ಐಪಿಎಲ್ ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿಯಿಂದ ಈ ಮೂವರಿಗೆ ಗೇಟ್‌ಪಾಸ್..? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಮುಂಬರುವ 2025ರ ಐಪಿಎಲ್ ಟೂರ್ನಿಗೂ ಮುನ್ನ ಆರ್‌ಸಿಬಿ ಫ್ರಾಂಚೈಸಿಯು ಈ ಮೂವರು ವಿದೇಶಿ ಆಟಗಾರರನ್ನು ತಂಡದಿಂದ ರಿಲೀಸ್ ಮಾಡಲು ನಿರ್ಧರಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Glenn Maxwell to Faf du Plessis RCB Likely to release 3 overseas player ahead of IPL Mega Auction kvn

ಬೆಂಗಳೂರು: ಮುಂದಿನ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 18ಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಈ ಮೂರು ಆಟಗಾರ ಔಟ್ ಆಗೋದು ಫಿಕ್ಸ್ ಅಗಿದೆ. 2025ರ ಐಪಿಎಲ್‌ಗೂ ಮುನ್ನ ಆರ್‌ಸಿಬಿ ಮತ್ತು ಈ ಆಟಗಾರರ ಸಂಬಂಧ ಅಂತ್ಯವಾಗಲಿದೆ. ಅಷ್ಟಕ್ಕೂ ಯಾರು ಆ ಆಟಗಾರರು..? ಆರ್‌ಸಿಬಿ ಫ್ರಾಂಚೈಸಿ ಈ ಆಟಗಾರನನ್ನ ಕೈ ಬಿಡಲು ಕಾರಣವೇನು ಅಂತಿರಾ..? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್.

ಇವರೇ ನೋಡಿ RCBಯಿಂದ ರಿಲೀಸ್ ಅಗೋ ಆಟಗಾರರು..! 

18ನೇ ಆವೃತ್ತಿಯ ಐಪಿಎಲ್‌ಗೂ ಮುನ್ನ ಡಿಸೆಂಬರ್‌ನಲ್ಲಿ ಮೆಗಾ ಆಕ್ಷನ್ ನಡೆಯಲಿದೆ. ಈಗಾಗ್ಲೇ ಎಲ್ಲಾ ಫ್ರಾಂಚೈಸಿಗಳು ಹರಾಜಿಗೆ ಸಿದ್ಧತೆ ನಡೆಸಿವೆ. ತಂಡದಿಂದ ಯಾರನ್ನು ರಿಲೀಸ್ ಮಾಡೋದು. ಯಾರನ್ನ ಉಳಿಸಿಕೊಳ್ಳೋದು ಅನ್ನೋ ಟೆನ್ಷ್ನಲ್ಲಿವೆ. ಈ ನಡುವೆ ಆರ್‌ಸಿಬಿ ತಂಡದಿಂದ ಈ ಮೂವರಿಗೆ ಗೇಟ್‌ಪಾಸ್ ಸಿಗೋದು ಪಕ್ಕಾ ಆಗಿದೆ.

ಐಸಿಸಿ ನೂತನ ಅಧ್ಯಕ್ಷ ಜಯ್ ಶಾ ಒಟ್ಟು ಸಂಪತ್ತು ಎಷ್ಟು? ಅಮಿತ್ ಶಾ ಪುತ್ರನ ಎಜುಕೇಷನ್ ಏನು?

ನಾಯಕ ಫಾಪ್ ಡು ಪ್ಲೆಸಿಸ್ ಆರ್‌ಸಿಬಿಗೆ ಗುಡ್‌ಬೈ ಹೇಳೋದು ಪಕ್ಕಾ..!  

ಆರ್‌ಸಿಬಿ ತಂಡದಿಂದ  ರಿಲೀಸ್ ಆಗಲಿರೋ ಮೊದಲ ಆಟಗಾರ ನಾಯಕ ಫಾಫ್ ಡುಪ್ಲೆಸಿ. 2022ರ ಐಪಿಎಲ್‌ಗು ಮುನ್ನ RCBಗೆ ಬಂದ ಡು ಪ್ಲೆಸಿಸ್, ಕಳೆದ ಮೂರು ಸೀಸನ್‌ಗಳಲ್ಲಿ ತಂಡವನ್ನು ಮುನ್ನಡೆಸಿದ್ರು. ಆರಂಭಿಕರಾಗಿ ಬ್ಯಾಟ್ ಬೀಸಿದ್ರು. ಆದ್ರೆ, ಸದ್ಯ ಡು ಪ್ಲೆಸಿಸ್‌ಗೆ 39 ವರ್ಷ ವಯಸ್ಸಾಗಿದೆ. ಇದ್ರಿಂದ ಡು ಪ್ಲೆಸಿಸ್‌ರನ್ನ ಡ್ರಾಪ್ ಮಾಡಿ, ಅವ್ರ ಸ್ಥಾನದಲ್ಲಿ ಯಂಗ್‌ಸ್ಟರ್‌ಗೆ ಚಾನ್ಸ್ ನೀಡಲು ಫ್ರಾಂಚೈಸಿ ಮುಂದಾಗಿದೆ. 

ಆಸ್ಟ್ರೇಲಿಯನ್ ಆಲ್ರೌಂಡರ್‌ಗಳಿಗೆ ಗೇಟ್‌ಪಾಸ್ ಫಿಕ್ಸ್..!

