ಡೆಲ್ಲಿ ಡ್ಯಾಶರ್ ರಿಷಭ್ ಪಂತ್ ಕಮ್‌ಬ್ಯಾಕ್ ಬಗ್ಗೆ ರಿಕಿ ಪಾಂಟಿಂಗ್ ಹೇಳಿದ್ದೇನು..?

ರಿಷಭ್ ಪಂತ್.! ಟೀಂ ಇಂಡಿಯಾದ ಈ ಡೈನಾಮಿಕ್ ಪ್ಲೇಯರ್, ಇಂಜುರಿಯಿಂದಾಗಿ ಸದ್ಯ ತಂಡದಿಂದ ಹೊರಗುಳಿದಿದ್ದಾರೆ. 2022ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಪಂತ್, ಬದುಕುಳಿದಿದ್ದೇ ಪವಾಡ. ಡೆಡ್ಲಿ ಆ್ಯಕ್ಸಿಡೆಂಟ್ ನಂತರ ಆಸ್ಪತ್ರೆಯಲ್ಲಿ ಹಲವು ದಿನಗಳ ಕಾಲ ಚಿಕಿತ್ಸೆ ಪಡೆದ ಡೆಲ್ಲಿ ಡ್ಯಾಶರ್, ಸದ್ಯ  ಚೇತರಿಸಿಕೊಳ್ತಿದ್ದಾರೆ. 

Rishabh Pant is very confident of playing entire IPL 2024 says Ricky Ponting kvn

ಬೆಂಗಳೂರು(ಫೆ.08): ಡೆಲ್ಲಿ ಡ್ಯಾಶರ್ ರಿಷಬ್ ಪಂತ್ ಕಮ್‌ಬ್ಯಾಕ್ ಯಾವಾಗ..? ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ಸುದ್ದಿ ಪಂತ್ ಅಭಿಮಾನಿಗಳ ಪಾಲಿಗೆ ಗುಡ್ ಮತ್ತು ಬ್ಯಾಡ್ ನ್ಯೂಸ್ ಎರಡೂ ಆಗಿದೆ. ಅಷ್ಟಕ್ಕೂ ಪಂತ್ ಯಾವಾಗ ಮತ್ತೆ ಕ್ರಿಕೆಟ್ ಅಂಗಳದಲ್ಲಿ ಅಬ್ಬರಿಸ್ತಾರೆ.? ಈ ಗುಡ್ & ಬ್ಯಾಡ್ ನ್ಯೂಸ್ ಏನು ಅಂತೀರಾ..? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್..! 

ರಿಷಭ್ ಪಂತ್ ಕಮ್‌ಬ್ಯಾಕ್ ಯಾವಾಗ ಗೊತ್ತಾ..? 

ರಿಷಭ್ ಪಂತ್.! ಟೀಂ ಇಂಡಿಯಾದ ಈ ಡೈನಾಮಿಕ್ ಪ್ಲೇಯರ್, ಇಂಜುರಿಯಿಂದಾಗಿ ಸದ್ಯ ತಂಡದಿಂದ ಹೊರಗುಳಿದಿದ್ದಾರೆ. 2022ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಪಂತ್, ಬದುಕುಳಿದಿದ್ದೇ ಪವಾಡ. ಡೆಡ್ಲಿ ಆ್ಯಕ್ಸಿಡೆಂಟ್ ನಂತರ ಆಸ್ಪತ್ರೆಯಲ್ಲಿ ಹಲವು ದಿನಗಳ ಕಾಲ ಚಿಕಿತ್ಸೆ ಪಡೆದ ಡೆಲ್ಲಿ ಡ್ಯಾಶರ್, ಸದ್ಯ  ಚೇತರಿಸಿಕೊಳ್ತಿದ್ದಾರೆ. 

