ಪರ್ತ್(ಫೆ.24): ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ತಂಡ ಪೀಲ್ಡಿಂಗ್ ಆಯ್ದುಕೊಂಡಿದೆ. ಭಾರತ ತಂಡ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ.

ಐಸಿಸಿ ಮಹಿಳಾ ಟಿ20 ವಿಶ್ವಕಪ್‌: ಭಾರತಕ್ಕಿಂದು ಬಾಂಗ್ಲಾ ಸವಾಲು

ಈಗಾಗಲೇ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಮಣಿಸಿರುವ ಭಾರತ, ಇದೀಗ ನೆರೆಯ ಬಾಂಗ್ಲದೇಶವನ್ನು ಸೋಲಿಸಿ ಸೆಮಿಫೈನಲ್ ಹಾದಿ ಸುಲಭ ಮಾಡಿಕೊಳ್ಳಲು ಹರ್ಮನ್‌ಪ್ರೀತ್ ಪಡೆ ಎದುರು ನೋಡುತ್ತಿದೆ. ಆರಂಭಿಕ ಬ್ಯಾಟ್ಸ್‌ವುಮೆನ್ ಸ್ಮೃತಿ ಮಂಧನಾ ವೈರಲ್ ಫೀವರ್‌ನಿಂದ ಬಳಲುತ್ತಿದ್ದು ಪಂದ್ಯದಿಂದ ವಿಶ್ರಾಂತಿ ಪಡೆದಿದ್ದಾರೆ. ಮಂಧನಾ ಬದಲಿಗೆ ರಿಚಾ ಘೋಷ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 

ಇನ್ನು ಎ ಗುಂಪಿನಲ್ಲಿ ಬಾಂಗ್ಲಾದೇಶಕ್ಕಿದು ಮೊದಲ ಪಂದ್ಯವಾಗಿದ್ದು, ಭಾರತಕ್ಕೆ ಆಘಾತ ನೀಡಲು ಎದುರು ನೋಡುತ್ತಿದೆ. ಈಗಾಗಲೇ ಏಷ್ಯಾಕಪ್‌ನಲ್ಲಿ ಭಾರತಕ್ಕೆ ಶಾಕ್ ನೀಡಿದ್ದ ಬಾಂಗ್ಲಾ ಅಂತಹದ್ದೇ ಪ್ರದರ್ಶನ ತೋರುವ ಕನವರಿಕೆಯಲ್ಲಿದೆ. 

ತಂಡಗಳು ಹೀಗಿವೆ:

ಭಾರತ:

ಬಾಂಗ್ಲಾದೇಶ: