ಗೋ ಗ್ರೀನ್ ಅಭಿಯಾನಕ್ಕೆ ಕೈಜೋಡಿಸಿದ ಬಿಸಿಸಿಐಪ್ರತಿ ಡಾಟ್‌ ಬಾಲ್‌ಗೆ 500 ಗಿಡ ನೆಡಲು ಬಿಸಿಸಿಐ ಚಿಂತನೆಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ 84 ಡಾಟ್ ಬಾಲ್

ಮುಂಬೈ(ಮೇ.24): ಹಸಿರು ಸಂರಕ್ಷಣೆಗೆ ಒತ್ತು ನೀಡುವ ಉದ್ದೇಶದಿಂದ ಬಿಸಿಸಿಐ ಹೊಸ ಯೋಜನೆಗೆ ಕೈಹಾಕಿದೆ. ಐಪಿಎಲ್‌ ಪ್ಲೇ-ಆಫ್‌ ಪಂದ್ಯಗಳಲ್ಲಿ ದಾಖಲಾಗುವ ಪ್ರತಿ ಡಾಟ್‌ ಬಾಲ್‌ಗೆ 500 ಗಿಡಗಳನ್ನು ನೆಡಲು ಬಿಸಿಸಿಐ ಯೋಜಿಸಿದೆ. ಇದೇ ಕಾರಣಕ್ಕೆ ಪ್ರತಿ ಬಾರಿ ಬೌಲರ್‌ ಡಾಟ್‌ ಬಾಲ್‌ ಎಸೆದಾಗ ಟೀವಿ ಸ್ಕೋರ್‌ ಪಟ್ಟಿಯಲ್ಲಿ ಮರದ ಚಿತ್ರವನ್ನು ತೋರಿಸಲಾಗುತ್ತಿದೆ. ಜೊತೆಗೆ ಎಷ್ಟುಡಾಟ್‌ ಬಾಲ್‌ಗಳು ದಾಖಲಾಗಿವೆ ಎನ್ನುವ ಅಂಕಿ-ಅಂಶಗಳನ್ನೂ ಪ್ರದರ್ಶಿಸಲಾಗುತ್ತಿದೆ. 

ಗಿಡಗಳನ್ನು ಯಾವ ನಗರ, ಪ್ರದೇಶದಲ್ಲಿ ನೆಡಲಾಗುತ್ತದೆ ಎನ್ನುವ ಮಾಹಿತಿಯನ್ನು ಬಿಸಿಸಿಐ ಇನ್ನಷ್ಟೇ ಪ್ರಕಟಿಸಬೇಕಿದೆ. ಬಿಸಿಸಿಐನ ಈ ಯೋಜನೆಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

ಬಿಸಿಸಿಐ ಆರಂಭಿಸಿರುವ 'ಗೋ ಗ್ರೀನ್' ಅಭಿಯಾನಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಒಟ್ಟು ಎರಡು ಇನಿಂಗ್ಸ್‌ಗಳಿಂದ 84 ಡಾಟ್ ಬಾಲ್‌ಗಳನ್ನು ಹಾಕಲಾಗಿದ್ದು, ಒಟ್ಟಾರೆ 42,000 ಗಿಡಗಳನ್ನು ಬಿಸಿಸಿಐ ನಡಲಿದೆ. ಇನ್ನು ಎಲಿಮಿನೇಟರ್, ಎರಡನೇ ಕ್ವಾಲಿಫೈಯರ್ ಹಾಗೂ ಫೈನಲ್‌ನಲ್ಲಿ ಎಷ್ಟು ದಾಟ್‌ ಬಾಲ್‌ಗಳನ್ನು ಬೌಲರ್‌ಗಳು ಹಾಕಬಹುದು ಎನ್ನುವ ಕುತೂಹಲ ಜೋರಾಗಿದೆ.

10ನೇ ಐಪಿಎಲ್‌ ಫೈನಲ್‌ಗೆ ಸಿಎಸ್‌ಕೆ ಲಗ್ಗೆ!

ಚೆನ್ನೈ: ನಾಯಕ ಎಂ.ಎಸ್‌.ಧೋನಿ ಚೆನ್ನೈ ಸೂಪರ್‌ ಕಿಂಗ್‌್ಸ ತಂಡವನ್ನು ಮತ್ತೊಮ್ಮೆ ಐಪಿಎಲ್‌ ಫೈನಲ್‌ಗೇರಿಸಿದ್ದಾರೆ. ಹಾಲಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ವಿರುದ್ಧ ಪ್ಲೇ-ಅಫ್‌ನ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ 15 ರನ್‌ ಗೆಲುವು ಸಾಧಿಸಿದ ಚೆನ್ನೈ 14 ಆವೃತ್ತಿಗಳಲ್ಲಿ 10ನೇ ಬಾರಿಗೆ ಫೈನಲ್‌ ಪ್ರವೇಶಿಸಿ ಈ ಮೈಲಿಗಲ್ಲು ತಲುಪಿದ ಮೊದಲ ತಂಡ ಎನ್ನುವ ದಾಖಲೆ ಬರೆಯಿತು.

