WI vs IND ಮೊದಲ ಏಕದಿನ ಹೋರಾಟ, ವಿಂಡೀಸ್ ವಿರುದ್ದ ಟಾಸ್ ಗೆದ್ದ ಭಾರತ!
ಟೆಸ್ಟ್ ಸರಣಿಯನ್ನು 1-0 ಅತರದಿಂದ ಗೆದ್ದ ಭಾರತ ಇದೀಗ ಏಕದಿನ ಸರಣಿ ಕೈವಶಕ್ಕೆ ಸಜ್ಜಾಗಿದೆ. ಬಾರ್ಬಡೋಸ್‌ನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಬಾರ್ಬಡೋಸ್(ಜು.27) ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿ ಆರಂಭಗೊಂಡಿದೆ. ಟೆಸ್ಟ್ ಸರಣಿಯನ್ನು 1-0 ಅಂತರದಲ್ಲಿ ಗೆದ್ದ ಭಾರತ ಇದೀಗ ಏಕದಿನ ಸರಣಿ ಗೆಲುವಿನತ್ತ ಚಿತ್ತ ಹರಿಸಿದೆ. ಬಾರ್ಬಡೋಸ್‌ನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಟೀಂ ಇಂಡಿಯಾಗೆ ಮುಕೇಶ್ ಕುಮಾರ್ ಪದಾರ್ಪಣೆ ಮಾಡಿದ್ದಾರೆ. ಪೋರ್ಟ್ ಆಪ್ ಸ್ಪೇನ್‌ನಲ್ಲಿ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ ಮುಕೇಶ್ ಕುಮಾರ್ ಇದೀಗ ಏಕದಿನಕ್ಕೂ ಡೆಬ್ಯೂ ಮಾಡಿದ್ದಾರೆ. ಈ ಮೂಲಕ ವಿಂಡೀಸ್ ಸರಣಿಯಲ್ಲಿ ಮುಕೇಶ್ ಎರಡು ಮಾದರಿಯಲ್ಲಿ ಟೀಂ ಇಂಡಿಯಾ ಪ್ರತಿನಿಧಿಸಿದ್ದಾರೆ.
ಟೀಂ ಇಂಡಿಯಾ ಪ್ಲೇಯಿಂಗ್ 11
ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಶಾರ್ದೂಲ್ ಛಾಕೂರ್, ಕುಲ್ದೀಪ್ ಯಾದವ್, ಉಮ್ರಾನ್ ಮಲಿಕ್, ಮುಕೇಶ್ ಕುಮಾರ್
ಈ ವರ್ಷ ವಿರಾಟ್ ಕೊಹ್ಲಿ ಸ್ಟ್ರಾಂಗ್ ಕಮ್ಬ್ಯಾಕ್..! ವಿಶ್ವಕಪ್‌ಗೂ ಮುನ್ನ ಗುಡ್‌ನ್ಯೂಸ್
ವೆಸ್ಟ್ ಇಂಡೀಸ್ ಪ್ಲೇಯಿಂಗ್ 11
ಶೈ ಹೋಪ್(ನಾಯಕ), ಕೈಲ್ ಮೇಯರ್ಸ್, ಬ್ರಾಂಡನ್ ಕಿಂಗ್, ಆಲಿಕ್ ಅಂಥೆನ್ಜ್, ಶಿಮ್ರೊನ್ ಹೆಟ್ಮೆಯರ್, ರೊವ್ಮನ್ ಪೊವೆಲ್, ರೊಮಾರಿಯಾ ಶೆಫರ್ಡ್, ಯಾನಿಕ್ ಕ್ಯಾರಿ, ಡೋಮಿನಿಕ್ ಡ್ರೇಕ್ಸ್, ಜಯ್ಡೇನ್ ಸೀಲ್ಸ್, ಗುದಾಕೇಶ್ ಮೊಟಿ
ಭಾರತ ಹಾಗೂ ವೆಸ್ಟ್ ಇಂಡೀಸ್ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಜುಲೈ 29 ರಂದು ಎರಡನೇ ದ್ವಿತೀಯ ಪಂದ್ಯ ನಡೆಯಲಿದೆ. ಮೊದಲೆರಡು ಪಂದ್ಯ ಬಾರ್ಬಡೋಸ್‌ನಲ್ಲಿ ನಡೆಯಲಿದೆ. ಮೂರನೇ ಪಂದ್ಯ ಆಗಸ್ಟ್ 1 ರಂದು ಟ್ರಿನಿಡ್ಯಾಡ್‌ನಲ್ಲಿ ಆಯೋಜಿಸಲಾಗಿದೆ. ಇದಾದ ಬಳಿಕ 5 ಪಂದ್ಯದ ಟಿ20 ಸರಣಿ ನಡೆಯಲಿದೆ.
