ರೋಹಿತ್ ಶರ್ಮಾ ಅರ್ಧಶತಕ, ದಿನೇಶ್ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್‌ನಿಂದ ಟೀಂ ಇಂಡಿಯಾ 190 ರನ್ ಸಿಡಿಸಿದೆ.
ಟ್ರಿನಿಡ್ಯಾಡ್(ಜು.29): ನಾಯಕ ರೋಹಿತ್ ಶರ್ಮಾ ಸಿಡಿಸಿದ 64 ರನ್ ಹಾಗೂ ಅಂತಿಮ ಹಂತದಲ್ಲಿ ದಿನೇಶ್ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ಟೀಂ ಇಂಡಿಯಾದ ಬೃಹತ್ ಮೊತ್ತಕ್ಕೆ ಕಾರಣಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 190 ರನ್ ಸಿಡಿಸಿದೆ. ದಿಟ್ಟ ಬ್ಯಾಟಿಂಗ್ ಪ್ರದರ್ಶನದ ಮೂಲಕ ಭಾರತ ಇದೀಗ ಟಿ20 ಸರಣಿಯಲ್ಲೂ ಶುಭಾರಂಭ ಮಾಡುವ ಸೂಚನೆ ನೀಡಿದೆ. ಟಾಸ್ ಸೋತು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಿತು. ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಮೊದಲ ವಿಕೆಟ್‌ಗೆ 44 ರನ್ ಜೊತೆಯಾಟ ನೀಡಿತು. ಆದರೆ ಸೂರ್ಯಕುಮಾರ್ ಯಾದವ್ 24 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಡಕೌಟ್ ಆದರು. ಸತತ 2 ವಿಕೆಟ್ ಪತನ ಟೀಂ ಇಂಡಿಯಾ ಆತಂಕ ತಂದಿತ್ತು. ಆದರೆ ನಾಯಕ ರೋಹಿತ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ರಿಷಬ್ ಪಂತ್ ಕೇವಲ 14 ರನ್ ಸಿಡಿಸಿ ಔಟಾದರು. ಹಾರ್ದಿಕ್ ಪಾಂಡ್ಯ ಅಬ್ಬರಿಸಲು ವಿಫಲರಾದರು. ಕೇವಲ 1 ರನ್‌ಗೆ ಸುಸ್ತಾದರು. ರವೀಂದ್ರ ಜಡೇಜಾ 16 ರನ್ ಕಾಣಿಕೆ ನೀಡಿದರು. ಆದರೆ ದಿನೇಶ್ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ಟೀಂ ಇಂಡಿಯಾ ನೆರವಾಯಿತು. ಇತ್ತ ಆರ್ ಅಶ್ವಿನ್ ಕೂಡ ಸಾಥ್ ನೀಡಿದರು. ದಿನೇಶ್ ಕಾರ್ತಿಕ್ ಕೇವಲ 19 ಎಸೆತದಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ ಅಜೇಯ 41 ರನ್ ಸಿಡಿಸಿದು. ಇತ್ತ ಅಶ್ವಿನ್ ಅಜೇಯ 13 ರನ್ ಸಿಡಿಸಿದರು. ಇದರೊಂದಿಗೆ ಟೀಂ ಇಂಡಿಯಾ 6 ವಿಕೆಟ್ ಕಳೆದುಕೊಂಡು 190 ರನ್ ಸಿಡಿಸಿತು.
WI VS IND ಮೊದಲ ಟಿ20ಯಲ್ಲಿ ಭಾರತ ಶುಭಾರಂಭ, ವಿಂಡೀಸ್ ವಿರುದ್ಧ 68 ರನ್ ಗೆಲುವು
ಟಿ20 ತಂಡದಲ್ಲಿ ರಾಹುಲ್ ಬದಲಿಗೆ ಸ್ಯಾಮ್ಸನ್‌ಗೆ ಸ್ಥಾನ
ಕೋವಿಡ್‌ನಿಂದ ಇನ್ನೂ ಚೇತರಿಕೆ ಕಾಣದೆ ವೆಸ್ಟ್‌ಇಂಡೀಸ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಿಂದ ಹೊರಬಿದ್ದಿರುವ ಕೆ.ಎಲ್.ರಾಹುಲ್ ಬದಲಿಗೆ ಸಂಜು ಸ್ಯಾಮ್ಸನ್‌ಗೆ ತಂಡದಲ್ಲಿ ಸ್ಥಾನ ದೊರೆತಿದೆ. ಇತ್ತೀಚೆಗೆ ಮುಕ್ತಾಯಗೊಂಡ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಸ್ಯಾಮ್ಸನ್ ತಂಡದಲ್ಲಿದ್ದರು. 2ನೇ ಪಂದ್ಯದಲ್ಲಿ ಅರ್ಧಶತಕ ಸಹ ಬಾರಿಸಿದ್ದರು.
ರೋಹಿತ್ ಶರ್ಮಾ ಜೊತೆ ಸೂರ್ಯಕುಮಾರ್ ಯಾದವ್ ಇನ್ನಿಂಗ್‌್ಸ ಆರಂಭಿಸಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿತು. ಈ ವರ್ಷ ಭಾರತ 17 ಇನ್ನಿಂಗ್ಸ್‌ಗಳಲ್ಲಿ 7 ವಿಭಿನ್ನ ಆರಂಭಿಕ ಜೋಡಿಗಳನ್ನು ಬಳಕೆ ಮಾಡಿದೆ. ಇದು ಅಚ್ಚರಿ ಎನಿಸಿದರೂ ನಿಜ. ವರ್ಷದ ಆರಂಭದಲ್ಲಿ ವಿಂಡೀಸ್ ವಿರುದ್ಧ ತವರಿನಲ್ಲಿ ನಡೆದ ಸರಣಿಯಲ್ಲಿ ರೋಹಿತ್ ಜೊತೆ ಇಶಾನ್ ಕಿಶನ್ ಆರಂಭಿಕನಾಗಿ ಆಡಿದ್ದರು. ಅದೇ ಸರಣಿಯ 3ನೇ ಪಂದ್ಯದಲ್ಲಿ ಇಶಾನ್ ಜೊತೆ ಋುತುರಾಜ್ ಗಾಯಕ್ವಾಡ್ ಇನ್ನಿಂಗ್‌್ಸ ಆರಂಭಿಸಿದ್ದರು.
