Asianet Suvarna News Asianet Suvarna News

ಟೆಸ್ಟ್‌ ವಿಶ್ವಕಪ್‌ ಫೈನಲ್‌ ಡ್ರಾ ಆದರೆ ಕಪ್‌ ಯಾರ ಪಾಲಾಗುತ್ತೆ?

* ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಸಜ್ಜಾಗಿರುವ ಭಾರತ-ನ್ಯೂಜಿಲೆಂಡ್‌

* ಜೂನ್‌ 18ರಿಂದ 22ರವರೆಗೆ ನಡೆಯಲಿದೆ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌

* ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದ ರೂಲ್ಸ್‌ ಬಗ್ಗೆ ಹೆಚ್ಚಿನ ಮಾಹಿತಿ ಕೇಳಿದ ಬಿಸಿಸಿಐ

What if WTC final between India and New Zealand ends in draw or washout ICC to update rules shortly kvn
Author
New Delhi, First Published May 20, 2021, 10:33 AM IST

ನವದೆಹಲಿ(ಮೇ.20): 2019ರ ಐಸಿಸಿ ಏಕದಿನ ವಿಶ್ವಕಪ್‌ ಫೈನಲ್‌ ವೇಳೆ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್‌ ನಡುವಿನ ಫೈನಲ್‌ ಪಂದ್ಯದಲ್ಲಿ ಪಂದ್ಯ ಟೈ ಆಗಿ ಸೂಪರ್ ಓವರ್ ಕೂಡಾ ಟೈ ಆಗಿದ್ದರಿಂದ ಬೌಂಡರಿ ಕೌಂಟ್ ಆಧಾರದಲ್ಲಿ ಇಂಗ್ಲೆಂಡ್ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗಿತ್ತು. ಇದು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.  

ಇದೀಗ ಜೂನ್ 18ರಿಂದ ನ್ಯೂಜಿಲೆಂಡ್‌ ವಿರುದ್ಧ ಸೌಥಾಂಪ್ಟನ್‌ನಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯಕ್ಕೆ ಸಂಬಂಧಿಸಿದ ಕೆಲ ಪ್ರಮುಖ ಮಾಹಿತಿಯನ್ನು ತಿಳಿಸುವಂತೆ ಐಸಿಸಿಯನ್ನು ಬಿಸಿಸಿಐ ಕೇಳಿದೆ. 

ಏಕೈಕ ಪಂದ್ಯವಾಗಿರುವ ಕಾರಣ, ಪಂದ್ಯ ಡ್ರಾ ಆದರೆ ಇಲ್ಲವೇ ಟೈ ಆದರೆ ಟ್ರೋಫಿ ಯಾರಿಗೆ ಸಿಗಲಿದೆ. ಮಳೆ ಇಲ್ಲವೇ ಮತ್ತ್ಯಾವುದೇ ಕಾರಣಗಳಿಂದ ಪಂದ್ಯ ಒಂದೂ ಇನ್ನಿಂಗ್ಸ್‌ ಪೂರ್ಣಗೊಳ್ಳದೆ ರದ್ದಾದರೆ ಆಗ ಯಾರ ಪರ ಫಲಿತಾಂಶ ಹೊರಬೀಳಲಿದೆ ಎನ್ನುವ ಪ್ರಶ್ನೆಗಳನ್ನು ಬಿಸಿಸಿಐ ಕೇಳಿದೆ. ಐಸಿಸಿ ಸದ್ಯದಲ್ಲೇ ಮಾಹಿತಿ ಒದಗಿಸಲಿದೆ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.

ಟೀಂ ಇಂಡಿಯಾ ಕ್ರಿಕೆಟಿಗರು ಬುಧವಾರ ಮುಂಬೈಗೆ ಎಂಟ್ರಿ..!
 
ಚೊಚ್ಚಲ ಆವೃತ್ತಿಯ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಹಾಗೂ ಕೇನ್‌ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡಗಳು ಕಾದಾಡಲಿದೆ. ಐಸಿಸಿ ಟೆಸ್ಟ್ ಕ್ರಿಕೆಟ್ ವಿಶ್ವಕಪ್ ಎಂದೇ ಬಿಂಬಿತವಾಗಿರುವ ಈ ಟೂರ್ನಿಯಲ್ಲಿ ಕಪ್‌ ಯಾರ ಪಾಲಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Follow Us:
Download App:
  • android
  • ios