Asianet Suvarna News Asianet Suvarna News

ಅಂಡರ್- 19 ವಿಶ್ವಕಪ್ ಸೆಮಿಫೈನಲ್ ಹೀರೋ: ಸಚಿನ್ ದಾಸ್ ಫಿಯರ್ಲೆಸ್ ಆಟಕ್ಕೆ ಫ್ಯಾನ್ಸ್ ಸಲಾಂ..!

ಅಂಡರ್-19 ಏಕದಿನ ವಿಶ್ವಕಪ್ ಸಮರದಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡ್ತಿದೆ. ಸೋಲಿಲ್ಲದ ಸರದಾರನಂತೆ, ಫೈನಲ್ಗೆ ಎಂಟ್ರಿ ಕೊಟ್ಟಿದೆ. ಕಪ್ ಎತ್ತಿಹಿಡಿಯೋಕೆ ಒಂದೇ ಒಂದು ಹೆಜ್ಜೆ ದೂರದಲ್ಲಿದೆ. ಆದ್ರೆ, ಸಚಿನ್ ದಾಸ್ ಅನ್ನೋ ಹುಡುಗ ಅಬ್ಬರಿಸದೇ ಇದ್ರೆ, ಸೆಮಿಫೈನಲ್ನಲ್ಲೇ ಭಾರತೀಯ ಪಡೆ ಮಕಾಡೆ ಮಲಗ್ತಾ ಇತ್ತು. ಇಷ್ಟೊತ್ತಿಗೆ ಭಾರತದ ಫ್ಲೈಟ್ ಹತ್ತಬೇಕಿತ್ತು. 

Who is Sachin Dhas Everything you need to know about India Under 19 World Cup star kvn
Author
First Published Feb 8, 2024, 5:53 PM IST

ಬೆಂಗಳೂರು(ಫೆ.08): ಯಾವುದೇ ತಂದೆಗೆ ತನ್ನಿಂದಾಗದ್ದನ್ನ ಮಗ ಈಡೇರಿಸಿದ್ರೆ, ಆಗೋ ಖುಷಿನೇ ಬೇರೆ. ಅದರಂತೆ ಭಾರತದ ಈ ಕ್ರಿಕಟರ್ ತಂದೆಯ ಕನಸನ್ನ ನನಸು ಮಾಡುವ ಹಾದಿಯತ್ತ ಸಾಗಿದ್ದಾನೆ. ಸೋಲಿನ ಸುಳಿಯಿಂದ ಭಾರತವನ್ನ ಕಾಪಾಡಿದ್ದಾನೆ. ಇಡೀ ಕ್ರಿಕೆಟ್ ಜಗತ್ತೇ ತನ್ನ ಬಗ್ಗೆ ಮಾತಾಡುವಂತೆ ಮಾಡಿದ್ದಾನೆ. ಅಷ್ಟಕ್ಕೂ ನಾವ್ಯಾರ ಬಗ್ಗೆ ಹೇಳ್ತೀದ್ದೀವಿ ಅನ್ಕೊಂಡ್ರಾ..? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ. 

ಸದ್ಯ ಭಾರತೀಯ ಕ್ರಿಕೆಟ್ನಲ್ಲಿ ಸಚಿನ್‌ರದ್ದೇ ಮಾತು..!

ಅಂಡರ್-19 ಏಕದಿನ ವಿಶ್ವಕಪ್ ಸಮರದಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡ್ತಿದೆ. ಸೋಲಿಲ್ಲದ ಸರದಾರನಂತೆ, ಫೈನಲ್ಗೆ ಎಂಟ್ರಿ ಕೊಟ್ಟಿದೆ. ಕಪ್ ಎತ್ತಿಹಿಡಿಯೋಕೆ ಒಂದೇ ಒಂದು ಹೆಜ್ಜೆ ದೂರದಲ್ಲಿದೆ. ಆದ್ರೆ, ಸಚಿನ್ ದಾಸ್ ಅನ್ನೋ ಹುಡುಗ ಅಬ್ಬರಿಸದೇ ಇದ್ರೆ, ಸೆಮಿಫೈನಲ್ನಲ್ಲೇ ಭಾರತೀಯ ಪಡೆ ಮಕಾಡೆ ಮಲಗ್ತಾ ಇತ್ತು. ಇಷ್ಟೊತ್ತಿಗೆ ಭಾರತದ ಫ್ಲೈಟ್ ಹತ್ತಬೇಕಿತ್ತು. 