ಟೆಸ್ಟ್ ಸರಣಿಯನ್ನು ವೈಟ್ ವಾಶ್ ಗುರಿಯೊಂದಿಗೆ ಮುನ್ನುಗ್ಗಿದ್ದ ಭಾರತ ತಂಡಕ್ಕೆ ಮಳೆ ಅಡ್ಡಿಯಾಯಿತು. ಎರಡನೇ ಹಾಗೂ ಕೊನೆಯ ಟೆಸ್ಟ್ ಪಂದ್ಯ ಮಳೆಯಿಂದ ರದ್ದಾಗಿತ್ತು. ಹೀಗಾಗಿ ಭಾರತ ಸರಣಿಯನ್ನು 1-0 ಯಿಂದ ಗೆದ್ದುಕೊಂಡಿತು. ಗೆಲ್ಲಲು 365 ರನ್ ಗುರಿ ಪಡೆದ ವಿಂಡೀಸ್, 4ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 76 ರನ್ ಗಳಿಸಿತ್ತು. ಕೊನೆಯ ದಿನ ವಿಂಡೀಸ್ ಇನ್ನೂ 289 ರನ್ ಗಳಿಸಬೇಕಿತ್ತು. ಭಾರತಕ್ಕೆ ಗೆಲ್ಲಲು 8 ವಿಕೆಟ್ ಅಗತ್ಯವಿತ್ತು. ಭಾರತ 4ನೇ ದಿನವಾದ ಭಾನುವಾರ 2ನೇ ಇನ್ನಿಂಗ್‌್ಸನಲ್ಲಿ ಸ್ಫೋಟಕ ಆಟವಾಡಿ ಗೆಲುವಿನ ನಿರೀಕ್ಷೆಯ ಲ್ಲಿತ್ತು. ಮಳೆ ಗಮನದಲ್ಲಿಟ್ಟೇ ಭಾರತ 7.5ರ ಸರಾಸರಿಯಲ್ಲಿ ರನ್ ಗಳಿಸಿತ್ತು.
Ind vs WI: ಕ್ರಿಕೆಟ್ ಲೆಜೆಂಡ್ಸ್ ಸಚಿನ್, ಗಂಗೂಲಿ, ಧೋನಿ ದಾಖಲೆ ಮುರಿಯಲು ರೆಡಿಯಾದ ರೋಹಿತ್ ಶರ್ಮಾ..
ಕೇವಲ 24 ಓವರಲ್ಲಿ 2 ವಿಕೆಟ್ ನಷ್ಟಕ್ಕೆ 181 ರನ್ ಕಲೆಹಾಕಿ ಭಾರತ ಇನ್ನಿಂಗ್‌್ಸ ಡಿಕ್ಲೇರ್ ಮಾಡಿಕೊಂಡಿತು. ಇಶಾನ್ ಕಿಶನ್ ಚೊಚ್ಚಲ ಟೆಸ್ಟ್ ಅರ್ಧಶತಕ ಬಾರಿಸಿದರು. 34 ಎಸೆತದಲ್ಲಿ 4 ಬೌಂಡರಿ, 2 ಸಿಕ್ಸರ್‌ನೊಂದಿಗೆ 52 ರನ್ ಗಳಿಸಿದರು. 2ನೇ ಇನ್ನಿಂಗ್ಸ್ ಆರಂಭಿಸಿದ ವಿಂಡೀಸ್ 44 ರನ್‌ಗೆ 2 ವಿಕೆಟ್ ಕಳೆದುಕೊಂಡಿತು. ಬ್ರಾಥ್‌ವೇಟ್(28) ಹಾಗೂ ಮೆಕೆನ್ಜಿ(0) ಇಬ್ಬರನ್ನೂ ಅಶ್ವಿನ್ ಪೆವಿಲಿಯನ್‌ಗಟ್ಟಿದರು.