ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿ ಗೆದ್ದಿರುವ ಟೀಂ ಇಂಡಿಯಾ ಇದೀಗ ಟಿ20 ಸರಣಿಯಲ್ಲಿ ಶುಭಾರಂಭ ಮಾಡಿದೆ. ಮೊದಲ ಟಿ20ಯಲ್ಲಿ ಟೀಂ ಇಂಡಿಯಾ ಅಲ್ರೌಂಡರ್ ಪ್ರದರ್ಶನಕ್ಕೆ ವೆಸ್ಟ್ ಇಂಡೀಸ್ ಸೋಲಿಗೆ ಶರಣಾಗಿದೆ.

ತರೌಬ(ಜು.29): ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟೀಂ ಇಂಡಿಯಾದ ಪ್ರಾಬಲ್ಯ ಮುಂದುವರಿದಿದೆ. ಏಕದಿನ ಸರಣಿಯನ್ನು 3-0 ಅಂತರದಲ್ಲಿ ವಶಪಡಿಸಿಕೊಂಡ ಭಾರತ ಇದೀಗ ಟಿ20 ಸರಣಿಯಲ್ಲಿ ಶುಭಾರಂಭ ಮಾಡಿದೆ. ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಅಲ್ರೌಂಡರ್ ಪ್ರದರ್ಶನ ನೀಡಿ ರನ್ ಗಲುವು ದಾಖಲಿಸಿದೆ. ವಿಂಡೀಸ್ ವಿರುದ್ಧ 190 ರನ್ ಸಿಡಿಸಿ ಅಬ್ಬರಿಸಿದ ಟೀಂ ಇಂಡಿಯಾ ಬೌಲಿಂಗ್‌ನಲ್ಲಿ ಮಿಂಚಿನ ಪ್ರದರ್ಶನ ನೀಡಿತ್ತು. ಈ ಮೂಲಕ ವೆಸ್ಟ್ ಇಂಡೀಸ್ ತಂಡವನ್ನು ರನ್‌ಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಯಿತು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ 5 ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ.

ವೆಸ್ಟ್ ಇಂಡೀಸ್(West Indies vs Team India) ಗೆಲುವಿಗೆ 191 ರನ್(1st T20) ಟಾರ್ಗೆಟ್ ನೀಡಲಾಗಿತ್ತು. ಆದರೆ ಟೀಂ ಇಂಡಿಯಾ ದಾಳಿಗೆ ವಿಂಡೀಸ್ ತತ್ತರಿಸಿತು. ರನ್ ಗಳಿಸಲು ಪರದಾಡಿತು. ಅರ್ಶದೀಪ್ ಸಿಂಗ್ ಆರಂಭದಲ್ಲೇ ವಿಕೆಟ್ ಕಬಳಿಸಿ ಟೀಂ ಇಂಡಿಯಾ ಉತ್ತಮ ಮುನ್ನಡೆ ತಂದುಕೊಟ್ಟರು. ಕೈಲ್ ಮೇಯರ್ಸ್ ಕೇವಲ 15 ರನ್ ಸಿಡಿಸಿ ಔಟಾದರು. ಜೇಸನ್ ಹೋಲ್ಡರ್ ರನ್ ಖಾತೆ ತೆರಯಲು ರವೀಂದ್ರ ಜಡೇಜಾ ಅವಕಾಶ ನೀಡಲಿಲ್ಲ. ಹೋಲ್ಡರ್ ಡಕೌಟ್ ಆದರು. ಶಮರಹ್ ಬ್ರೂಕ್ಸ್ 20 ರನ್ ಸಿಡಿಸಿ ಔಟಾದರು. ನಾಯಕ ನಿಕೋಲಸ್ ಪೂರನ್ 18 ರನ್ ಸಿಡಿಸಿ ಆರ್ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು. 