ಡೆಲ್ಲಿ ಡ್ಯಾಶರ್ ರಿಷಭ್ ಪಂತ್ ಕಮ್‌ಬ್ಯಾಕ್ ಬಗ್ಗೆ ರಿಕಿ ಪಾಂಟಿಂಗ್ ಹೇಳಿದ್ದೇನು..?

ಯೆಸ್, ಸೆಮಿಫೈನಲ್ನಲ್ಲಿ  245 ರನ್ ಗುರಿ ಬೆನ್ನಟ್ಟಿದ್ದ ಭಾರತ, 32 ರನ್ಗೆ 4 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಇದ್ರಿಂದ ನಮಗಿನ್ನು ಸೋಲೆ ಗತಿ ಅಂತ ಭಾರತೀಯರು ಫಿಕ್ಸ್ ಆಗಿದ್ರು. ಆದ್ರೆ,  6ನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದಿದ್ದ ಸಚಿನ್ ದಾಸ್ ಮಾತ್ರ ಹೆದರಲಿಲ್ಲ. ಫಿಯರ್ಲೆಸ್ ಬ್ಯಾಟಿಂಗ್ ಮೂಲ್ಕ, ಹರಿಣಗಳ ಪಡೆಯ ಮೇಲೆ ಸವಾರಿ ಮಾಡಿದ್ರು. 

ಬೌಂಡರಿ, ಸಿಕ್ಸರ್ಗಳ ಮೂಲಕ ಸೌತ್ ಆಫ್ರಿಕಾದ ಡೆಡ್ಲಿ ಬೌಲಿಂಗ್ ಅಟ್ಯಾಕ್ನ ಧೂಳೀಪಟ ಮಾಡಿದ್ರು. ನಾಯಕ ಉದಯ್ ಸಹಾರಾನ್ ಜೊತೆಗೆ 171 ರನ್ಗಳ ಜೊತೆಯಾಟವಾಡ್ತಾರೆ. 95 ಎಸೆತಗಳಲ್ಲಿ 96 ರನ್ ಸಿಡಿಸಿ, ತಂಡವನ್ನ ಸೋಲಿನ ಸುಳಿಯಿಂದ ಕಾಪಾಡಿದ್ರು. ಸಚಿನ್ ಕೌಂಟರ್ ಅಟ್ಯಾಕ್ ಮಾಡದೇ ಇದ್ದಿದ್ರೆ, ಭಾರತದ ಗೆಲುವು ಸಾಧ್ಯವಾಗ್ತಿರಲಿಲ್ಲ. 

ಮಗನಿಗಾಗಿ ಸಚಿನ್ ತಂದೆ  ಪಟ್ಟ ಕಷ್ಟ ಸಾಮಾನ್ಯ ಅಲ್ಲ..!

