ದಿಲ್ಲಿ ವಾಲಾನ ಚೋಲೆ ಬಟುರೆ ಪ್ರೀತಿ, ಕ್ಯಾಮೆರದಲ್ಲಿ ಸೆರೆಯಾಯ್ತು ಕೊಹ್ಲಿ ರಿಯಾಕ್ಷನ್!

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 2 ಟೆಸ್ಟ್ ಪಂದ್ಯದಲ್ಲಿನ ಒಂದು ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. ಪೆವಿಲಿಯನ್‌ನಲ್ಲಿ ಕೊಹ್ಲಿ ಹಾಗೂ ಕೋಚ್ ದ್ರಾವಿಡ್ ನಡುವಿನ ಗಂಭೀರ ಮಾತುಕತೆ ನಡುವೆ ಚೋಲೆ ಬಟುರ ತಂದಿದ್ದಾರೆ. ಈ ವೇಳೆ ಕೊಹ್ಲಿ ನೀಡಿದ ರಿಯಾಕ್ಷನ್ ಇದೀಗ ವೈರಲ್ ಆಗಿದೆ.

India vs Australia 2nd test Virat Kohli reaction During chole bhature serve goes viral Typical delhi food ckm

ದೆಹಲಿ(ಫೆ.18): ಆಸ್ಟ್ರೇಲಿಯಾ ವಿರುದ್ದದ 2ನೇ ಟೆಸ್ಟ್ ಪಂದ್ಯ ಟೀಂ ಇಂಡಿಯಾಗೆ ಕಠಿಣ ಹೋರಾಟ ಎದುರಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 1 ರನ್ ಹಿನ್ನಡೆ ಅನುಭವಿಸಿದೆ. ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ಭಾರತ ಎಡವಿದೆ. ಅದರಲ್ಲೂ ವಿರಾಟ್ ಕೊಹ್ಲಿ ಔಟ್ ಭಾರಿ ಚರ್ಚೆಗೂ ಕಾರಣವಾಗಿದೆ. ಪೆವಿಲಿಯನ್ ಸೇರಿಕೊಂಡ ಕೊಹ್ಲಿ ಅಂಪೈರ್ ನೀಡಿದ ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಕೋಚ್ ರಾಹುಲ್ ದ್ರಾವಿಡ್ ಜೊತೆ ಗಂಭೀರ ಚರ್ಚೆ ನಡೆಸಿದ್ದಾರೆ.  ಈ ವೇಳೆ ಕೊಹ್ಲಿಗೆ ಚೋಲೆ ಬಟುರೆ ತರಲಾಗಿದೆ. ಕೊಹ್ಲಿಯನ್ನು ಕರೆದ ಸಿಬ್ಬಂದಿ ಚೋಲೆ ಬಟುರೆ ಎಂದಿದ್ದಾರೆ.  ತಕ್ಷಣ ಕೊಹ್ಲಿ ಮುಖದಲ್ಲಿ ನಗು ಕಾಣಿಸಿಕೊಂಡಿದೆ. ಇಷ್ಟೇ ಅಲ್ಲ ಚಪ್ಪಾಳೆ ತಟ್ಟಿ ಒಳಗಿಡಿ ಎಂದು ಸೂಚನೆ ನೀಡಿದ್ದಾರೆ.

ಚೋಲೆ ಬಟುರೆ ನೋಡಿದ ವಿರಾಟ್ ಕೊಹ್ಲಿ ಮತ್ತಷ್ಟು ಉತ್ಸುಕರಾಗಿದ್ದಾರೆ. ತಕ್ಷಣವೇ ಚಪ್ಪಾಳೆ ತಟ್ಟಿ ಒಳಗಿಡಲು ಸೂಚಿಸಿದ್ದಾರೆ. ಕೊಹ್ಲಿಯ ಈ ರಿಯಾಕ್ಷನ್ ಇದೀಗ ವೈರಲ್ ಆಗಿದೆ. ದಿಲ್ಲಿ ಮಂದಿಗೆ ಚೋಲೆ ಎಂದರೆ ಪಂಚ ಪ್ರಾಣ. ಇದು ವಿರಾಟ್ ಕೊಹ್ಲಿಯ ಮುಖದಲ್ಲಿ ಕಾಣಿಸುತ್ತಿದೆ. ಈ ಕುರಿತು ಹಲವು ಪ್ರತಿಕ್ರಿಯೆ ನೀಡಿದ್ದಾರೆ. 