ಆರ್‌ಸಿಬಿ ತಂಡದಿಂದ ಗ್ಲೆನ್ ಮ್ಯಾಕ್ಸ್‌ವೆಲ್ ರಿಲೀಸ್ ಆಗೋದು ಫಿಕ್ಸ್.  ಈ ಬಾರಿಯ ಐಪಿಎಲ್‌ ಸಮರದಲ್ಲಿ ಮ್ಯಾಕ್ಸ್‌ವೆಲ್ ಕಳಪೆ ಆಟದ  ಮೂಲಕ  RCB ಪಾಲಿಗೆ ವಿಲನ್ ಆಗಿದ್ರು.  ಟೂರ್ನಿಯಲ್ಲಿ 10 ಪಂದ್ಯಗಳಲ್ಲಿ ಬ್ಯಾಟ್ ಬೀಸಿ, ಕೇವಲ 52 ರನ್‌ ಗಳಿಸಿದ್ರು.  2021ರ IPLಗು ಮುನ್ನ ನಡೆದ ಆಕ್ಷನ್ನಲ್ಲಿ ಆರ್‌ಸಿಬಿ  14.25 ಕೋಟಿ ನೀಡಿ ಖರೀದಿಸಿತ್ತು. ರೆಡ್ ಆರ್ಮಿ ಪರ ಮೊದಲ ಸೀಸನ್ನಲ್ಲಿ ಅಬ್ಬರಿಸಿದ್ದ ಮ್ಯಾಕ್ಸ್‌ವೆಲ್ , 513 ರನ್ ಕಲೆಹಾಕಿದ್ರು. ನಂತರದ ಎರಡು ಸೀಸನ್ಗಳಲ್ಲಿ 301 ಮತ್ತು 400 ರನ್‌ ಗಳಿಸಿ, ಪರ್ವಾಗಿಲ್ಲ ಎನ್ನಿಸಿದ್ರು. ಆದ್ರೆ, ಈ ಸಲ ಅಟ್ಟರ್ ಫ್ಲಾಪ್ ಶೋ ನೀಡಿದ್ರು. 

ಕೆ ಎಲ್ ರಾಹುಲ್‌ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಹತ್ವದ ಅಪ್‌ಡೇಟ್ ಕೊಟ್ಟ ಲಖನೌ ಮಾಲೀಕ ಗೋಯೆಂಕಾ..!

ಮ್ಯಾಕ್ಸ್‌ವೆಲ್‌ನ ಕೈ ಬಿಟ್ಟು ಅವ್ರ ಬದಲು ಇಂಗ್ಲೆಂಡ್ ಆಲ್ರೌಂಡರ್ ವಿಲ್ ಜ್ಯಾಕ್ಸ್ರನ್ನ ಉಳಿಸಿಕೊಳ್ಳೋದು RCB ಪ್ಲ್ಯಾನ್ ಆಗಿದೆ. ಈ ಸಲದ IPLನಲ್ಲಿ ಜ್ಯಾಕ್ಸ್ ಮಿಡಲ್ ಆರ್ಡರ್ನಲ್ಲಿ ಕಣಕ್ಕಿಳಿದು ಅದ್ಭುತ ಪ್ರದರ್ಶನ ನೀಡಿದ್ರು. ಅಲ್ಲದೇ, ಸ್ಪಿನ್ ಬೌಲಿಂಗ್ ಮೂಲಕವೂ ಮಿಂಚಿದ್ರು. 

ಕ್ಯಾಮರೂನ್ ಗ್ರೀನ್..! ಸದ್ಯ ಆರ್‌ಸಿಬಿ ತಂಡದ ಅತ್ಯಂತ ದುಬಾರಿ ಆಟಗಾರ. ಗ್ರೀನ್‌ಗೆ  ಆರ್‌ಸಿಬಿ ಫ್ರಾಂಚೈಸಿ 17.5 ಕೋಟಿ ಸಂಬಳ ನೀಡುತ್ತಿದೆ.  ಕಳೆದ ವರ್ಷ ನಡೆದ ಮಿನಿ ಆಕ್ಷನ್ಗೂ ಮುನ್ನ, ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಗ್ರೀನ್‌ರನ್ನು ಟ್ರೇಡಿಂಗ್ ಪದ್ದತಿಯಡಿ RCB ತಂಡಕ್ಕೆ ಸೇರಿಸಿಕೊಳ್ಳಲಾಯ್ತು. ಆದ್ರೆ, ಈವರೆಗೂ ಗ್ರೀನ್‌ರಿಂದ ತಂಡಕ್ಕೆ ಯಾವುದೇ ಉಪಯೋಗವಾಗ್ತಿಲ್ಲ. ಬದಲಾಗಿ  ಸ್ಲೋ ಬ್ಯಾಟಿಂಗ್ ಮತ್ತು ಧಮ್ ಇಲ್ಲದ ಬೌಲಿಂಗ್ನಿಂದ ತಂಡದ ಸೋಲಿಗೆ ಕಾರಣರಾಗ್ತಿದ್ದಾರೆ.  

ಒಟ್ಟಿನಲ್ಲಿ ಐಪಿಎಲ್‌ ಸೀಸನ್ 18ಕ್ಕೂ ಮುನ್ನ ಆರ್‌ಸಿಬಿ ತಂಡದಿಂದ ಈ ಮೂವರು ಔಟ್ ಆಗೋದು ಫಿಕ್ಸ್ ಅಗಿದೆ. ಇದರ ಜತೆಗೆ  RCB ಮತ್ತು ಈ ಆಟಗಾರರ ನಡುವಿನ ಸಂಬಂಧ ಅಂತ್ಯವಾಗಲಿದೆ. 

- ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್

Latest Videos
Follow Us:
Download App:
  • android
  • ios