ಈ ವರ್ಷ ವಿರಾಟ್ ಕೊಹ್ಲಿ ಸ್ಟ್ರಾಂಗ್ ಕಮ್ಬ್ಯಾಕ್..! ವಿಶ್ವಕಪ್‌ಗೂ ಮುನ್ನ ಗುಡ್‌ನ್ಯೂಸ್
2023ರಲ್ಲಿ ಭರ್ಜರಿ ಫಾರ್ಮ್‌ಗೆ ಮರಳಿರುವ ವಿರಾಟ್ ಕೊಹ್ಲಿ
ಏಷ್ಯಾಕಪ್, ವಿಶ್ವಕಪ್‌ಗೂ ಮುನ್ನ ಅಭಿಮಾನಿಗಳಿಗೆ ಗುಡ್‌ನ್ಯೂಸ್
ಮತ್ತೊಮ್ಮೆ ವಿರಾಟ್ ಕೊಹ್ಲಿ ಯುಗಾರಂಭ
ಬೆಂಗಳೂರು(ಜು.27): ಯೆಸ್, ವಿರಾಟ್ ಕೊಹ್ಲಿ ಇನ್ಕಮ್ ಕಮ್ಮಿಯಾಗಿದೆ. ಕಮ್ಮಿ ಏನು ಆಗಿಲ್ಲ. ಕೊಹ್ಲಿಗಿಂತ ಜಪಾನ್ನ ನವೋಮಿ ಒಸಾಕಾ ಇನ್ಕಮ್ ಜಾಸ್ತಿಯಾಗಿದೆ. ಹೀಗಾಗಿ ವಿರಾಟ್ 2ನೇ ಸ್ಥಾನಕ್ಕೆ ಜಾರಿದ್ದಾರೆ. ಆದ್ರೆ ಸಂಭಾವನೆ ವಿಷ್ಯದಲ್ಲಿ ಮಾತ್ರ ಕಿಂಗ್ ಕೊಹ್ಲಿ ಕೆಳಗಿಳಿದಿದ್ದಾರೆ. ಆಟದ ವಿಷ್ಯದಲ್ಲಿ ಈಗಲೂ ವಿರಾಟ್ ನಂಬರ್ 1 ಪ್ಲೇಯರ್. ಈ ವರ್ಷ ಅವರನ್ನ ಕಂಟ್ರೋಲ್ ಮಾಡೋಕೆ ಎದುರಾಳಿಗಳಿಂದ ಸಾಧ್ಯವಾಗಿಲ್ಲ. ವಿರಾಟ್ ಕೊಹ್ಲಿಯ ಯುಗ ಮತ್ತೊಮ್ಮೆ ಆರಂಭವಾಗಿದೆ.
ಒನ್ಡೇ ವರ್ಲ್ಡ್ಕಪ್ ದೃಷ್ಟಿಯಿಂದ ಕೊಹ್ಲಿಯನ್ನ ಟಿ20 ಟೀಮ್ಗೆ ಸೆಲೆಕ್ಟ್ ಮಾಡ್ತಿಲ್ಲ. ಟಿ20 ಟೀಮ್ನಿಂದ ಬಿಟ್ರೆ ಏನಂತೆ. ಟೆಸ್ಟ್ ಮತ್ತು ಒನ್ಡೇಯಲ್ಲಿ ರನ್ ಹೊಳೆಯನ್ನೇ ಹರಿಸ್ತಿದ್ದಾರೆ. ಅವರ ಆಟಕ್ಕೆ ಕ್ರಿಕೆಟ್ ಫ್ಯಾನ್ಸ್ ಫಿದಾ ಆಗಿದ್ದಾರೆ. ದೂರದ ವೆಸ್ಟ್ ಇಂಡೀಸ್ನಲ್ಲೂ ಕಿಂಗ್ ಕೊಹ್ಲಿಗೆ ಬಿಗ್ ಫ್ಯಾನ್ಸ್ ಇದ್ದಾರೆ. 76ನೇ ಸೆಂಚುರಿ ಹೊಡೆದ್ಮೇಲೆ ಅವರೆಲ್ಲಾ ಕೊಹ್ಲಿಯನ್ನ ಕೊಂಡಾಡಿದ್ದಾರೆ.