12ನೇ ಬಾರಿಗೆ ಪ್ಲೇ-ಆಫ್‌ನಲ್ಲಿ ಆಡಿದ ಚೆನ್ನೈ 5ನೇ ಬಾರಿಗೆ ಚಾಂಪಿಯನ್‌ ಪಟ್ಟಅಲಂಕರಿಸಲು ಕಾತರಿಸುತ್ತಿದೆ. ಗುಜರಾತ್‌ ಈ ಪಂದ್ಯದಲ್ಲಿ ಸೋತಿದ್ದರೂ ಫೈನಲ್‌ಗೇರಲು ಮತ್ತೊಂದು ಅವಕಾಶವಿದೆ. ಎಲಿಮಿನೇಟರ್‌ ಪಂದ್ಯದಲ್ಲಿ ಗೆಲ್ಲುವ ತಂಡದ ವಿರುದ್ಧ ಮೇ 26ರಂದು ಶುಕ್ರವಾರ 2ನೇ ಕ್ವಾಲಿಫೈಯರ್‌ನಲ್ಲಿ ಸೆಣಸಲಿದೆ.

ಇಂದು ಮುಂಬೈ vs ಲಖನೌ ಎಲಿಮಿನೇಟರ್‌

ಮಂಗಳವಾರ ಇಲ್ಲಿನ ಚೆಪಾಕ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಚೆನ್ನೈ 20 ಓವರಲ್ಲಿ 7 ವಿಕೆಟ್‌ ನಷ್ಟಕ್ಕೆ 172 ರನ್‌ ಕಲೆಹಾಕಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಗುಜರಾತ್‌ 20 ಓವರಲ್ಲಿ 157 ರನ್‌ ಗಳಿಸಿ ಆಲೌಟ್‌ ಆಯಿತು. ಗುಜರಾತ್‌ಗೆ ನಿರೀಕ್ಷಿತ ಆರಂಭ ದೊರೆಯಲಿಲ್ಲ. ಚೆನ್ನೈನ ಬೌಲಿಂಗ್‌ ದಾಳಿಯ ಎದುರು ಶುಭ್‌ಮನ್‌ ಗಿಲ್‌(38 ಎಸೆತದಲ್ಲಿ 42 ರನ್‌) ಸಹ ರನ್‌ ಕಲೆಹಾಕಲು ಕಷ್ಟಪಟ್ಟರು. 15ನೇ ಓವರಲ್ಲಿ 98 ರನ್‌ಗೆ 6 ವಿಕೆಟ್‌ ಕಳೆದುಕೊಂಡ ತಂಡ ಸೋಲಿನತ್ತ ಮುಖ ಮಾಡಿತು. ವಿಜಯ್‌ ಶಂಕರ್‌ ಹಾಗೂ ರಶೀದ್‌ ಖಾನ್‌ ಹೆಚ್ಚು ಅಪಾಯ ತಂದೊಡ್ಡದಂತೆ ಚೆನ್ನೈ ಬೌಲರ್‌ಗಳು ಎಚ್ಚರಿಕೆ ವಹಿಸಿದರು. ಕ್ಷೇತ್ರರಕ್ಷಕರ ಬದಲಾವಣೆ, ಬೌಲರ್‌ಗಳ ನಿರ್ವಹಣೆಯಲ್ಲಿ ಧೋನಿ ತೋರಿದ ಚಾಣಾಕ್ಷತನ, ಗುಜರಾತ್‌ಗೆ ಗುರಿ ಇನ್ನಷ್ಟುದೊಡ್ಡದಾಗಿ ಕಾಣುವಂತೆ ಮಾಡಿತು.

ಋುತುರಾಜ್‌ ಫಿಫ್ಟಿ: 2 ರನ್‌ ಗಳಿಸಿದ್ದಾಗ ಗಿಲ್‌ಗೆ ಕ್ಯಾಚಿತ್ತು ಔಟಾಗಿದ್ದ ಋುತುರಾಜ್‌ ಗಾಯಕ್ವಾಡ್‌, ಬೌಲರ್‌ ದರ್ಶನ್‌ ನಲ್ಕಂಡೆ ನೋಬಾಲ್‌ ಮಾಡಿದ್ದರಿಂದ ಜೀವದಾನ ಪಡೆದರು. ಇದರ ಲಾಭವೆತ್ತಿದ ಋುತುರಾಜ್‌ 44 ಎಸೆತಗಳಲ್ಲಿ 60 ರನ್‌ ಗಳಿಸಿ ತಂಡಕ್ಕೆ ನೆರವಾದರು. ಮೊದಲ ವಿಕೆಟ್‌ಗೆ ಕಾನ್ವೇ(40) ಜೊತೆ 87 ರನ್‌ ಸೇರಿಸಿದ ಋುತುರಾಜ್‌ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ಕಾರಣರಾದರು. ರಹಾನೆ, ರಾಯುಡು ತಲಾ 17, ಜಡೇಜಾ 22 ರನ್‌ ಕೊಡುಗೆ ನೀಡಿದರು.