NCAನಲ್ಲಿ ಬೀಡು ಬಿಟ್ಟಿರೋ ಪಂತ್, ಹೈಸ್ಪೀಡ್ನಲ್ಲಿ ರಿಕವರಿ ಆಗ್ತಿದ್ದಾರೆ.  ಪಂತ್‌ರನ್ನ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕಣಕ್ಕಿಳಿಸಬೇಕನ್ನೋದು BCCI ಪ್ಲಾನ್ ಆಗಿತ್ತು. ಆದ್ರೆ, ಅದು ಆಗಲಿಲ್ಲ. ಆದ್ರೀಗ, IPLನಲ್ಲಿ ಪಂತ್ ಆಡೋದು ಪಕ್ಕಾ ಆಗಿದೆ. ಈ ಸುದ್ದಿ ಕೇಳಿ ಪಂತ್ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. 

IPL ಆರಂಭಕ್ಕೂ ಮುನ್ನ ದೈವಿಶಕ್ತಿಯ ಮೊರೆಹೋದ ಧೋನಿ..! ಮಹಿ ಆರಾಧಿಸ್ತಿರೋ ಆ ಅಧಿದೇವತೆ ಯಾರು ಗೊತ್ತಾ..?

ಹೌದು, ಡೆಲ್ಲಿ ಕ್ಯಾಪಿಟಲ್ ತಂಡದ ಹೆಡ್ಕೋಚ್ ರಿಕಿ ಪಾಂಟಿಂಗ್ IPL 2024ರಲ್ಲಿ ಪಂತ್ ಆಡಲಿದ್ದಾರೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದ್ರೆ, ಪಂತ್ ವಿಕೆಟ್ ಕೀಪಿಂಗ್ ಮಾಡ್ತಾರಾ..? ನಾಯಕನಾಗಿ ತಂಡವನ್ನ ಮುನ್ನಡೆಸ್ತಾರಾ..? ಅನ್ನೋ ಬಗ್ಗೆ ಯಾವುದೇ ಕ್ಲಾರಿಟಿಯನ್ನ ಪಾಂಟಿಂಗ್ ನೀಡಿಲ್ಲ. ಪಂತ್ IPL ಕಮ್‌ಬ್ಯಾಕ್ ಬಗ್ಗೆ ಪಾಂಟಿಂಗ್ ಏನ್ ಹೇಳಿದ್ದಾರೆ ಅಂತ ನೋಡೋದಾದ್ರೆ. 

ರಿಷಭ್ ಪಂತ್ IPL ಆಡ್ತಾರೆ ಅನ್ನೋ ನಂಬಿಕೆಯಲ್ಲಿದ್ದೇವೆ. ಆದ್ರೆ, ಯಾವ ರೂಪದಲ್ಲಿ ಕಾಣಿಸಿಕೊಳ್ತಾರೆ ಅಂತ ಹೇಳೋಕೆ ಆಗಲ್ಲ. ಸೋಷಿಯಲ್ ಮೀಡಿಯಾದಲ್ಲಿ ಪಂತ್ ವರ್ಕೌಟ್ ವೀಡಿಯೋಗಳನ್ನ ನೋಡಿದ್ರೆ, ವೇಗವಾಗಿ ಓಡುತ್ತಿದ್ದಾನೆ. ಫಿಟ್ ಆಗಿ ಕಾಣಿಸುತ್ತಿದ್ದಾನೆ. 4ನೇ ಸ್ಥಾನದಲ್ಲಿ ಆಡಲು ಸಿದ್ಧನಿದ್ದೇನೆ ಅಂತ ನಮ್ಮ ಬಳಿ ಹೇಳಿದ್ದಾನೆ. IPL ಆರಂಭಕ್ಕಿನ್ನು ಆರು ವಾರ ಬಾಕಿಯಿದೆ. ಹೀಗಾಗಿ ಪಂತ್ ವಿಕೆಟ್ ಕೀಪಿಂಗ್ ಮಾಡ್ತಾರಾ..? ನಾಯಕನಾಗಿ ಇರ್ತಾರಾ ಅಂತ ಸ್ಪಷ್ಟವಾಗಿ ಈಗಲೇ ಹೇಳಲು ಆಗಲ್ಲ ಅಂತ ಪಾಂಟಿಂಗ್ ತಿಳಿಸಿದ್ದಾರೆ. 

ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಸಲು ಪ್ಲಾನ್..?

ಯೆಸ್, ಒಂದು ವೇಳೆ ಪಂತ್ ಕಂಪ್ಲೀಟ್ ಫಿಟ್ ಆಗದೇ ಇದ್ರೆ, ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿಸಲು ಫ್ರಾಂಚೈಸಿ ಪ್ಲಾನ್ ಮಾಡಿದೆ. ಈ ಕುರಿತು ಈಗಾಗ್ಲೇ ತಂಡದ ಕೋಚ್ ರಿಕಿ ಪಾಂಟಿಂಗ್ ಮತ್ತು ಡೈರೆಕ್ಟರ್ ಸೌರವ್ ಗಂಗೂಲಿಯೊಂದಿಗೆ ಮಾತುಕತೆ ನಡೆಸಿದೆ. ಡೆಲ್ಲಿ ತಂಡದ ಮಿಡಲ್ ಆರ್ಡರ್ ತುಂಬಾನೇ ವೀಕ್ ಆಗಿದೆ. ಕಳೆದ ಸೀಸನ್ನಲ್ಲಿ ಒಂದೇ ಒಂದು ಪಂದ್ಯದಲ್ಲೂ ಮಿಡಲ್ ಆರ್ಡರ್ ಬ್ಯಾಟರ್ಸ್ ತಂಡಕ್ಕೆ ಗೆಲುವು ತಂದುಕೊಟ್ಟಿರಲಿಲ್ಲ. ಪಂತ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬ್ಯಾಟಿಂಗ್ ಮಾಡಿದಲ್ಲಿ, ಡಿಸಿ ಬ್ಯಾಟಿಂಗ್ ಬಲ ಹೆಚ್ಚಲಿದೆ. 

'ಸಪೋರ್ಟ್ ಮಾಡೋರು ಕೆಲವರು, ಆದ್ರೆ....?' ಟೀಕಾಕಾರರಿಗೆ ಮಾರ್ಮಿಕವಾಗಿ ತಿವಿದು ಪೋಸ್ಟ್ ಹಾಕಿದ ಜಸ್ಪ್ರೀತ್ ಬುಮ್ರಾ..!

ಟೀಂ ಇಂಡಿಯಾಗೆ ಕಾಡ್ತಿದೆ ಪಂತ್ ಅಲಭ್ಯತೆ

ಟೀಂ ಇಂಡಿಯಾಗೂ ಪಂತ್ ಅಲಭ್ಯತೆ ಕಾಡ್ತಿದೆ. WTC ಫೈನಲ್, ಸೇರಿದಂತೆ ಏಕದಿನ ವಿಶ್ವಕಪ್ನಲ್ಲೂ ಇದು ಸಾಬೀತಾಗಿದೆ. ವರ್ಲ್ಡ್‌ಕಪ್ ಫೈನಲ್ನಲ್ಲಿ ಪಂದ್ಯದಲ್ಲಿ ಆಸಿಸ್ ವಿರುದ್ಧ ಕೌಂಟರ್ ಅಟ್ಯಾಕ್ ಮಾಡಬಲ್ಲ ಬ್ಯಾಟರ್‌ ಕೊರತೆ ಟೀಂ ಇಂಡಿಯಾಗೆ ಕಾಡಿತ್ತು. ಅದೇನೆ ಇರಲಿ, ಪಂತ್ ಆದಷ್ಟು ಬೇಗ ಗುಣಮುಖರಾಗಿ, ಮತ್ತೆ ಬ್ಯಾಟ್ ಹಿಡಿದು ಅಬ್ಬರಿಸಲಿ ಅನ್ನೋದೆ ಅಭಿಮಾನಿಗಳ ಆಶಯವಾಗಿದೆ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 
 

Latest Videos
Follow Us:
Download App:
  • android
  • ios