ಮಹಿಳಾ ಏಷ್ಯಾಕಪ್‌ ಟೂರ್ನಿ ಗೆಲ್ಲಲು ಭಾರತಕ್ಕೆ 66 ರನ್‌ಗಳ ಸಾಧಾರಣ ಗುರಿಪ್ರಮುಖ 3 ವಿಕೆಟ್ ಕಬಳಿಸಿ ಮಿಂಚಿದ ರೇಣುಕಾ ಸಿಂಗ್7ನೇ ಮಹಿಳಾ ಏಷ್ಯಾಕಪ್ ಹೊಸ್ತಿಲಲ್ಲಿ ಭಾರತ

ಸೈಲೆಟ್‌(ಅ.15): ರೇಣುಕಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್ ಹಾಗೂ ಸ್ನೆಹ್ ರಾಣಾ ಮಾರಕ ದಾಳಿಗೆ ತತ್ತರಿಸಿದ ಶ್ರೀಲಂಕಾ ಮಹಿಳಾ ಕ್ರಿಕೆಟ್ ತಂಡವು 9 ವಿಕೆಟ್ ಕಳೆದುಕೊಂಡು 65 ರನ್‌ ಬಾರಿಸಿದ್ದು, ಏಷ್ಯಾಕಪ್ ಟ್ರೋಫಿ ಗೆಲ್ಲಲು ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ತಂಡಕ್ಕೆ ಸಾಧಾರಣ ಗುರಿ ನೀಡಿದೆ. ಈ ಮೂಲಕ ಭಾರತ ಮಹಿಳಾ ಕ್ರಿಕೆಟ್ ತಂಡವು 7ನೇ ಏಷ್ಯಾಕಪ್ ಟ್ರೋಫಿ ಗೆಲ್ಲುವತ್ತ ದಿಟ್ಟ ಹೆಜ್ಜೆಯಿಟ್ಟಿದೆ.

Add Asianetnews Kannada as a Preferred SourcegooglePreferred

ಟಾಸ್ ಗೆದ್ದ ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕಿ ಚಮಾರಿ ಅಟಪಟ್ಟು ಮೊದಲು ಬ್ಯಾಟ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ಶ್ರೀಲಂಕಾ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಪಾಕಿಸ್ತಾನ ವಿರುದ್ದ ಸೆಮಿಫೈನಲ್‌ನಲ್ಲಿ ರೋಚಕ ಗೆಲುವು ಸಾಧಿಸುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದ್ದ ಶ್ರೀಲಂಕಾ ತಂಡವು, ಭಾರತದೆದುರು ಬ್ಯಾಟಿಂಗ್‌ನಲ್ಲಿ ದಿಟ್ಟ ಪ್ರದರ್ಶನ ತೋರಲು ವಿಫಲವಾಯಿತು. ನಾಯಕಿ ಚಮಾರಿ ಅಟಪಟ್ಟು(6) ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಅನುಷ್ಕಾ ಸಂಜೀವಿನಿ ಇಬ್ಬರೂ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆಗುವ ಮೂಲಕ ಪೆವಿಲಿಯನ್ ಸೇರಿದರು. ಹರ್ಷಿತಾ ಮಾದವಿ, ನೀಲಾಕ್ಷಿ ಡಿ ಸಿಲ್ವಾ, ಕವಿಶಾ ದಿಲ್ಹಾರಿ, ಮಾಲ್ಷಾ ಸೆಹಾನಿ ಹಾಗೂ ಸುಗಂದಿಕಾ ಕುಮಾರಿ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. ಪರಿಣಾಮ ಶ್ರೀಲಂಕಾ ತಂಡವು 32 ರನ್ ಗಳಿಸುವಷ್ಟರಲ್ಲಿ 8 ವಿಕೆಟ್‌ ಕಳೆದುಕೊಂಡು ಹೀನಾಯ ಪ್ರದರ್ಶನ ತೋರಿತು. 

Women's Asia Cup: ಭಾರತಕ್ಕೆ 7ನೇ ಏಷ್ಯಾಕಪ್ ಟ್ರೋಫಿ ಗುರಿ

ಇನ್ನು ಕೊನೆಯಲ್ಲಿ ಒಶಾಡಿ ರಣಸಿಂಘೆ(13) ಹಾಗೂ ಇನೊಕಾ ರಣವೀರಾ(18*) ಕೆಲಕಾಲ ಭಾರತೀಯ ಬೌಲರ್‌ಗಳಿಗೆ ಪ್ರತಿರೋಧ ತೋರುವ ಮೂಲಕ ತಂಡದ ಮೊತ್ತವನ್ನು 50ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಈ ಇಬ್ಬರು ಬ್ಯಾಟರ್‌ಗಳನ್ನು ಹೊರತುಪಡಿಸಿ ಲಂಕಾದ ಯಾವೊಬ್ಬ ಬ್ಯಾಟರ್ ಕೂಡಾ ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ. 

Scroll to load tweet…

ಭಾರತ ಪರ ಮಿಂಚಿನ ಪ್ರದರ್ಶನ ತೋರಿದ ರೇಣುಕಾ ಸಿಂಗ್‌ 3 ಓವರ್ ಬೌಲಿಂಗ್ ಮಾಡಿ ಒಂದು ಮೇಡನ್ ಸಹಿತ ಕೇವಲ 5 ರನ್ ನೀಡಿ 3 ವಿಕೆಟ್ ಪಡೆದರೆ, ಕನ್ನಡತಿ ರಾಜೇಶ್ವರಿ ಹಾಗೂ ಸ್ನೆಹ್ ರಾಣಾ ತಲಾ ಎರಡೆರಡು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ಶ್ರೀಲಂಕಾ ಮಹಿಳಾ ಕ್ರಿಕೆಟ್ ತಂಡ: 65/9

ಇನೊಕಾ ರಣವೀರಾ: 18
ಒಶಾಡಿ ರಣಸಿಂಘೆ: 13

ರೇಣುಕಾ ಸಿಂಗ್: 5/3

(* ಶ್ರೀಲಂಕಾದ ಬ್ಯಾಟಿಂಗ್ ಮುಕ್ತಾಯದ ವೇಳೆಗೆ)