Delhi Test: ಅಕ್ಷರ್-ಅಶ್ವಿನ್ ಆಕರ್ಷಕ ಶತಕದ ಜತೆಯಾಟ; ಆಸ್ಟ್ರೇಲಿಯಾಗೆ ಕೇವಲ 1 ರನ್‌ ಮುನ್ನಡೆ

ವಿರಾಟ್ ಕೊಹ್ಲಿ ಚೋಲೆ ಬಟುರೆ ರಾಯಭಾರಿ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ದೆಹಲಿ ಚೋಲೆ ಬಟುರೆ ಕುರಿತು ಹೆಚ್ಚು ವಿವರಿಸಬೇಕಿಲ್ಲ. ತಿಂದವರಿಗೆ ಗೊತ್ತು ಅದರ ಸವಿ. ದಿಲ್ಲಿಯ ಯಾವುದೇ ನಿವಾಸಿಯ ಪ್ರತಿಕ್ರಿಯೆ ಹೀಗೆ ಇರುತ್ತದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. 

 

 

ಆಸ್ಟ್ರೇಲಿಯಾ ವಿರುದ್ದಧ 2ನೇ ಪಂದ್ಯ ಮೊದಲ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ  44 ರನ್ ಸಿಡಿಸಿ ಔಟಾಗಿದ್ದಾರೆ. ವಿರಾಟ್ ಕೊಹ್ಲಿ ಎಲ್‌ಬಿ ಬಲೆಗೆ ಬೀಳುವ ಮೂಲಕ ಪೆವಿಲಿಯನ್ ಸೇರಿಕೊಂಡರು.  ಆದರೆ ಈ ತೀರ್ಪಿನ ಕುರಿತು ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪೆವಿಲಿಯನ್‌ನಲ್ಲಿ ಕೊಹ್ಲಿ ಸತತ ಚರ್ಚೆ ನಡೆಸಿದ್ದಾರೆ. ರಾಹುಲ್ ದ್ರಾವಿಡ್ ಜೊತೆಗೆ ಚರ್ಚೆ ನಡೆಸುತ್ತಿರುವ ವೇಳೆ ತಂದ ಚೋಲೆ ಬಟುರೆಗೆ ನೀಡಿದ ರಿಯಾಕ್ಷನ್ ಇದೀಗ ವೈರಲ್ ಆಗಿದೆ.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 262 ರನ್ ಸಿಡಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ 1 ರನ್ ಹಿನ್ನಡೆ ಅನುಭವಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ದಿಟ್ಟ ಹೋರಾಟ ನೀಡಲು ವಿಫಲವಾಗಿದೆ. ನಾಯಕ ರೊಹಿತ್ ಶರ್ಮಾ 32 ರನ್ ಸಿಡಿಸಿ ಔಟಾಗಿದ್ದಾರೆ. ಕೆಎಲ್ ರಾಹುಲ್ ಕೇವಲ 17 ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರು. ಇನ್ನು 100 ನೇ ಟೆಸ್ಟ್ ಪಂದ್ಯ ಆಡಿದ ಚೇತೇಶ್ವರ ಪೂಜಾರ ಡಕೌಟ್ ಆದರು. ವಿರಾಟ್ ಕೊಹ್ಲಿ ಹೋರಾಟ ನೀಡಿದ 44 ರನ್ ಕಾಣಿಕೆ ನೀಡಿದರು. ಇತ್ತ ಶ್ರೇಯಸ್ ಅಯ್ಯರ್ 4 ರನ್ ಸಿಡಿಸಿ ಪೆವಿಲಿಯನ್‌ಗೆ ಹಿಂತಿರುಗಿದರು. ರವೀಂದ್ರ ಜಡೇಜಾ 26 ರನ್ ಕಾಣಿಕೆ ನೀಡಿದರು. ಶ್ರೀಕಾರ್ ಭರತ್ ಹೋರಾಟ 6 ರನ್‌ಗೆ ಅಂತ್ಯವಾಯಿತು. ಆದರೆ ಅಕ್ಸರ್ ಪಟೇಲ್ ಹಾಗೂ ಆರ್ ಅಶ್ವಿನ್ ಜೊತೆಯಾದಿಂದ ಭಾರತ ದಿಟ್ಟ ಹೋರಾಟ ನೀಡಿತು. ಭಾರಿ ಹಿನ್ನಡೆಯಲ್ಲಿದ್ದ ಭಾರತ, ಅಂತರ ಕಡಿಮೆಮಾಡಿಕೊಂಡಿತು. ಆರ್ ಅಶ್ವಿನ್ 37 ರನ್ ಕಾಣಿಕ ನೀಡಿದರೆ, ಆಕ್ಸರ್ ಪಟೇಲ್ 74 ರನ್ ಸಿಡಿಸಿದರು. ಅಂತಿಮವಾಗಿ ಭಾರತ 262 ರನ್ ಸಿಡಿಸಿ ಆಲೌಟ್ ಆಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 263 ರನ್ ಸಿಡಿಸಿತ್ತು.

Eng vs NZ: ಗುರು ಬ್ರೆಂಡನ್‌ ಮೆಕ್ಕಲಂ ಅಪರೂಪದ ದಾಖಲೆ ಮುರಿದ ಬೆನ್ ಸ್ಟೋಕ್ಸ್‌..!

Latest Videos
Follow Us:
Download App:
  • android
  • ios