Commonwealth Games: ಭಾರತ ಮಹಿಳಾ ತಂಡಕ್ಕೆ ಸೋಲು

ರೋವ್ಮನ್ ಪೊವೆಲ್ 14 ರನ್ ಕಾಣಿಕೆ ನೀಡಿದರು. ಶಿಮ್ರೊನ್ ಹೆಟ್ಮೆಯರ್ 14 ರನ್ ಸಿಡಿಸಿ ಔಟಾದರು. ಅಕೀಲ್ ಹುಸೈನ್ 11 ರನ್ ಸಿಡಿಸಿ ನಿರ್ಗಮಿಸಿದರು. ಒಡೆನ್ ಸ್ಮಿತ್ ಡಕೌಟ್ ಆದರು. ಅಂತಿಮ ಹಂತದಲ್ಲಿ ಕೀಮೋ ಪೌಲ್ ಹೋರಾಟ ನೀಡಿದರು. ಪೌಲ್ ಅಜೇಯ 19 ರನ್ ಸಿಡಿಸಿದರು. ಇದರೊಂದಿಗೆ ವೆಸ್ಟ್ ಇಂಡೀಸ್ 8 ವಿಕೆಟ್ ನಷ್ಟಕ್ಕೆ 122 ರನ್ ಸಿಡಿಸಿ ಸೋಲಿಗೆ ಶರಣಾಯಿತು.

ಭಾರತದ ಪರ ಆರ್ ಅಶ್ವಿನ್, ಅರ್ಶದೀಪ್ ಸಿಂಗ್ ಹಾಗೂ ರವಿ ಬಿಶ್ನೋಯ್ ತಲಾ ಎರಡೆರಡು ವಿಕೆಟ್ ಕಬಳಿಸಿದರು. ಇನ್ನು ಭುವನೇಶ್ವರ್ ಕುಮಾರ್ ಹಾಗೂ ರವೀಂದ್ರ ಜಡೇಜಾ ತಲಾ 1 ವಿಕೆಟ್ ಕಬಳಿಸಿದರು. 

Ind vs WI: ಕೆ ಎಲ್ ರಾಹುಲ್ ಔಟ್, ಟೀಂ ಇಂಡಿಯಾಗೆ ಬಲಿಷ್ಠ ಆಟಗಾರ ಸೇರ್ಪಡೆ..!

ಭಾರತದ ಇನ್ನಿಂಗ್ಸ್
ಟೀಂ ಇಂಡಿಯಾ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿತ್ತು ನಾಯಕ ರೋಹಿತ್ ಶರ್ಮಾ 64 ರನ್ ಕಾಣಿಕೆ ನೀಡಿದ್ದರು. ಸೂರ್ಯಕುಮಾರ್ ಯಾದವ್ 24 ರನ್ ಸಿಡಿಸಿದರು. ಶ್ರೇಯಸ್ ಅಯ್ಯರ್, ರಿಷಬ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ಅಬ್ಬರಿಸಲು ವಿಫಲರಾದರು. ರವೀಂದ್ರ ಜಡೇಜಾ 16 ರನ್ ಕಾಣಿಕೆ ನೀಡಿದರು. ಆದರೆ ದಿನೇಶ್ ಕಾರ್ತಿಕ್ ಸ್ಪೋಟಕ ಬ್ಯಾಟಿಂಗ್‌ನಿಂದ ಟೀಂ ಇಂಡಿಯಾ ಬೃಹತ್ ಮೊತ್ತ ದಾಖಲಿಸಿತು. ಕಾರ್ತಿಕ್ 19 ಎಸೆತದಲ್ಲಿ ಅಜೇಯ 41 ರನ್ ಸಿಡಿಸಿದರು. ಆರ್ ಅಶ್ವಿನ್ ಅಜೇಯ 13 ರನ್ ಸಿಡಿಸಿದರು. ಈ ಮೂಲಕ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 190 ರನ್ ಸಿಡಿಸಿತು