Asianet Suvarna News Asianet Suvarna News

ರೋಹಿತ್ ಶರ್ಮಾ ಮುಂಬೈನಲ್ಲೇ ಉಳಿತಾರಾ..? ಬೇರೆ ಐಪಿಎಲ್ ತಂಡ ಸೇರಿಕೊಳ್ತಾರಾ..?

ಮುಂಬರುವ ಐಪಿಎಲ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದಲ್ಲೇ ಇರುತ್ತಾರೋ ಅಥವಾ ಬೇರೆ ತಂಡವನ್ನು ಕೂಡಿಕೊಳ್ಳುತ್ತಾರೋ ಎನ್ನುವ ಚರ್ಚೆ ಜೋರಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Will Rohit Sharma stay in Mumbai Indians or he may join another IPL team kvn
Author
First Published Aug 29, 2024, 4:07 PM IST | Last Updated Aug 29, 2024, 4:07 PM IST

ಬೆಂಗಳೂರು: ರೋಹಿತ್ ಶರ್ಮಾ ಅವರನ್ನು ಖರೀದಿಸಿ ಕ್ಯಾಪ್ಟನ್ ಮಾಡಲು ಐಪಿಎಲ್‌ ಫ್ರಾಂಚೈಸಿಗಳು ಮುಗಿ ಬಿದ್ದಿದ್ದಾರೆ. ಆದ್ರೆ ಅವರಿಗೆಲ್ಲಾ ನಿರಾಸೆಯಾಗುವ ಸಾಧ್ಯತೆ ಇದೆ. ಅಯ್ಯೋ ರೋಹಿತ್ ಮುಂಬೈನಲ್ಲೇ ಉಳಿತಾರಾ ಅಂತ ಪ್ರಶ್ನೆ ಕೇಳೋಕೆ ಹೋಗಬೇಡಿ. ಅದಕ್ಕೂ ಉತ್ತರವಿಲ್ಲ. ಹಿಟ್‌ಮ್ಯಾನ್ ಐಪಿಎಲ್ ಕ್ಯಾಪ್ಟನ್ಸಿ ಸಿಕ್ರೇಟ್ ರಿವೀಲ್ ಮಾಡ್ತೀವಿ ನೋಡಿ.

ರೋಹಿತ್ ಶರ್ಮಾ ಯಾವ ತಂಡದಲ್ಲಿದ್ರೂ ಕ್ಯಾಪ್ಟನ್ ಆಗಲ್ವಾ..?

ರೋಹಿತ್ ಶರ್ಮಾ, ಎಂಎಸ್ ಧೋನಿ ಬಳಿಕ ಮೋಸ್ಟ್ ಸಕ್ಸಸ್ ಫುಲ್ ಕ್ಯಾಪ್ಟನ್. ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಮೂರು ಐಸಿಸಿ ಟ್ರೋಫಿ ಗೆದ್ದಿದೆ. ಒಮ್ಮೆ ಏಷ್ಯಾಕಪ್ ಚಾಂಪಿಯನ್ ಆಗಿದೆ. ಮಹಿ ಕ್ಯಾಪ್ಟನ್ಸಿಯಲ್ಲೇ ಚೆನ್ನೈ ಸೂಪರ್ ಕಿಂಗ್ಸ್‌ ತಂಡ ಐದು ಐಪಿಎಲ್ ಟ್ರೋಫಿ, ಎರಡು ಚಾಂಪಿಯನ್ಸ್ ಲೀಗ್ ಗೆದ್ದಿದೆ. ಹಾಗಾಗಿ ಧೋನಿ ಭಾರತದ ಯಶಸ್ವಿ ನಾಯಕ. 

ಐಪಿಎಲ್ ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿಯಿಂದ ಈ ಮೂವರಿಗೆ ಗೇಟ್‌ಪಾಸ್..? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಮೋಸ್ಟ್ ಸಕ್ಸಸ್ ಫುಲ್ ಕ್ಯಾಪ್ಟನ್ ರೋಹಿತ್ ಶರ್ಮಾ

