ಗೆಲುವಿಗೆ 152 ರನ್ ಗುರಿ, ಬಲಿಷ್ಠ ಬೌಲಿಂಗ್ ಪಡೆ ಮುಂದೆ ಭಾರತ ಮಹಿಳಾ ತಂಡ ಹೋರಾಟ ನೀಡಿದರೂ, ಗೆಲುವಿನ ದಡ ಸೇರಲಿಲ್ಲ. ಸ್ಮೃತಿ ಮಂಧಾನಾ ಹಾಗೂ ರಿಚಾ ಘೋಷ್ ಹೋರಾಟ ಸಾಕಾಗಲಿಲ್ಲ. ಭಾರತ ವಿರುದ್ದ ಗೆದ್ದ ಇಂಗ್ಲೆಂಡ್ ಸೆಮಿಫೈನಲ್‌ಗೆ ಲಗ್ಗೆ ಇಟ್ಟರೆ, ಭಾರತ ಇದೀಗ ಐರ್ಲೆಂಡ್ ವಿರುದ್ಧದ ಪಂದ್ಯಕ್ಕೆ ಕಾಯಬೇಕಿದೆ. 

ಜಾರ್ಜ್ ಪಾರ್ಕ್(ಫೆ.18): ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶಿಸಿದೆ. ಭಾರತ ವಿರುದ್ಧ 11 ರನ್ ಗೆಲುವು ದಾಖಲಿಸುವ ಮೂಲಕ ಸೆಮಿಫೈನಲ್ ಪ್ರವೇಶ ಖಚಿತಪಡಿಸಿಕೊಂಡಿದೆ. ಸೆಮಿಫೈನಲ್ ಖಚಿತಪಡಿಸಿಕೊಳ್ಳುವ ಮೊದಲ ಅವಕಾಶವನ್ನು ಭಾರತ ಮಿಸ್ ಮಾಡಿಕೊಂಡಿದೆ. ಹಾಗಂತ ನಿರಾಸೆ ಪಡಬೇಕಾದ ಅಗತ್ಯವಿಲ್ಲ. ಐರ್ಲೆಂಡ್ ವಿರುದ್ದದ ಪಂದ್ಯದಲ್ಲಿ ಗೆದ್ದು ಸೆಮೀಸ್‌ಗೆ ಎಂಟ್ರಿ ಪಡೆಯುವ ಅವಕಾಶ ಭಾರತ ಮಹಿಳಾ ತಂಡಕ್ಕಿದೆ. ಇಂದಿನ ರೋಚಕ ಪಂದ್ಯದಲ್ಲಿ ಭಾರತ 152 ರನ್ ಟಾರ್ಗೆಟ್ ಬೆನ್ನಟ್ಟಲು ವಿಫಲಗೊಂಡಿತು.ವಿಕೆಟ್ ನಷ್ಟಕ್ಕೆ ರನ್ ಸಿಡಿಸಿ ಸೋಲೊಪ್ಪಿಕೊಂಡಿತು. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಮಣಿಸುವ ಗುರಿ ಕನಸಾಗಿಯೇ ಉಳಿಯಿತು. ಈ ಗೆಲುವಿನೊಂದಿಗೆ ಇಂಗ್ಲೆಂಡ್ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧ ಸತತ 6ನೇ ಗೆಲುವು ಕಂಡಿತು.

ಭಾರತದ ಕಠಿಣ ಸವಾಲು ಎದುರಿಸಿತು. ಭಾರತದ ಪರ ಸ್ಮೃತಿ ಮಂಧಾನಾ ಹಾಗೂ ರಿಚಾ ಘೋಷ್ ದಿಟ್ಟ ಹೋರಾಟ ನೀಡಿದರು. ಆದರೆ ಇತರರಿಂದ ಉತ್ತಮ ರನ್ ಹರಿದು ಬರಲಿಲ್ಲ. ಆರಂಭದಲ್ಲೇ ಭಾರತ ಶೆಫಾಲಿ ವರ್ಮಾ ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿತು. ಒಂದೆಡೆ ಸ್ಮೃತಿ ಮಂಧನಾ ಹೋರಾಟ ಮುಂದುವರಿಸಿದರೆ, ಮತ್ತೊಂದೆಡೆ ವಿಕೆಟ್ ಪತನ ಮುಂದುವರಿಯಿತು. ಶೆಫಾಲಿ ವರ್ಮಾ 8 ರನ್ ಸಿಡಿಸಿ ಔಟಾದರು. ಇತ್ತ ಜೆಮಿ ರೋಡ್ರಿಗೆಸ್ 13 ರನ್ ಕಾಣಿಕೆ ನೀಡಿದರು.

ದಿಲ್ಲಿ ವಾಲಾನ ಚೋಲೆ ಬಟುರೆ ಪ್ರೀತಿ, ಕ್ಯಾಮೆರದಲ್ಲಿ ಸೆರೆಯಾಯ್ತು ಕೊಹ್ಲಿ ರಿಯಾಕ್ಷನ್!

ನಾಯಕಿ ಹರ್ಮನ್‌ಪ್ರೀತ್ ಕೌರ್ ಕೇವಲ 4 ರನ್ ಸಿಡಿಸಿ ನಿರ್ಗಮಿಸಿದರು. ಇದು ಭಾರತ ತಂಡಕ್ಕೆ ತೀವ್ರ ಹೊಡೆತ ನೀಡಿತು. ಇತ್ತ ಏಕಾಂಗಿ ಹೋರಾಟ ನೀಡಿದ ಸ್ಮೃತಿ ಮಂಧನಾ ಹಾಫ್ ಸೆಂಚುರಿ ಸಿಡಿಸಿದರು. ಆಧರೆ ಮಂಧಾನ ಹೋರಾಟ 52 ರನ್‌ಗೆ ಅಂತ್ಯವಾಯಿತು. ಸ್ಮೃತಿ ಮಂಧಾನಾ ವಿಕೆಟ್ ಪತನದ ಬೆನ್ನಲ್ಲೇ ಭಾರತದ ಮೇಲಿನ ಒತ್ತಡ ಹೆಚ್ಚಾಯಿತು. ರಿಚಾ ಘೋಷ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ ದೀಪ್ತಿ ಶರ್ಮಾ ಕೇವಲ 7 ರನ್ ಸಿಡಿಸಿ ಔಟಾದರು.

ರಿಚಾ ಘೋಷ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ ಗೆಲುವಿನ ದೇಡ ಸೇರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಭಾರತ 5 ವಿಕೆಟ್ ನಷ್ಟಕ್ಕೆ 140 ರನ್ ಸಿಡಿಸಿತು. ರಿಚಾ ಘೋಷ್ ಅಜೇಯ 47 ರನ್ ಸಿಡಿಸಿದರೆ, ಪೂಜಾ ವಸ್ತ್ರಾಕರ್ ಅಜೇಯ 2 ರನ್ ಸಿಡಿಸಿದರು. ಇಂಗ್ಲೆಂಡ್ 11 ರನ್ ಗೆಲುವು ದಾಖಲಿಸಿತು. 

Delhi Test: ಅಕ್ಷರ್-ಅಶ್ವಿನ್ ಆಕರ್ಷಕ ಶತಕದ ಜತೆಯಾಟ; ಆಸ್ಟ್ರೇಲಿಯಾಗೆ ಕೇವಲ 1 ರನ್‌ ಮುನ್ನಡೆ

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯ ಅತ್ಯಂತ ಮಹತ್ವದ ಪಂದ್ಯವಾಗಿತ್ತು. ಕಾರಣ ಈ ಪಂದ್ಯ ಗೆದ್ದ ಇಂಗ್ಲೆಂಡ್ ನೇರವಾಗಿ ಸೆಮಿಫೈನಲ್ ಪ್ರವೇಶ ಖಚಿತಪಡಿಸಿಕೊಂಡಿತು. ಇದೀಗ ಭಾರತ ಮಹಿಳಾ ತಂಡಕ್ಕೆ ಸೆಮಿಫೈನಲ್ ಪ್ರವೇಶಕ್ಕೆ ಕೊನೆಯ ಅವಕಾಶವಿದೆ. ಐರ್ಲೆಂಡ್ ವಿರುದ್ದದ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸುವ ಅವಕಾಶವಿದೆ. ಐರ್ಲೆಂಡ್ ವಿರುದ್ಧ ಗೆಲ್ಲಲೇಬೇಕಾದ ಒತ್ತಡ ಇದೀಗ ಭಾರತ ಮಹಿಳಾ ತಂಡದ ಮೇಲಿದೆ.