ಸದ್ಯ ಕ್ರಿಕೆಟ್ ದುನಿಯಾದಲ್ಲಿ ಸಚಿನ್ ದಾಸ್ರದ್ದೇ ಮಾತು. ಆದ್ರೆ, ಸಚಿನ್ರ ಈ ಸಕ್ಸಸ್ಗೆ ಪ್ರಮುಖ ಕಾರಣಾನೇ ಅವ್ರ ತಂದೆ. ಮಗನನ್ನ ಕ್ರಿಕೆಟರ್ನನ್ನಾಗಿ ಮಾಡಲು ತಂದೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ.  ಸಚಿನ್ ಸ್ವಂತ ಊರು ಮಹಾರಾಷ್ಟ್ರದ ಬೀಡ್.10-12 ವರ್ಷಗಳ ಹಿಂದೆ ಆ ಊರಲ್ಲಿ ಒಂದೇ ಒಂದು ಟರ್ಫ್  ಪಿಚ್ ಇರಲಿಲ್ಲ. ಸಚಿನ್ ತಂದೆ ಸಂಜಯ್ ಸಚಿನ್ ತೆಂಡುಲ್ಕರ್ ಅವ್ರ ದೊಡ್ಡ ಫ್ಯಾನ್. ಮಗನನ್ನೂ ಸಚಿನ್ರಂತೆ ದೊಡ್ಡ ಬ್ಯಾಟ್ಸ್ಮನ್ ಆಗಿ ಮಾಡಬೇಕು ಅನ್ನೋದೆ ಸಂಜಯ್ ಕನಸು. ಅದೇ ಕಾರಣಕ್ಕೆ ಸಾಲ-ಸೋಲ ಮಾಡಿ, ಟರ್ಫ್ ಪಿಚ್ ನಿರ್ಮಾಣ ಮಾಡ್ತಾರೆ. ಅದೇ ಪಿಚ್ನಲ್ಲಿ ಸಚಿನ್, ಕೋಚ್ ಅಜರ್ ಗರಡಿಯಲ್ಲಿ ಬ್ಯಾಟಿಂಗ್ ಪಟ್ಟುಗಳನ್ನ ಕಲಿಯುತ್ತಾರೆ. 

ಧೋನಿಯಿಂದ ಪಾಂಡ್ಯವರೆಗೆ: IPL ಕ್ಯಾಪ್ಟನ್‌ಗಳ ಸಂಬಳ ಎಷ್ಟು? ಇಲ್ಲಿದೆ ಲೇಟೆಸ್ಟ್ ಅಪ್‌ಡೇಟ್

ಸಚಿನ್‌ರ ಅಸಲಿ  ಟ್ಯಾಲೆಂಟ್ ಹೊರಬಂದಿದ್ದು, 2023ರ ಮಹಾರಾಷ್ಟ್ರ ಪ್ರೀಮಿಯರ್ ಲೀಗ್ನಲ್ಲಿ. ಕೊಲ್ಹಾಪುರ್ ಟಸ್ಕರ್ಸ್ ಪರ  ಸಚಿನ್ ಅಬ್ಬರಿಸ್ತಾರೆ . ಇದೇ ಅವರಿಗೆ ಅಂಡರ್-19 ಟೀಂ ಇಂಡಿಯಾದಲ್ಲಿ ಚಾನ್ಸ್ ಸಿಗುವಂತೆ ಮಾಡುತ್ತೆ. ಅದರಂತೆ  ಸಚಿನ್ ಅಂಡರ್-19  ವಿಶ್ವಕಪ್ ಸಮರದಲ್ಲಿ ಮಿಂಚುತ್ತಿದ್ದಾರೆ. ಟೂರ್ನಿಯಲ್ಲಿ ಅತಿಹೆಚ್ಚು ರನ್ಗಳಿಸಿ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 

ಅದೇನೆ ಇರಲಿ, ಫೈನಲ್‌ನಲ್ಲೂ ಸಚಿನ್ ಆರ್ಭಟಿಸಲಿ. ಆ ಮೂಲಕ ಭಾರತಕ್ಕೆ ಅಂಡರ್-19 ವಿಶ್ವಕಪ್ ಗೆದ್ದುಕೊಡಲಿ ಅನ್ನೋದೆ ಭಾರತೀಯರ ಆಶಯ. 

- ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 
 

Follow Us:
Download App:
  • android
  • ios