಿಸಿ ಟೂರ್ನಿಯನ್ನು 14 ದೇಶಗಳು ಆತಿಥ್ಯ ವಹಿಸಲಿದೆ. 

2022ರ ಟಿ20 ವಿಶ್ವಕಪ್ ಟೂರ್ನಿಯನ್ನು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಆತಿಥ್ಯ ವಹಿಸುತ್ತಿದೆ. ಟೂರ್ನಿ ಆಯೋಜನೆಯಲ್ಲಿ ಭಾರತಕ್ಕೆ ಸಿಂಹಪಾಲು ನೀಡಲಾಗಿದೆ. ಮೂರು ಪ್ರಮುಖ ಟೂರ್ನಿಗಳು ಭಾರತದಲ್ಲಿ ಆಯೋಜನೆಯಾಗಲಿದೆ. 2023ರ ಏಕದಿನ ವಿಶ್ವಕಪ್(ICC ODI world Cup) ಟೂರ್ನಿಯನ್ನು ಭಾರತ ಆತಿಥ್ಯವಹಿಸುತ್ತಿದೆ. ಇನ್ನು 2024ರ ಟಿ20 ವಿಶ್ವಕಪ್ ಟೂರ್ನಿಯನ್ನು ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ಆಯೋಜಿಸಲಿದೆ ಎಂದು ಐಸಿಸಿ ಘೋಷಿಸಿದೆ.

T20 World Cup: ಅನುಭವಿ ಆಟಗಾರರಿದ್ದರೂ ನ್ಯೂಜಿಲೆಂಡ್‌ಗೆ ಒಲಿಯದ ಅದೃಷ್ಟ !

ಪಾಕಿಸ್ತಾನದಲ್ಲಿ 2025ರ ಚಾಂಪಿಯನ್ಸ್ ಟ್ರೋಫಿ(Champions trophy) ಆಯೋಜಿಸಲು ಐಸಿಸಿ ಗ್ರೀನ್ ಸಿಗ್ನಲ್ ನೀಡಿದೆ. ಈ ಮೂಲಕ ಪಾಕಿಸ್ತಾನದಲ್ಲಿ ನಿಂತುಹೋಗಿದ್ದ ಕ್ರಿಕೆಟ್ ಟೂರ್ನಿಯನ್ನು ಭರ್ಜರಿಯಾಗಿ ಆಯೋಜಿಸಲು ಐಸಿಸಿ ಪ್ಲಾನ್ ಮಾಡಿದೆ. ಆದರೆ ಪಾಕಿಸ್ತಾನ ಪ್ರವಸಾಕ್ಕೆ ಎಷ್ಟು ತಂಡಗಳು ಸಮ್ಮತಿ ಸೂಚಿಸಲಿವೆ ಅನ್ನೋ ಪ್ರಶ್ನೆ ಎದ್ದಿದೆ.  2016ರಲ್ಲಿ ಚಾಂಪಿಯನ್ಸ್ ಟ್ರೋಫಿ ಚಾಂಪಿಯನ್ ಆಗಿರುವ ಪಾಕಿಸ್ತಾನ ಕ್ರಿಕೆಟ್‌ಗೆ ಐಸಿಸಿ ನಿರ್ಧಾರ ಮತ್ತಷ್ಟು ಚೈತನ್ಯ ನೀಡಿದೆ.

 

2026ರ ಟಿ20 ವಿಶ್ವಕಪ್ ಟೂರ್ನಿಯನ್ನು ಭಾರತ ಹಾಗೂ ಶ್ರೀಲಂಕಾ ಆತಿಥ್ಯವಹಿಸಲಿದೆ. 2016ರಲ್ಲೂ ಭಾರತ ಹಾಗೂ ಶ್ರೀಲಂಕಾ ಟಿ20 ವಿಶ್ವಕಪ್ ಟೂರ್ನಿಯನ್ನು ಜಂಟಿಯಾಗಿ ಆಯೋಜಿಸಿತ್ತು. 2027ರ ಏಕದಿನ ವಿಶ್ವಕಪ್ ಟೂರ್ನಿಯನ್ನು ಮೂರು ದೇಶಗಳು ಆಯೋಜಿಸುತ್ತಿದೆ. ಸೌತ್ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮಿಬಿಯಾ ಆತಿಥ್ಯ ವಹಿಸುತ್ತಿದೆ. 2028ರ ಟಿ20 ವಿಶ್ವಕಪ್ ಟೂರ್ನಿಯನ್ನು ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ ಆಯೋಜಿಸುತ್ತಿದೆ. 2015ರ ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಆತಿಥ್ಯವಹಿಸಿತ್ತು.

ಏಕದಿನ ವಿಶ್ವಕಪ್, ಟಿ20 ವಿಶ್ವಕಪ್ ಆಯೋಜನೆ ಬಳಿಕ 2029ರಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿ ಆಯೋಜಿಸಲಿದೆ. 2016ರಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ ಮುಗ್ಗರಿಸಿತ್ತು. 2013ರಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿದೆ.  

ICC T20 World Cup: ಚಾಂಪಿಯನ್ ಆಸ್ಟ್ರೇಲಿಯಾ ತಂಡಕ್ಕೆ ಸಿಕ್ಕಿದ ಬಹುಮಾನದ ಮೊತ್ತವೆಷ್ಟು..?

2019ರಲ್ಲಿ ಏಕದಿನ ವಿಶ್ವಕಪ್ ಆಯೋಜಿಸಿದ ಇಂಗ್ಲೆಂಡ್, 2030ರಲ್ಲಿ ಟಿ20 ವಿಶ್ವಕಪ್ ಆಯೋಜಿಸುತ್ತಿದೆ. ಇಂಗ್ಲೆಂಡ್, ಐರ್ಲೆಂಡ್ ಹಾಗೂ ಸ್ಕಾಟ್‌ಲೆಂಡ್ ದೇಶ 2030ರ ಟಿ20 ವಿಶ್ವಕಪ್ ಟೂರ್ನಿ ಆಯೋಜಿಸುತ್ತಿದೆ. 2031ರಲ್ಲಿ ಭಾರತ ಹಾಗೂ ಬಾಂಗ್ಲಾದೇಶ ಏಕದಿನ ವಿಶ್ವಕಪ್ ಆಯೋಜಿಸಲಿದೆ.  

ಟಿ20 ವಿಶ್ವಕಪ್ 2021ರ ಟೂರ್ನಿ ಬೆನ್ನಲ್ಲೇ ಐಸಿಸಿ ಈ ಪ್ರಕಟಣೆ ಅಭಿಮಾನಿಗಳಲ್ಲಿ ಸಂತಸ ತಂದಿದೆ. 2021ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ  ಆಸ್ಟ್ರೇಲಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವರುದ್ಧ ಭರ್ಜರಿ ಗೆಲುವು ದಾಖಲಿಸಿದ ಆಸ್ಟ್ರೇಲಿಯಾ ಚೊಚ್ಚಲ ಟಿ20 ವಿಶ್ವಕಪ್ ಟ್ರೋಪಿ ಗೆದ್ದು ಸಂಭ್ರಮಿಸಿತು. ಇತ್ತ 2019ರ ಏಕದಿನ ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಮುಗ್ಗರಿಸಿದ ನ್ಯೂಜಿಲೆಂಡ್, ಇದೀಗ ಟಿ20 ಟೂರ್ನಿಯಲ್ಲೂ ನ್ಯೂಜಿಲೆಂಡ್ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿ ಪಡಬೇಕಾಯಿತು.

 

 

Latest Videos
Follow Us:
Download App:
  • android
  • ios