ಧೋನಿ ಬಿಟ್ರೆ ಭಾರತದಲ್ಲಿ ಸಕ್ಸಸ್ ಫುಲ್ ಕ್ಯಾಪ್ಟನ್ ಅಂದ್ರೆ ಅದು ರೋಹಿತ್ ಶರ್ಮಾ ಮಾತ್ರ. ಹಿಟ್‌ಮ್ಯಾನ್ ನಾಯಕತ್ವದಲ್ಲಿ ಟೀಂ ಇಂಡಿಯಾ, ಎರಡು ಏಷ್ಯಾಕಪ್ ಗೆದ್ದಿದೆ.  ಒಂದು ಟಿ20 ವರ್ಲ್ಡ್‌ಕಪ್ ಗೆದ್ದಿದೆ.  ಏಕದಿನ ವಿಶ್ವಕಪ್ ಮತ್ತು ಟೆಸ್ಟ್ ವಿಶ್ವಕಪ್ ಫೈನಲ್ ಪ್ರವೇಶಿಸಿದೆ. ರೋಹಿತ್ ಶರ್ಮಾ ಕ್ಯಾಪ್ಟನ್ಸಿಯಲ್ಲಿ ಮುಂಬೈ ಇಂಡಿಯನ್ಸ್, ಒಮ್ಮೆ ಚಾಂಪಿಯನ್ಸ್ ಲೀಗ್ ಗೆದ್ದಿದ್ದರೆ, ದಾಖಲೆಯ ಐದು ಬಾರಿ ಐಪಿಎಲ್‌ ಟ್ರೋಫಿಯನ್ನೂ ಗೆದ್ದಿದೆ. ರೋಹಿತ್ ಶರ್ಮಾ ಐದು ಐಪಿಎಲ್‌ ಟ್ರೋಫಿ ಗೆದ್ಮೇಲೆನೇ ಧೋನಿ ಐದು ಐಪಿಎಲ್ ಟ್ರೋಫಿ ಗೆದ್ದಿದ್ದು.

ರೋಹಿತ್ ಶರ್ಮಾ ನಾಯಕನಾಗಿ ಇಷ್ಟೆಲ್ಲಾ ಸಕ್ಸಸ್ ಕಂಡರೂ, ಮುಂಬೈ  ಇಂಡಿಯನ್ಸ್ ಫ್ರಾಂಚೈಸಿ ಮಾತ್ರ ಅವರನ್ನು ಕ್ಯಾಪ್ಟನ್ಸಿಯಿಂದ ಕಿಕೌಟ್ ಮಾಡಿದೆ. ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಭಾರತ ಟಿ20 ನಾಯಕತ್ವವೂ ಇಲ್ಲ. ಈಗ ಅವರು ಭಾರತ ಏಕದಿನ ಮತ್ತು ಟೆಸ್ಟ್ ತಂಡದ ನಾಯಕ ಮಾತ್ರ. ಆದ್ರೂ ಟಿ20 ವರ್ಲ್ಡ್‌ಕಪ್  ಗೆದ್ದ ಮೇಲೆ ರೋಹಿತ್‌ಗೆ ಐಪಿಎಲ್‌ನಲ್ಲಿ ಬೇಡಿಕೆ ಹೆಚ್ಚಾಗಿದೆ. ರೋಹಿತ್ ಅವರನ್ನ ಮುಂಬೈ ಇಂಡಿಯನ್ಸ್, ರಿಟೈನ್ ಮಾಡಿಕೊಳ್ಳುತ್ತಾ..? ಅಥವಾ ರಿಲೀಸ್ ಮಾಡುತ್ತಾ..? ಅನ್ನೋದು ಇನ್ನೂ ಕನ್ಫರ್ಮ್ ಆಗಿಲ್ಲ. ಆದ್ರೂ ಬೇರೆ ಫ್ರಾಂಚೈಸಿಗಳು, ರೋಹಿತ್ ಶರ್ಮಾನನ್ನ ಖರೀದಿಸಲು ರೇಸ್‌ಗೆ ಬಿದ್ದಿವೆ.

ಐಸಿಸಿ ನೂತನ ಅಧ್ಯಕ್ಷ ಜಯ್ ಶಾ ಒಟ್ಟು ಸಂಪತ್ತು ಎಷ್ಟು? ಅಮಿತ್ ಶಾ ಪುತ್ರನ ಎಜುಕೇಷನ್ ಏನು?

ರೋಹಿತ್ ಶರ್ಮಾ ಟಾರ್ಗೆಟ್ ಇಂಟರ್ ನ್ಯಾಷನಲ್ ಕ್ರಿಕೆಟ್..!

ರೋಹಿತ್ ಶರ್ಮಾ ಮುಂದಿನ ಟಾರ್ಗೆಟ್, ಇಂಟರ್ ನ್ಯಾಷನಲ್ ಕ್ರಿಕೆಟ್. ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯೋ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಗೆಲ್ಲಿಸುವತ್ತ ತಮ್ಮ ಚಿತ್ತ ನೆಟ್ಟಿದ್ದಾರೆ. ಇದರ ಜೊತೆ ಮೂರ್ನಾಲ್ಕು ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ಗುರಿಯನ್ನೂ ಇಟ್ಟುಕೊಂಡಿದ್ದಾರೆ. ಅವರು ಆಡುವಷ್ಟು ಕಾಲ ಅವರೇ ಟೀಂ ಇಂಡಿಯಾ ಕ್ಯಾಪ್ಟನ್. ನಾಯಕನಾಗಿ ಇರ್ಬೇಕು ಅಂದ್ರೆ ಅವರಿಗೆ ಬೇರೆ ಯಾವ ಟೆನ್ಶನ್‌ ಇರಬಾರದು. ಅದಕ್ಕಾಗಿಯೇ ಅವರು ಐಪಿಎಲ್‌ ನಾಯಕ್ವವನ್ನ ಒಲ್ಲೆ ಅಂತಿರೋದು.