2023ರಲ್ಲಿ ಕೊಹ್ಲಿ ಗರಿಷ್ಠ ರನ್ ಸರದಾರ.!
ಬರೋಬ್ಬರಿ ಎರಡೂವರೆ ವರ್ಷ ಶತಕದ ಬರ ಎದುರಿಸಿದ್ದ ವಿರಾಟ್ ಕೊಹ್ಲಿ 2022ರಲ್ಲಿ ಏಷ್ಯಾಕಪ್ನಲ್ಲಿ ಅಫ್ಘನ್ ವಿರುದ್ಧ ಸೆಂಚುರಿ ಸಿಡಿಸೋ ಮೂಲಕ ಶತಕದ ಬರ ನೀಗಿಸಿಕೊಂಡರು. ವೆಸ್ಟ್ ಇಂಡೀಸ್ನಲ್ಲಿ ಶತಕ ಸಿಡಿಸೋ ಮೂಲಕ 2018ರ ಬಳಿಕ ವಿದೇಶದಲ್ಲಿ ಟೆಸ್ಟ್ ಶತಕದ ಬರದಿಂದ ಹೊರಬಂದರು. ಈಗ ಈ ವರ್ಷ ಗರಿಷ್ಠ ರನ್ ಸರದಾರ ಎನಿಸಿಕೊಂಡಿದ್ದಾರೆ.
Ind vs WI ವಿಂಡೀಸ್ ಎದುರಿನ ಏಕದಿನ ಸರಣಿಯಿಂದ ಟೀಂ ಇಂಡಿಯಾ ಪ್ರಮುಖ ವೇಗಿ ಔಟ್..!
ಈ ವರ್ಷ ಕೊಹ್ಲಿ ಆಡಿರುವುದು ಎರಡು ಮಾದರಿಯಿಂದ 19 ಇನ್ನಿಂಗ್ಸ್ ಆಡಿ 54.66ರ ಸರಾಸರಿಯಲ್ಲಿ 984 ರನ್ ಹೊಡೆದಿದ್ದಾರೆ. ಎರಡು ಟೆಸ್ಟ್ ಶತಕ, ಎರಡು ಒನ್ಡೇ ಶತಕ ಸೇರಿ 4 ಸೆಂಚುರಿ ಬಾರಿಸಿದ್ದಾರೆ. ಎರಡು ಅರ್ಧಶತಕಗಳೂ ಅವರ ಖಾತೆಯಲ್ಲಿವೆ. ಅಲ್ಲಿಗೆ ವಿರಾಟ್ ಕೊಹ್ಲಿ ತಮ್ಮ ಹಳೆಯ ಖದರ್ಗೆ ಮರಳಿದ್ದಾರೆ.
ಈ ವರ್ಷ ರನ್ ಶಿಖರವೇರಲಿದ್ದಾರೆ ಕೊಹ್ಲಿ
2023ಲ್ಲಿ ಕೊಹ್ಲಿ ಇದುವರೆಗೂ ಆಡಿರುವುದು ಕೇವಲ 19 ಇನ್ನಿಂಗ್ಸ್ ಮಾತ್ರ. ಈ ವರ್ಷ ಅವರು ಇನ್ನೂ ಕನಿಷ್ಟ 25 ಇನ್ನಿಂಗ್ಸ್ಗಳನ್ನಾಡಲಿದ್ದಾರೆ. ಅದ್ಭುತ ಲಯದಲ್ಲಿರುವ ವಿರಾಟ್, ಈ ವರ್ಷ ರನ್ ಶಿಖರವೇರೋದು ಗ್ಯಾರಂಟಿ. ಏಷ್ಯಾಕಪ್ ಮತ್ತು ಒನ್ಡೇ ವರ್ಲ್ಡ್ಕಪ್ ಟೂರ್ನಿಗಳು ಬೇರೆ ನಡೆಯುತ್ತವೆ. ಈ ಎರಡು ಟೂರ್ನಿಯಲ್ಲಿ ಈ ಹಿಂದೆ ವಿರಾಟ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಒಟ್ನಲ್ಲಿ ಕ್ರಿಕೆಟ್ನಲ್ಲಿ ಈ ವರ್ಷ ಕಿಂಗ್ ಕೊಹ್ಲಿ ವರ್ಷ ಆಗಲಿದೆ.