2027ರ ಒನ್ಡೇ ವರ್ಲ್ಡ್‌ಕಪ್ ವೇಳೆಗೆ ರೋಹಿತ್‌ಗೆ 40 ವರ್ಷವಾಗಿರುತ್ತೆ. ಅಲ್ಲಿಯವರೆಗೂ ಅವರು ಫಿಟ್ನೆಸ್ ಮತ್ತು ಫಾರ್ಮ್ ಕಾಯ್ದುಕೊಳ್ಳಬೇಕು. ಇದು ಸಾಧ್ಯವಾಗಬೇಕಾದ್ರೆ ಅವರಿಗೆ ಮತ್ಯಾವ ಟೆನ್ಶನ್ ಇರಬಾರದು.  ಐಪಿಎಲ್‌ ಮೂರೇ ತಿಂಗಳು ನಡೆದ್ರೂ ಕ್ಯಾಪ್ಟನ್ಸಿ ಅನ್ನೋದು ಮಹಾ ಟೆನ್ಶನ್. ಹಾಗಾಗಿ ಐಪಿಎಲ್ ನಾಯಕತ್ವ ಉಸಾಬರಿಯೇ ಬೇಡ ಅಂತ ದೂರ ಉಳಿಯಲಿ ನಿರ್ಧರಿಸಿದ್ದಾರೆ.

ಆಟಗಾರನಾಗಿ ಆಡಿದಾಗ ಅದ್ಭುತ ಪ್ರದರ್ಶನ

ಐಪಿಎಲ್‌ನಲ್ಲಿ ರೋಹಿತ್, ಕ್ಯಾಪ್ಟನ್ಸಿಯಲ್ಲಿ ಸಕ್ಸಸ್ ಆಗ್ತಾರೆ. ಆದ್ರೆ ಆಟಗಾರನಾಗಿ ಸಕ್ಸಸ್ ಕಂಡಿಲ್ಲ. ಹೌದು, ನಾಯಕನಾಗಿ ಆಡಿದಾಗ ಅವರ ಬ್ಯಾಟ್ನಿಂದ ಹೇಳಿಕೊಳ್ಳುವಂತ ರನ್ ಬಂದಿಲ್ಲ. ಕಳೆದ ಸಲ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ರೋಹಿತ್, 150ರ ಸ್ಟ್ರೈಕ್ರೇಟ್ನಲ್ಲಿ 417 ರನ್ ಹೊಡೆದಿದ್ದರು. 12 ವರ್ಷಗಳ ಮುಂಬೈ ಇಂಡಿಯನ್ಸ್ ಇತಿಹಾಸದಲ್ಲಿ ರೋಹಿತ್ ಒಂದು ಸೀಸನ್ನಲ್ಲಿ ಅತಿಹೆಚ್ಚು ರನ್ ಅಂದ್ರೆ ಇದೇ ಕಂಡ್ರಿ. 

ಈಗ ಅರ್ಥವಾಗಿರಬೇಕಲ್ವಾ..? ರೋಹಿತ್ ಯಾಕೆ ಐಪಿಎಲ್‌ನಲ್ಲಿ ಕ್ಯಾಪ್ಟನ್ಸಿ ಬೇಡ ಅಂತಿರೋದು ಅಂತ. ಆಟಗಾರನಾಗಿ ಆಡಿದ್ರೆ ಇನ್ನೊಂದಿಷ್ಟು ವರ್ಷ ಉತ್ತಮ ಪ್ರದರ್ಶನ ನೀಡಬಹುದು. ನಾಯಕನಾದ್ರೆ ತಂಡದ ಫೇಲ್ಯೂರ್ ಜೊತೆ ತಾವೂ ಫೇಲ್ಯೂರ್ ಆದ್ರೆ ಕೆರಿಯರ್ ಇದೇ ಐಪಿಎಲ್‌ಗೆ ಕ್ಲೋಸ್ ಆಗಿ ಬಿಡುತ್ತೆ. ರೋಹಿತ್ ಶರ್ಮಾ ಈ ನಿರ್ಧಾರ ಕೇಳಿ ಫ್ರಾಂಚೈಸಿಗಳಿಗೆ ನಿರಾಸೆಯಾಗಿದ್ರೂ ಆಶ್ಚರ್ಯವಿಲ್ಲ ಬಿಡಿ.

- ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್

Latest Videos
Follow Us:
Download App:
  • android
  • ios